ಭಾರತದಿಂದ ಸಗಣಿ ಆಮದು ಮಾಡಿಕೊಳ್ತಿದೆ ಈ ಶ್ರೀಮಂತ ದೇಶ... ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಬೇಡಿಕೆ! ಒಂದು ಕೆಜಿ ಸಗಣಿ ಬೆಲೆ ಎಷ್ಟು ಗೊತ್ತಾ?

India is the leading exporter of cow dung: ಹಸುವಿನ ಸಗಣಿ ಮತ್ತು ಅದರ ಪ್ರಯೋಜನಗಳನ್ನು ಭಾರತದಿಂದ ರಫ್ತು ಮಾಡುವ ಗೋವಿನ ಸಗಣಿ ಬೆಲೆಯಿಂದ ಅಂದಾಜು ಮಾಡಬಹುದು. ಪ್ರಸ್ತುತ ಭಾರತವು ಸಗಣಿಯನ್ನು ಕೆಜಿಗೆ 30 ರಿಂದ 50 ರೂ.ಗೆ ರಫ್ತು ಮಾಡುತ್ತಿದೆ.

Written by - Bhavishya Shetty | Last Updated : Dec 22, 2024, 04:45 PM IST
    • ಇತ್ತೀಚಿನ ವರ್ಷಗಳಲ್ಲಿ ಹಸುವಿನ ಸಗಣಿ ರಫ್ತು ವೇಗವಾಗಿ ಹೆಚ್ಚಾಗಿದೆ
    • ಈ ಅರಬ್ ದೇಶಗಳು ಭಾರತದಿಂದ ಹಸುವಿನ ಸಗಣಿಯಿಂದ ಖರೀಸಿ ಏನು ಮಾಡುತ್ತಿವೆ?
    • ಸಗಣಿಯನ್ನು ಪುಡಿಯ ರೂಪದಲ್ಲಿ ಬಳಸುವುದರಿಂದ ಖರ್ಜೂರದ ಬೆಳೆ ಹೆಚ್ಚಾಗುತ್ತದೆ
ಭಾರತದಿಂದ ಸಗಣಿ ಆಮದು ಮಾಡಿಕೊಳ್ತಿದೆ ಈ ಶ್ರೀಮಂತ ದೇಶ... ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಬೇಡಿಕೆ! ಒಂದು ಕೆಜಿ ಸಗಣಿ ಬೆಲೆ ಎಷ್ಟು ಗೊತ್ತಾ? title=
export of cow dung

India is the leading exporter of cow dung: ಇತ್ತೀಚಿನ ವರ್ಷಗಳಲ್ಲಿ ಹಸುವಿನ ಸಗಣಿ ರಫ್ತು ವೇಗವಾಗಿ ಹೆಚ್ಚಾಗಿದೆ. ಭಾರತ ಹಲವು ದೇಶಗಳಿಗೆ ಹಸುವಿನ ಸಗಣಿ ರಫ್ತು ಮಾಡುತ್ತಿದೆ. ಈ ದೇಶಗಳು ಹಸುವಿನ ಸಗಣಿಯನ್ನು ಹಲವು ರೀತಿಯಲ್ಲಿ ಬಳಸುತ್ತಿದ್ದು, ಅಂತಹ ಈ ದೇಶಗಳಲ್ಲಿ ಕುವೈತ್ ಮತ್ತು ಅರಬ್ ದೇಶಗಳು ಸೇರಿವೆ. ಈ ಅರಬ್ ದೇಶಗಳು ಭಾರತದಿಂದ ಹಸುವಿನ ಸಗಣಿಯಿಂದ ಖರೀಸಿ ಏನು ಮಾಡುತ್ತಿವೆ ಮತ್ತು ಅದಕ್ಕೆ  ಎಷ್ಟು ಬೆಲೆ ತೆರುತ್ತಿದ್ದಾರೆ ಎಂಬುದನ್ನು ಮುಂದೆ ತಿಳಿಯೋಣ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಡಾಕ್ಟರ್‌, ಸಿನಿಮಾದಲ್ಲಿ ಹಾಟ್ ಆ್ಯಕ್ಟರ್..! ಈಕೆಯನ್ನ ನೋಡಿದ್ರೆ ಗೊತ್ತಾಗುತ್ತೆ.. ಹೆಣ್ಮಕ್ಳೇ ಸ್ಟ್ರಾಂಗು ಗುರು..

