ಏಕದಿನ ಕ್ರಿಕೆಟ್‌ನ ಈ ವಿಶ್ವ ದಾಖಲೆಗಳನ್ನು ಮುರಿಯುವುದು ಅಸಾಧ್ಯವೇ... ಇದುವರೆಗೆ ಪ್ರಯತ್ನಿಸಿದವರೆಲ್ಲಾ ವಿಫಲ!

Unbreakable records in ODI Cricket: ODI ಕ್ರಿಕೆಟ್ ಜಗತ್ತಿನಲ್ಲಿ ವಿಶೇಷವಾದ 10 ವಿಶ್ವ ದಾಖಲೆಗಳಿವೆ, ಅವುಗಳನ್ನು ಮುರಿಯುವುದು ಅಸಾಧ್ಯ. ಅಂತಹ ಅದ್ಭುತ ದಾಖಲೆಗಳು ಯಾವುವು ಎಂಬುದನ್ನು ನೋಡೋಣ.

Written by - Bhavishya Shetty | Last Updated : Feb 2, 2025, 11:44 AM IST
    • ODI ಕ್ರಿಕೆಟ್ ಜಗತ್ತಿನಲ್ಲಿ ವಿಶೇಷವಾದ 10 ವಿಶ್ವ ದಾಖಲೆಗಳಿವೆ
    • ಅಂತಹ ಅದ್ಭುತ ದಾಖಲೆಗಳು ಯಾವುವು?
    • ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಮೂರು ದ್ವಿಶತಕಗಳ ದಾಖಲೆ
ಏಕದಿನ ಕ್ರಿಕೆಟ್‌ನ ಈ ವಿಶ್ವ ದಾಖಲೆಗಳನ್ನು ಮುರಿಯುವುದು ಅಸಾಧ್ಯವೇ... ಇದುವರೆಗೆ ಪ್ರಯತ್ನಿಸಿದವರೆಲ್ಲಾ ವಿಫಲ! title=

Unbreakable World Records of ODI Cricket: ODI ಕ್ರಿಕೆಟ್ ಜಗತ್ತಿನಲ್ಲಿ ವಿಶೇಷವಾದ 10 ವಿಶ್ವ ದಾಖಲೆಗಳಿವೆ, ಅವುಗಳನ್ನು ಮುರಿಯುವುದು ಅಸಾಧ್ಯ. ಅಂತಹ ಅದ್ಭುತ ದಾಖಲೆಗಳು ಯಾವುವು ಎಂಬುದನ್ನು ನೋಡೋಣ.

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ... ಬಜೆಟ್ ದಿನದಂದು ಆಭರಣ ಪ್ರಿಯರಿಗೆ ಬಿಗ್‌ ಶಾಕ್‌ !!

ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಮೂರು ದ್ವಿಶತಕಗಳ ದಾಖಲೆ:
1. ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ಬಾರಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಈ ಸಾಧನೆಗೈದ ವಿಶ್ವದ ಏಕೈಕ ಬ್ಯಾಟ್ಸ್‌ಮನ್.

2. ವಿರಾಟ್ ಕೊಹ್ಲಿ 50 ಏಕದಿನ ಶತಕಗಳು: ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ತಮ್ಮ ಏಕದಿನ ವೃತ್ತಿಜೀವನದಲ್ಲಿ ಇದುವರೆಗೆ 50 ಶತಕಗಳನ್ನು ಗಳಿಸಿದ್ದಾರೆ. ಈ ವಿಶ್ವ ದಾಖಲೆಯನ್ನು ಮುರಿಯುವುದು ಬಹುತೇಕ ಅಸಾಧ್ಯ. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 80 ಶತಕಗಳನ್ನು ಗಳಿಸಿದ್ದಾರೆ.

3. ಸಚಿನ್ ಏಕದಿನ ಪಂದ್ಯಗಳಲ್ಲಿ 18426 ರನ್‌ಗಳು: ತಮ್ಮ 22 ವರ್ಷ 91 ದಿನಗಳ ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ, ಸಚಿನ್ ತೆಂಡೂಲ್ಕರ್ 463 ಏಕದಿನ ಪಂದ್ಯಗಳ 452 ಇನ್ನಿಂಗ್ಸ್‌ಗಳಲ್ಲಿ 44.83 ರ ಅತ್ಯುತ್ತಮ ಸರಾಸರಿಯಲ್ಲಿ 18426 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಸಚಿನ್ ತೆಂಡೂಲ್ಕರ್ 49 ಶತಕಗಳು ಮತ್ತು 96 ಅರ್ಧಶತಕಗಳನ್ನು ಗಳಿಸಿದ್ದಾರೆ.

4. ರೋಹಿತ್ ಶರ್ಮಾ 264 ರನ್‌ಗಳ ಇನ್ನಿಂಗ್ಸ್: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ವಿಶ್ವ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. 2014 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 264 ರನ್ ಗಳಿಸಿ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದರು. ಇಲ್ಲಿಯವರೆಗೆ, ವಿಶ್ವದ ಯಾವುದೇ ಬ್ಯಾಟ್ಸ್‌ಮನ್ ಈ ವಿಶ್ವ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.

5. ಏಕದಿನ ಪಂದ್ಯವೊಂದರಲ್ಲಿ 8 ವಿಕೆಟ್: ಶ್ರೀಲಂಕಾದ ಮಾಜಿ ಬೌಲರ್ ಚಾಮಿಂಡಾ ವಾಸ್ 2001 ರಲ್ಲಿ ಏಕದಿನ ಪಂದ್ಯವೊಂದರಲ್ಲಿ 8 ವಿಕೆಟ್‌ಗಳನ್ನು ಕಬಳಿಸುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದರು. 23 ವರ್ಷಗಳಿಂದ, ವಿಶ್ವದ ಯಾವುದೇ ಬೌಲರ್ ಚಾಮಿಂಡಾ ವಾಸ್ ಅವರ ಈ ವಿಶ್ವ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.

