ನವದೆಹಲಿ: ಮುಂಬೈಗೆ ಹೋಗುವ ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಇತರ ನಾಲ್ವರು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಲಕ್ನೋ-ಮುಂಬೈಗೆ ತೆರಳುವ ಪುಷ್ಪಕ್ ಎಕ್ಸ್‌ಪ್ರೆಸ್ ಒಳಗೆ ಇಗತ್ಪುರಿ ನಿಲ್ದಾಣದಿಂದ ಹೊರಟಾಗ ಈ ಭಯಾನಕ ಕೃತ್ಯ ನಡೆದಿದೆ, ಇದು ತಾಂತ್ರಿಕ ನಿಲುಗಡೆ ನಿಲ್ದಾಣ ಎಂದು ಹೇಳಲಾಗಿದೆ.ಮುಂಬೈ ಜಿಆರ್‌ಪಿಯ ಪೊಲೀಸ್ ಆಯುಕ್ತರಾದ ಕ್ವೈಸರ್ ಖಾಲಿದ್ ಅವರು, ಘಾಟ್ ವಿಭಾಗದಲ್ಲಿ ಎಕ್ಸ್‌ಪ್ರೆಸ್ ರೈಲು ಸಂಚರಿಸುವಾಗ ಈ ಅಪರಾಧ ನಡೆದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ - Delhi vs Bangalore: RCB ಗೆ ಒಂದು ರನ್ ಗಳ ರೋಚಕ ಗೆಲುವು
ಎಂಟು ಜನರು ಬಲವಾಗಿ ಪುಷ್ಪಕ್ ರೈಲಿನ ಒಂದು ವಿಭಾಗವನ್ನು ಪ್ರವೇಶಿಸಿ ಪ್ರಯಾಣಿಕರನ್ನು ಲೂಟಿ ಮಾಡಲು ಪ್ರಾರಂಭಿಸಿದರು ಎಂದು ವರದಿಗಳು ಸೂಚಿಸುತ್ತವೆ. ಎಂಟು ಆರೋಪಿಗಳು ತಮ್ಮೊಂದಿಗೆ ಚಾಕುಗಳನ್ನು ಹಿಡಿದುಕೊಂಡು 20 ಕ್ಕೂ ಹೆಚ್ಚು ಪ್ರಯಾಣಿಕರನ್ನು ಲೂಟಿ ಮಾಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಕನಿಷ್ಠ ಐದು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ: Madhu Bangarappa: 'ಮಧು ಬಂಗಾರಪ್ಪಗೆ ಕಾಂಗ್ರೆಸ್‌ಗೆ ಸ್ವಾಗತ : ಆದ್ರೆ ಮತ್ತೋರ್ವಗೆ ಅವಕಾಶವಿಲ್ಲ'
ಇದಾದ ನಂತರ, ಎಂಟು ಆರೋಪಿಗಳು ಇಪ್ಪತ್ತರ ಹರೆಯದ ಮಹಿಳೆಯ ಮೇಲೆ ಹಲ್ಲೆ ಮಾಡಿ ಕಾಸರ ನಿಲ್ದಾಣವನ್ನು ತಲುಪುವವರೆಗೂ ಮಹಿಳೆಯನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಮಹಿಳೆಯನ್ನು ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.
"ಸಂತ್ರಸ್ತೆಗೆ ಇಪ್ಪತ್ತು ವರ್ಷ ಮತ್ತು ಆಕೆಯನ್ನು ನಮ್ಮ ಮಹಿಳಾ ಅಧಿಕಾರಿಯಿಂದ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ.ಅವಳು ಚೆನ್ನಾಗಿದ್ದಾಳೆ. ನಾವು ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇವೆ. ಆರೋಪಿಗಳನ್ನು ನಮ್ಮ ತಂಡವು ಪ್ರಶ್ನಿಸುತ್ತಿದೆ. ನಾವು ಅವರ ಹಿಂದಿನ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ" ಎಂದು ಪೊಲೀಸರು ಹೇಳಿದ್ದಾರೆ.
ಈ ಹಿಂದೆ ಇದೇ ರೀತಿಯ ಅಪರಾಧವನ್ನು ಈ ಗುಂಪು ಮಾಡಿರುವುದನ್ನು ಪತ್ತೆ ಮಾಡಲು ಆರೋಪಿಗಳ ಹಿನ್ನೆಲೆಯನ್ನು ತನಿಖೆ ಮಾಡುತ್ತಿರುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ-"ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡಕ್ಕೆ ಪೂರ್ಣಾವಧಿ ಕೋಚ್ ಆಗಬಾರದು"
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.