Dandruff Problem: ರಾಸಾಯನಿಕ ಶ್ಯಾಂಪೂಗಳನ್ನು ಬಳಸುವ ಬದಲು ನೀವು ಮನೆಯಲ್ಲಿಯೇ ನೈಸರ್ಗಿಕ ಪದಾರ್ಥಗಳನ್ನು ಬಳಿಸಿ ತಲೆಹೊಟ್ಟು ನಿವಾರಣೆ ಮಾಡಿಕೊಳ್ಳಬಹುದು.
Dandruff Problem: ಆಧುನಿಕ ಜೀವನ ಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಬಹುತೇಕ ಜನರು ತಲೆಹೊಟ್ಟಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ತಲೆಹೊಟ್ಟನ್ನು ನಿವಾರಿಸಿಕೊಳ್ಳುವುದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಯಾವುದ್ಯಾವುದೋ ರಾಸಾಯನಿಕ ಶ್ಯಾಂಪೂಗಳನ್ನು ಬಳಸಿ ಸೋತು ಹೋಗುತ್ತಾರೆ. ಆದರೆ ಅದೆಲ್ಲವನ್ನು ಬಿಟ್ಟು ಮನೆಯಲ್ಲಿಯೇ ನೈಸರ್ಗಿಕ ಪದಾರ್ಥಗಳನ್ನು ಬಳಿಸಿ ತಲೆಹೊಟ್ಟು ನಿವಾರಣೆ ಮಾಡಿಕೊಳ್ಳಬಹುದಾಗಿದೆ. ನಿಮ್ಮನ್ನು ಇನ್ನಿಲ್ಲದಂತೆ ಕಾಡುವ ತಲೆಹೊಟ್ಟಿನ ಸಮಸ್ಯೆಗೆ ಪವರ್ಫುಲ್ ಮನೆ ಮದ್ದುಗಳು ಇಲ್ಲಿವೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ತೆಂಗಿನ ಎಣ್ಣೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ತಲೆಹೊಟ್ಟು ಸಮಸ್ಯೆಯನ್ನ ನಿವಾರಿಸುತ್ತವೆ. ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗೆ ತೆಂಗಿನ ಎಣ್ಣೆಯನ್ನು ಕಾಯಿಸಿ ತಲೆಗೆ ಮಸಾಜ್ ಮಾಡಿಕೊಂಡು ಮಲಗಬೇಕು. ನಂತರ ಬೆಳಗ್ಗೆ ಎದ್ದು ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡುವುದರಿಂದ ಹೊಟ್ಟು ಕಡಿಮೆಯಾಗುತ್ತದೆ. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಿಸಿಕೊಳ್ಳಬಹುದು.
ಅಡಿಗೆ ಸೋಡಾ ತಲೆಹೊಟ್ಟಿಗೆ ಒಂದು ಸ್ಕ್ರಬ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವ ಮೂಲಕ ನಿಧಾನವಾಗಿ ತಲೆಹೊಟ್ಟನ್ನು ಹೊರಹಾಕುತ್ತದೆ. ಒದ್ದೆಯಾದ ಕೂದಲಿಗೆ ನೇರವಾಗಿ ಅಡಿಗೆ ಸೋಡಾವನ್ನು ಹಾಕಿ ಅದನ್ನು ನಿಮ್ಮ ನೆತ್ತಿಗೆ ಮಸಾಜ್ ಮಾಡಿ. ಒಂದು ನಿಮಿಷ ಅಥವಾ ಎರಡು ನಿಮಿಷಗಳ ಕಾಲ ಹಾಗೆ ಬಿಡಿ, ನಂತರ ನಿಮ್ಮ ಕೂದಲನ್ನು ನೀರಿನಿಂದ ತೊಳೆಯಿರಿ.
ತಲೆಹೊಟ್ಟು ಚಿಕಿತ್ಸೆಗಾಗಿ ನೀವು ಬೆಳ್ಳುಳ್ಳಿಯನ್ನು ಸಹ ಬಳಸಬಹುದು. ಮೊದಲಿಗೆ ಒಂದು ಅಥವಾ ಎರಡು ಬೆಳ್ಳುಳ್ಳಿಗಳನ್ನು ಪುಡಿಮಾಡಿ ನಂತರ ನೀರಿನಲ್ಲಿ ಮಿಶ್ರಣ ಮಾಡಿ ಅದನ್ನು ನಿಮ್ಮ ನೆತ್ತಿಗೆ ಹಚ್ಚಿ. ಕೆಲ ಹೊತ್ತಿನ ಬಳಿಕ ತಲೆ ಸ್ನಾನ ಮಾಡಿ.