6. ಎಬಿ ಡಿವಿಲಿಯರ್ಸ್ 31 ಎಸೆತಗಳಲ್ಲಿ ಶತಕ: 2015 ರಲ್ಲಿ, ಎಬಿ ಡಿವಿಲಿಯರ್ಸ್ ಜೋಹಾನ್ಸ್‌ಬರ್ಗ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 31 ಎಸೆತಗಳಲ್ಲಿ ಶತಕ ಗಳಿಸಿದರು. ಆ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಕೇವಲ 44 ಎಸೆತಗಳಲ್ಲಿ 149 ರನ್ ಗಳಿಸಿದ್ದರು. ಇದರಲ್ಲಿ 16 ಸಿಕ್ಸರ್‌ ಮತ್ತು 9 ಬೌಂಡರಿ ಸೇರಿತ್ತು. ಎಬಿ ಡಿವಿಲಿಯರ್ಸ್ ಅವರ 31 ಎಸೆತಗಳಲ್ಲಿ ಏಕದಿನ ಶತಕ ಗಳಿಸಿದ ದಾಖಲೆಯನ್ನು ಮುರಿಯುವುದು ಇನ್ನೂ ಯಾವುದೇ ಬ್ಯಾಟ್ಸ್‌ಮನ್‌ಗೆ ಸುಲಭವಲ್ಲ.

7. ಸಚಿನ್ ತೆಂಡೂಲ್ಕರ್ 62 ಬಾರಿ 'ಪಂದ್ಯಶ್ರೇಷ್ಠ': ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 'ಪಂದ್ಯ ಪುರುಷೋತ್ತಮ' ಪ್ರಶಸ್ತಿಗಳನ್ನು ಗೆದ್ದ ವಿಶ್ವ ದಾಖಲೆಯು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಬಾರಿ, ಅಂದರೆ ಇಡೀ ವಿಶ್ವದಲ್ಲಿ 62 ಬಾರಿ 'ಪಂದ್ಯಶ್ರೇಷ್ಠ' ಪ್ರಶಸ್ತಿಯನ್ನು ಗೆದ್ದಿದ್ದಾರೆ.

8. ಮುತ್ತಯ್ಯ ಮುರಳೀಧರನ್ 534 ವಿಕೆಟ್‌: ಶ್ರೀಲಂಕಾದ ದಂತಕಥೆ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 534 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ವಿಶ್ವ ದಾಖಲೆಯನ್ನು ಯಾವುದೇ ಬೌಲರ್ ಮುರಿಯುವುದು ಅಸಾಧ್ಯ.

9. 2016ರ ಬೌಂಡರಿ ಬಾರಿಸಿದ ಸಚಿನ್ ತೆಂಡೂಲ್ಕರ್: ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 2016 ಬೌಂಡರಿಗಳನ್ನು ಬಾರಿಸಿದ್ದಾರೆ. ಈ ವಿಶ್ವ ದಾಖಲೆಯನ್ನು ಮುರಿಯುವುದು ಬಹುತೇಕ ಅಸಾಧ್ಯ. ಏಕದಿನ ವೃತ್ತಿಜೀವನದಲ್ಲಿ 2016 ಬೌಂಡರಿಗಳು, ಟೆಸ್ಟ್ ವೃತ್ತಿಜೀವನದಲ್ಲಿ 2058 ಬೌಂಡರಿಗಳು ಮತ್ತು ಟಿ20 ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 2 ಬೌಂಡರಿಗಳನ್ನು ಬಾರಿಸಿದ್ದಾರೆ. ಸ

10. ಜೋಯಲ್ ಗಾರ್ನರ್ ಎಕಾನಮಿ ರೇಟ್‌: ವೆಸ್ಟ್ ಇಂಡೀಸ್‌ನ ಮಾಜಿ ಲೆಜೆಂಡರಿ ವೇಗದ ಬೌಲರ್ ಜೋಯಲ್ ಗಾರ್ನರ್ 1977 ಮತ್ತು 1987 ರ ನಡುವೆ 98 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಸಂದರ್ಭದಲ್ಲಿ 18.84 ಸರಾಸರಿಯಲ್ಲಿ 146 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೂ, ಅವರ ಅತ್ಯಂತ ಪ್ರಭಾವಶಾಲಿ ಅಂಕಿಅಂಶಗಳೆಂದರೆ ಅವರ ಎಕಾನಮಿ ರೇಟ್. ಪ್ರತಿ ಓವರ್‌ಗೆ 3.09... ಜೋಯಲ್ ಗಾರ್ನರ್ 98 ಏಕದಿನ ಪಂದ್ಯಗಳಲ್ಲಿ 3.09 ರ ಎಕಾನಮಿ ದರವನ್ನು ಕಾಯ್ದುಕೊಂಡಿದ್ದು ಈ ವಿಶ್ವ ದಾಖಲೆಯನ್ನು ಮುರಿಯುವುದು ಬಹುತೇಕ ಅಸಾಧ್ಯ.

ಇದನ್ನೂ ಓದಿ: ಈ 5 ದೇಸಿ ಪಾನೀಯಗಳನ್ನು ಸೇವಿಸುವುದರಿಂದ ಈ ಕಾಯಿಲೆಗಳು ತಕ್ಷಣ ನಿವಾರಣೆಯಾಗುತ್ತವೆ..!

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News