ಒಂದು ಸಂಶೋಧನೆಯ ಸಂದರ್ಭದಲ್ಲಿ, ಈ ದೇಶಗಳ ಕೃಷಿ ವಿಜ್ಞಾನಿಗಳು ಹಸುವಿನ ಸಗಣಿಯನ್ನು ಪುಡಿಯ ರೂಪದಲ್ಲಿ ಬಳಸುವುದರಿಂದ ಖರ್ಜೂರದ ಬೆಳೆ ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ.

ಖರ್ಜೂರದ ಬೆಳೆಯಲ್ಲಿ ದನದ ಸಗಣಿ ಪುಡಿಯನ್ನು ಬಳಸುವುದರಿಂದ ಹಣ್ಣಿನ ಗಾತ್ರವು ಹೆಚ್ಚಾಗವುದಲ್ಲದೆ, ಉತ್ಪಾದನೆಯೂ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಈ ಕಾರಣದಿಂದಾಗಿ,  ಖರ್ಜೂರದ ಉತ್ಪಾದನೆಯನ್ನು ಹೆಚ್ಚಿಸಲು, ಕುವೈತ್ ಮತ್ತು ಅರಬ್ ದೇಶಗಳು ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಹಸುವಿನ ಸಗಣಿ ಆಮದು ಮಾಡಿಕೊಳ್ಳುತ್ತವೆ.

ಹಸುವಿನ ಸಗಣಿ ಮತ್ತು ಅದರ ಪ್ರಯೋಜನಗಳನ್ನು ಭಾರತದಿಂದ ರಫ್ತು ಮಾಡುವ ಗೋವಿನ ಸಗಣಿ ಬೆಲೆಯಿಂದ ಅಂದಾಜು ಮಾಡಬಹುದು. ಪ್ರಸ್ತುತ ಭಾರತವು ಸಗಣಿಯನ್ನು ಕೆಜಿಗೆ 30 ರಿಂದ 50 ರೂ.ಗೆ ರಫ್ತು ಮಾಡುತ್ತಿದೆ.

ಇದನ್ನೂ ಓದಿ: ಟ್ರೋಲ್‌ಗೂ ಡೋಂಟ್‌ ಕೇರ್‌..! ದಿನದಿಂದ ದಿನಕ್ಕೆ ಗ್ಲಾಮರ್‌ ಡೋಸ್‌ ಹೆಚ್ಚಿಸುತ್ತಿದ್ದಾಳೆ ನಿವಿ.. ಫೊಟೋಸ್‌ ವೈರಲ್‌..

ಕೃಷಿಕ ದೇಶವಾದ ಭಾರತದಲ್ಲಿ ಜಾನುವಾರುಗಳ ಸಂಖ್ಯೆಯೂ ಬಹಳ ದೊಡ್ಡದಿದೆ. ವರದಿಗಳ ಪ್ರಕಾರ ಭಾರತದಲ್ಲಿ ಸುಮಾರು 30 ಕೋಟಿ ಜಾನುವಾರುಗಳಿವೆ. ಇದರಿಂದ ಪ್ರತಿ ದಿನ ಸುಮಾರು 30 ಲಕ್ಷ ಟನ್‌ಗಳಷ್ಟು ಸಗಣಿ ಉತ್ಪಾದನೆಯಾಗುತ್ತದೆ. ಭಾರತದಲ್ಲಿ, ಸಗಣಿಯಿಂದ ತಯಾರಿಸಲಾದ ಬೆರನಿಗಳನ್ನು ಇಂಧನವಾಗಿ ಬಳಸಲಾಗುತ್ತದೆ, ಜೈವಿಕ ಅನಿಲ ತಯಾರಿಕೆಯಲ್ಲಿ ಮತ್ತು ಹಸುವಿನ ಸಗಣಿಯಿಂದ ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News