ಅಲೋವೆರಾ ತಲೆಯನ್ನು ತಂಪಾಗಿಡುವುದು ಮಾತ್ರವಲ್ಲದೆ ನೆತ್ತಿಯಲ್ಲಿನ ಹೊಟ್ಟನ್ನು ಹೊರಹಾಕುತ್ತದೆ. ನೀವು ಅಲೋವೆರಾದಿಂದ ತೆಗೆದ ಜೆಲ್ಅನ್ನು ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಿ. ಸುಮಾರು 20 ರಿಂದ 30 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ತಲೆ ತೊಳೆದುಕೊಳ್ಳಿ.
ಮೆಂತ್ಯ ಬೀಜವನ್ನು ಅರೆದು ಪೇಸ್ಟ್ ಮಾಡಿ ತಲೆಕೂದಲಿಗೆ ಹಚ್ಚಿದರೆ ತಲೆ ಹೊಟ್ಟು ಕಡಿಮೆಯಾಗುವುದು. ಕೊಬ್ಬರಿ ಎಣ್ಣೆಯಲ್ಲಿ ಮೆಂತ್ಯ ಬೀಜಗಳನ್ನು ನೆನೆಸಿ ಅದನ್ನು ತಲೆಗೆ ಬಳಸಿದರೆ ಅದರ ಔಷಧೀಯ ಗುಣದಿಂದ ತಲೆಗೆ ತಂಪು ಕೊಡುವುದರ ಜೊತೆಗೆ ಹೊಟ್ಟಿನ ಸಮಸ್ಯೆ ನಿವಾರಣೆಗೆ ರಾಮಬಾಣವಾಗಿದೆ.
ಮುಕ್ಕಾಲು ಕಪ್ ಮೊಸರಿಗೆ ನಿಂಬೆರಸ ಹಿಂಡಿ ತಲೆಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ನಿಮ್ಮ ತಲೆ ಕೂದಲು ಶೈನಿಂಗ್ ಜೊತೆ ಹೊಟ್ಟಿನ ನಿವಾರಣೆ ಕೂಡ ಆಗುತ್ತದೆ. ಇದು ಅತಿ ಸುಲಭವಾದ ನೈಸರ್ಗಿಕ ವಿಧಾನವಾಗಿದೆ.
ಮೊಟ್ಟೆಯ ಬಿಳಿ ಭಾಗವನ್ನು ಸ್ವಲ್ಪ ನಿಂಬೆ ರಸ ಹಾಕಿ ಅದನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಬೇಕು. ಇದರಿಂದ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.
ಶುಂಠಿಯನ್ನು ಆಲಿವ್ ಎಣ್ಣೆಗೆ ಸೇರಿಸಿ ಬಿಸಿ ಮಾಡಿ ಸ್ನಾನಕ್ಕೆ ಹೋಗುವ ಕೆಲವು ನಿಮಿಷಗಳ ಮುನ್ನ ತಲೆಗೆ ಹಚ್ಚಿ ಮಸಾಜ್ ಮಾಡಿಕೊಂಡು 5 ನಿಮಿಷದ ನಂತರ ಸ್ನಾನ ಮಾಡಿದರೆ ಬೇಗನೆ ತಲೆಹೊಟ್ಟು ತೊಲಗುತ್ತದೆ.
ಒಂದು ಚಮಚ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಒಂದು ಚಮಚ ಕಾಫಿ ಪುಡಿ, ಒಂದು ಚಮಚ ಜೇನು ಸೇರಿಸಿ ಮಿಕ್ಸ್ ಮಾಡಿ 2 ನಿಮಿಷ ಬಿಡಿ. ನಂತರ ರೆಡಿಯಾದ ಕಾಫಿ ಮಾಸ್ಕ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ. ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ತಲೆ ಹೊಟ್ಟು ಹೋಗುವವರೆಗೆ ವಾರದಲ್ಲಿ 2-3 ಬಾರಿ ಕಾಫಿ ಮಾಸ್ಕ್ ಬಳಸಿ.
ಮೊದಲು ಬೇವಿನ ಎಲೆಯನ್ನು ತೆಗೆದುಕೊಂಡು ರುಬ್ಬಿಕೊಳ್ಳಿ. ಇದಕ್ಕೆ ಒಂದು ಕಪ್ ಮೊಸರು ಸೇರಿಸಿ ನಂತರ ತಲೆಗೆ ಹಚ್ಚಿಕೊಳ್ಳಿ. 20 ನಿಮಿಷದ ನಂತರ ಕೂದಲನ್ನು ತೊಳೆದುಕೊಳ್ಳಿ. ಮೊಸರಿನಲ್ಲಿ ತಂಪಾದ ಮತ್ತು ಬೇವಿನ ಎಲೆಯಲ್ಲಿ ಆಂಟಿ ಫಂಗಲ್ ಗುಣಲಕ್ಷಣ ಇರುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.