ಹೊಸ ತೆರಿಗೆ ಸ್ಲ್ಯಾಬ್‌ನಲ್ಲಿ 12 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ವಿನಾಯಿತಿ..! ಇಲ್ಲಿದೆ ಮಹತ್ವದ ಮಾಹಿತಿ

Income Tax: ಬಜೆಟ್ 2025ರ ಪ್ರಮುಖ ಘೋಷಣೆ ಎಂದರೆ 12 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ ಎಂಬುದಾಗಿದೆ. ಆದರೆ, 12 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ವಿನಾಯಿತಿ ಪಡೆಯುವುದು ಹೇಗೆ ಎಂಬುದನ್ನೂ ಕೂಡ ತಿಳಿದಿರಬೇಕು. 

Written by - Yashaswini V | Last Updated : Feb 3, 2025, 11:41 AM IST
  • ಹೊಸ ತೆರಿಗೆ ಸ್ಲ್ಯಾಬ್‌ನ ಅಡಿಯಲ್ಲಿ, ವಾರ್ಷಿಕ 12 ಲಕ್ಷದವರೆಗೆ ವರಮಾನ ಹೊಂದಿರುವ ವ್ಯಕ್ತಿಗಳು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 87A ಅಡಿಯಲ್ಲಿ ಸಂಪೂರ್ಣ ತೆರಿಗೆ ರಿಯಾಯಿತಿಯನ್ನು ಪಡೆಯಬಹುದು.
  • ಇದು 75,000 ರೂ.ಗಳ ಸ್ಟಾಂಡರ್ಡ್ ಡಿಡಕ್ಷನ್ ಅನ್ನು ಸಹ ಒಳಗೊಂಡಿರುತ್ತದೆ.
  • ಆದಾಗ್ಯೂ, ಇದು ವಿಶೇಷ ದರದ ಆದಾಯಗಳನ್ನು ಒಳಗೊಂಡಿರುವುದಿಲ್ಲ.
ಹೊಸ ತೆರಿಗೆ ಸ್ಲ್ಯಾಬ್‌ನಲ್ಲಿ 12 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ವಿನಾಯಿತಿ..!  ಇಲ್ಲಿದೆ ಮಹತ್ವದ ಮಾಹಿತಿ  title=

Income Tax News: ಫೆಬ್ರವರಿ 01ರಂದು ಮಂಡನೆಯಾದ 2025ರ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ತೆರಿಗೆ ಸ್ಲ್ಯಾಬ್‌ಗಳನ್ನು ಘೋಷಿಸುವ ಮೂಲಕ ತೆರಿಗೆದಾರರು ಮತ್ತು ಮಧ್ಯಮ ವರ್ಗದ ಜನರಿಗೆ ಬಂಪರ್ ಗುಡ್ ನ್ಯೂಸ್ ನೀಡಿದ್ದಾರೆ. ಹೊಸ ತೆರಿಗೆ ಸ್ಲ್ಯಾಬ್‌ಗಳ ಪ್ರಕಾರ, ವಾರ್ಷಿಕ  12 ಲಕ್ಷದವರೆಗಿನ ಆದಾಯವನ್ನು ತೆರಿಗೆ ಮುಕ್ತ ಎಂದು ಘೋಷಿಸಲಾಗಿದೆ. 

ವಾಸ್ತವವಾಗಿ, ಹಲವು ತೆರಿಗೆದಾರರು 12 ಲಕ್ಷ ರೂ.ವರೆಗಿನ ಆದಾಯವನ್ನು ಸಂಪೂರ್ಣವಾಗಿ ತೆರಿಗೆ ಮುಕ್ತ ಎಂದು ಭಾವಿಸಿದ್ದಾರೆ. ಆದರೆ, ಅದು ಹೇಗೆ ಸಾಧ್ಯ. 12 ಲಕ್ಷಕ್ಕಿಂತ ಹೆಚ್ಚಿನ ಆದಾಯವಿದ್ದರೆ ತೆರಿಗೆ ಪ್ರಯೋಜನ ಪಡೆಯುವುದು ಹೇಗೆ ಎಂಬ ಮಾಹಿತಿ ತಿಳಿಯಲು ಮುಂದೆ ಓದಿ... 

ಇದನ್ನೂ ಓದಿ- Ration Card: APL, BPL ಕಾರ್ಡ್ ಅಲ್ಲದೆ ಇವೆ ಇನ್ನೂ ಹಲವು ಬಗೆಯ ರೇಷನ್ ಕಾರ್ಡುಗಳು... ಯಾವ ಕಾರ್ಡ್ ಯಾರಿಗೆ? 

