ಅಭಿಮಾನಿಗಳ ಪಾಲಿನ ಪ್ರೀತಿಯ ಅಪ್ಪು, ಡಾ. ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲಾ ಅಗಲಿ ಇಂದಿಗೆ 5 ತಿಂಗಳು. ಈ ನೋವಲ್ಲೇ ಪವರ್ ಸ್ಟಾರ್ ಅಭಿಮಾನಿ ಬಳಗ ಇಂದಿಗೂ ಕಂಬನಿ ಮಿಡಿಯುತ್ತಿದೆ. ಆದರೂ ಅಪ್ಪು ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಏನು ಕಡಿಮೆ ಆಗಿಲ್ಲ. ಅದರಲ್ಲೂ ಇಂದು ಅಭಿಮಾನಿಗಳ ಸಾಗರವೇ ಅಪ್ಪು ಸಮಾಧಿಗೆ ಭೇಟಿ ನೀಡಿ ನಮಿಸಿತು. ಹಾಗೇ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಅಪ್ಪು ಅವರನ್ನು ನೆನೆದು ಭಾವುಕರಾದರು.
ಅಪ್ಪು(Puneeth Rajkumar) ಅನ್ನೋ ನಕ್ಷತ್ರ ನಮ್ಮಿಂದ ಮರೆಯಾಗಿ ಇಂದಿಗೆ 5 ತಿಂಗಳು. ಹೀಗೆ ಕಾಲ ಉರುಳುತ್ತಿದ್ದರೂ ಅಪ್ಪು ಅವರನ್ನ ಕಳೆದುಕೊಂಡ ಅವರ ಅಭಿಮಾನಿ ಬಳಗದ ನೋವು ಕರಗಿಲ್ಲ. ಇಂದಿಗೂ ಅಪ್ಪು ಫ್ಯಾನ್ಸ್ ತಮ್ಮ ನೆಚ್ಚಿನ ನಟನ ನೆನಪಲ್ಲೇ ಕೊರಗುತ್ತಿದ್ದಾರೆ. ಈ ನೋವಿನ ಜೊತೆ ಜೊತೆಗೆ ಅಪ್ಪು ಸಮಾಧಿಗೆ ಅಭಿಮಾನಿಗಳ ಸಾಗರವೇ ಹರಿದು ಬರುತ್ತಿದೆ.
ಇದನ್ನೂ ಓದಿ : ಮತ್ತೆ ಶುರುವಾಗುತ್ತಾ ಮಜಾ ಟಾಕೀಸ್?
ಕುಟುಂಬಸ್ಥರ ಪೂಜೆ
ಇನ್ನು ಅಭಿಮಾನಿಗಳ ಜೊತೆಗೆ ಕುಟುಂಬಸ್ಥರು ಕೂಡ ಅಪ್ಪು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಟ ರಾಘಣ್ಣ ಸೇರಿದಂತೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್(Ashwini Puneeth RajKumar) ಹಾಗೂ ಡಾ. ಪುನೀತ್ ರಾಜ್ಕುಮಾರ್ ಅವರ ಪುತ್ರಿ ಸಮಾಧಿಗೆ ಪೂಜೆ ಸಲ್ಲಿಸಿ ನಮಿಸಿದರು. ಇದೇ ಸಂದರ್ಭದಲ್ಲಿ ವಿನಯ್ ರಾಜ್ಕುಮಾರ್ ಹಾಗೂ ಯುವ ರಾಜ್ಕುಮಾರ್ ಹಾಜರಿದ್ದರು.
ವರ್ಮಾ ಭಾವುಕ
ಇನ್ನು 5 ತಿಂಗಳ ವಿಶೇಷ ಪೂಜೆ ಹಿನ್ನೆಲೆಯಲ್ಲಿ ಅಪ್ಪು ಸಮಾಧಿಗೆ ಭೇಟಿ ನೀಡಲು ಬೆಳಗ್ಗೆ 9 ಗಂಟೆವರೆಗೂ ಯಾರಿಗೂ ಅವಕಾಶ ನೀಡಿರಲಿಲ್ಲ. ಆದರೆ ಪೂಜೆ ಮುಗಿದ ಕೆಲವೇ ಕ್ಷಣಗಳಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(Ram Gopal Varma) ಅಪ್ಪು ಸಮಾಧಿ ಸ್ಥಳಕ್ಕೆ ಆಗಮಿಸಿದರು. ಅಪ್ಪು ಅವರಿಗೆ ನಮಿಸುವ ಜೊತೆಗೆ ಡಾ. ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಅವರ ಸಮಾಧಿ ಸ್ಥಳಕ್ಕೂ ಭೇಟಿ ನೀಡಿ ನಮಿಸಿದರು.
ಇದೇ ವೇಳೆ ಮಾತನಾಡಿದ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಪುನೀತ್ ರಾಜ್ಕುಮಾರ್ ಅವರನ್ನು ಕಿಲ್ಲಿಂಗ್ ವೀರಪ್ಪನ್ ಶೂಟಿಂಗ್ ಸಂದರ್ಭದಲ್ಲಿ 2 ಬಾರಿ ಭೇಟಿಯಾಗಿದ್ದೆ. ಪುನೀತ್ ಅವರು ವಿಶಾಲ ಹೃದಯದ ವ್ಯಕ್ತಿ. ಅವರು ಕೇವಲ ಒಳ್ಳೆಯ ನಟ ಮಾತ್ರವಲ್ಲ, ಉತ್ತಮ ವ್ಯಕ್ತಿಯೂ ಆಗಿದ್ದರು ಎಂದು ರಾಮ್ ಗೋಪಾಲ್ ವರ್ಮಾ ಭಾವುಕರಾದರು.
ಇದನ್ನೂ ಓದಿ : 'Antu-Intu' Updates - ಇಬ್ಬರು ಹೆಣ್ಣುಮಕ್ಕಳ ಉಸ್ತುವಾರಿಯಲ್ಲಿ ಶೀಘ್ರದಲ್ಲಿಯೇ ಬರಲಿದೆ "ಅಂತು ಇಂತು" ಚಿತ್ರ
ಅಂದಹಾಗೆ ಸಿನಿಮಾ ಒಂದರ ಪ್ರಮೋಶನ್ ಹಿನ್ನೆಲೆ ರಾಮ್ ಗೋಪಾಲ್ ವರ್ಮಾ ಬೆಂಗಳೂರಿಗೆ ಆಗಮಿಸಿದ್ರು. ಜೊತೆಗೆ ಡಾ.ಪುನೀತ್ ರಾಜ್ಕುಮಾರ್ ಸಮಾಧಿಗೆ(Dr.Puneeth Rajkumar Memorial) ಭೇಟಿ ನೀಡಿ ನಮಿಸಿದರು. ಜೊತೆಗೆ ಡಾ. ಪುನೀತ್ ರಾಜ್ ಕುಮಾರ್ ಅವರ ನಿವಾಸಕ್ಕೂ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮತ್ತೊಂದ್ಕಡೆ ಅಪ್ಪು ಸಮಾಧಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಯುವ ರಾಜ್ಕುಮಾರ್ ರಾಮ್ಗೋಪಾಲ್ ವರ್ಮಾ ಅವರ ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.