ಹೊಸ ತೆರಿಗ್ ಸ್ಲ್ಯಾಬ್‌ಗಳು ಕೆಳಕಂಡಂತಿವೆ: 
* ₹ 0- ₹4 ಲಕ್ಷದವರೆಗೆ ಆದಾಯಕ್ಕೆ 'ಶೂನ್ಯ ತೆರಿಗೆ' 
* ₹ 4 ಲಕ್ಷದಿಂದ - ₹ 8 ಲಕ್ಷದವರೆಗೆ ಆದಾಯಕ್ಕೆ '5% ತೆರಿಗೆ' 
* ₹ 8 ಲಕ್ಷದಿಂದ - ₹12 ಲಕ್ಷದವರೆಗೆ ಆದಾಯಕ್ಕೆ '10% ತೆರಿಗೆ' 
* ₹ 12 ಲಕ್ಷದಿಂದ - ₹ 16 ಲಕ್ಷದವರೆಗೆ ಆದಾಯಕ್ಕೆ '15% ತೆರಿಗೆ' 
* ₹ 16 ಲಕ್ಷದಿಂದ - ₹20 ಲಕ್ಷದವರೆಗಿನ ಆದಾಯಕ್ಕೆ '20% ತೆರಿಗೆ' 

ಆದಾಯ ತೆರಿಗೆ ವಿನಾಯಿತಿಯು ಸಂಬಳ ಪಡೆಯುವ ವ್ಯಕ್ತಿಗಳಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಕನಿಷ್ಠ ಪ್ರಯೋಜನ ನೀಡುವ ಗುರಿಯನ್ನು ಹೊಂದಿದ್ದರೂ ವಿಶೇಷ ವರ್ಗದ ಆದಾಯಕ್ಕೆ ಇದು ಅನ್ವಯಿಸುವುದಿಲ್ಲ. 

ಹೊಸ ತೆರಿಗೆ ಸ್ಲ್ಯಾಬ್‌ನ ಅಡಿಯಲ್ಲಿ, ವಾರ್ಷಿಕ 12 ಲಕ್ಷದವರೆಗೆ ವರಮಾನ ಹೊಂದಿರುವ ವ್ಯಕ್ತಿಗಳು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 87A ಅಡಿಯಲ್ಲಿ ಸಂಪೂರ್ಣ ತೆರಿಗೆ ರಿಯಾಯಿತಿಯನ್ನು ಪಡೆಯಬಹುದು. ಇದು 75,000 ರೂ.ಗಳ ಸ್ಟಾಂಡರ್ಡ್ ಡಿಡಕ್ಷನ್ ಅನ್ನು ಸಹ ಒಳಗೊಂಡಿರುತ್ತದೆ. ಆದಾಗ್ಯೂ, ಇದು ವಿಶೇಷ ದರದ ಆದಾಯಗಳನ್ನು ಒಳಗೊಂಡಿರುವುದಿಲ್ಲ. 

ಇದನ್ನೂ ಓದಿ- 2025-26ರ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಏನು ಸಿಕ್ಕಿದೆ? ಹೊಸ ತೆರಿಗೆ ಪದ್ಧತಿ ಬಗ್ಗೆ ತಿಳಿಯಿರಿ

ಉದಾಹರಣೆಗೆ, ವ್ಯಕ್ತಿಯೊಬ್ಬರು ಸಂಬಳ ಹಾಗೂ ಇತರೆ ಮೂಲಗಳಿಂದ 8 ಲಕ್ಷ ರೂ. ಆದಾಯ ಗಳಿಸುತ್ತಾರೆ. ಷೇರುಗಳು ಅಥವಾ ಮ್ಯೂಚುವಲ್ ಫಂಡ್‌ಗಳ ಮೇಲಿನ ಅಲ್ಪಾವಧಿಯ ಬಂಡವಾಳ ಲಾಭದಿಂದ (ಎಸ್‌ಟಿ‌ಸಿ‌ಜಿ) ಸುಮಾರು 4 ಲಕ್ಷ ರೂ. ಆದಾಯ ಬರುತ್ತದೆ ಎಂದು ಭಾವಿಸೋಣ.  ಇಂತಹ ಸಂದರ್ಭದಲ್ಲಿ, ಸೆಕ್ಷನ್ 87A ತೆರಿಗೆ ರಿಯಾಯಿತಿಯು 8 ಲಕ್ಷ ಸಂಬಳದ ಆದಾಯಕ್ಕೆ ಮಾತ್ರ ಅನ್ವಯಿಸುತ್ತದೆ. ಉಳಿದಂತೆ ಎಸ್‌ಟಿ‌ಸಿ‌ಜಿ ಆದಾಯ 4 ಲಕ್ಷ ರೂ.ಗಳಿಗೆ ಪ್ರತ್ಯೇಕ 20% ತೆರಿಗೆ ವಿಧಿಸಲಾಗುತ್ತದೆ. ಇದಲ್ಲದೆ ಈಕ್ವಿತಿಗಳ ಮೇಲೆ ದೀರ್ಘಾವಧಿಯ ಬಂಡವಾಳದ ಲಾಭಗಳಿಗೆ 12.5% ತೆರಿಗೆ ವಿಧಿಸಲಾಗುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News