ಸಾಮಾನ್ಯ ಜನರಂತೆ ನೆರವೇರಲಿದೆ ಭಾರತದ ಶ್ರೀಮಂತ ಉದ್ಯಮಿ ಮಗನ ಮದುವೆ..! ಅದಾನಿ ಗ್ರೂಪ್ ಅಧ್ಯಕ್ಷ ಹೇಳಿದ್ದೇನು?

Gautam Adani Younger Son Jeet Wedding: ಇತ್ತೀಚಿಗೆ ಉದ್ಯಮಿಗಳ ಮಕ್ಕಳಾದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಸಿಕ್ಕಾಪಟ್ಟೆ ಅದ್ದೂರಿಯಾಗಿ ಮದುವೆಯಾಗಿದ್ದರು. ಹಾಗಾಗಿ ಇನ್ನೊಬ್ಬ ಖ್ಯಾತ ಉದ್ಯಮಿ ಗೌತಮ್ ಅದಾನಿ ಮಗ ಜೀತ್ ಅದಾನಿ ಕೂಡ ಅಷ್ಟೇ ವೈಭವದಿಂದ ಮದುವೆ ಆಗಬಹುದು ಎಂದು ಹೇಳಲಾಗುತ್ತಿತ್ತು.

Written by - Yashaswini V | Last Updated : Jan 24, 2025, 03:52 PM IST
  • ಪ್ರಯಾಗ್‌ರಾಜ್‌ನ ಲ್ಲಿ ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ತಮ್ಮ ಕಿರಿಯ ಮಗ ಜೀತ್ ಅದಾನಿ ಮದುವೆ ಬಗ್ಗೆ ತಿಳಿಸಿದ್ದಾರೆ.
  • ಗೌತಮ್ ಅದಾನಿ ಬಹಳ ದಿನಗಳ ನಂತರ ಕುಟುಂಬದವರ ಜೊತೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡು ಮಗನ ಮದುವೆ ಬಗ್ಗೆ ಘೋಷಣೆ ಮಾಡಿದ್ದಾರೆ.
  • ಜೀತ್ ಅದಾನಿ ಮದುವೆ ಫೆಬ್ರವರಿ 7ರಂದು ಗುಜರಾತಿನ ಅಹಮದಾಬಾದ್ ನಲ್ಲಿ ನಡೆಯಲಿದೆ. ಹುಡುಗಿ ಯಾರು ಎನ್ನುವುದನ್ನು ಗೌತಮ್ ಅದಾನಿ ಬಹಿರಂಗ ಪಡಿಸಿಲ್ಲ.
ಸಾಮಾನ್ಯ ಜನರಂತೆ ನೆರವೇರಲಿದೆ ಭಾರತದ ಶ್ರೀಮಂತ ಉದ್ಯಮಿ ಮಗನ ಮದುವೆ..! ಅದಾನಿ ಗ್ರೂಪ್ ಅಧ್ಯಕ್ಷ ಹೇಳಿದ್ದೇನು?  title=

Gautam Adani Younger Son Jeet Wedding: ಇತ್ತೀಚಿಗೆ ನಡೆದ ದೇಶದ ಪ್ರಮುಖ ಉದ್ಯಮಿ ಮುಖೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಅದ್ದೂರಿತನ ಭಾರೀ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ನಡೆಯುವ ಇನ್ನೊಬ್ಬ ಖ್ಯಾತ ಉದ್ಯಮಿ ಗೌತಮ್ ಅದಾನಿ ಪುತ್ರ ಜೀತ್ ಅದಾನಿ ವಿವಾಹ ಹೇಗಿರಬಹುದು? ಎಷ್ಟು ಅದ್ದೂರಿಯಾಗಿರಬಹುದು? ಯಾವೆಲ್ಲಾ ಗಣ್ಯರು ಮತ್ತು ಸೆಲಬ್ರಿಟಿಗಳು ಭಾಗವಹಿಸಬಹುದು ಎನ್ನುವ ಎಂಬ ಕುತೂಹಲ ಉಂಟಾಗಿದೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಮಡದಿ ಪ್ರೀತಿ ಅದಾನಿ, ದೊಡ್ಡ ಮಗ ಕರಣ್ ಅದಾನಿ ಜೊತೆ ಪಾಲ್ಗೊಂಡಿದ್ದರು. ಗೌತಮ್ ಅದಾನಿ ಬಹಳ ದಿನಗಳ ನಂತರ ಕುಟುಂಬದವರ ಜೊತೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ವಿಶೇಷ ಎಂದರೆ ಇದೆ ವೇಳೆ ಅವರು ತಮ್ಮ ಚಿಕ್ಕ ಮಗ ಜೀತ್ ಅದಾನಿಯ ಮದುವೆ ಫೆಬ್ರವರಿ 7ರಂದು ನಡೆಯಲಿದೆ ಎಂದು ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ- ಶ್ರೀರಾಮಚಂದ್ರ ಮತ್ತು ಲಕ್ಷಣ್ ಹೆಸರಿನ ಬ್ಯಾಂಕ್ ಚೆಕ್ ಭಾರೀ ವೈರಲ್!

ಇದಕ್ಕೂ ಮೀರಿದ ಮತ್ತೊಂದು ಆಶ್ಚರ್ಯಕರ ಸಂಗತಿ ಏನೆಂದರೆ ದುಡ್ಡಿನ ದನಿ ಗೌತಮ್ ಅದಾನಿ ತಮ್ಮ ಮಗನ ಮದುವೆ ಹೇಗೆ ಆಗಲಿದೆ ಎನ್ನುವ ಅಂಶವನ್ನೂ ಬಹಿರಂಗ ಪಡಿಸಿದರು. ನಮ್ಮ ಕುಟುಂಬದ ಆಚರಣೆಗಳು ಕೂಡ ಎಲ್ಲರಂತೆ ಇರುತ್ತವೆ. ಮಗನ ಮದುವೆ ಬಹಳ ಸರಳವಾಗಿರುತ್ತದೆ. ನಮ್ಮದು ಸಾಂಪ್ರದಾಯಿಕ ಕುಟುಂಬ ಹಾಗಾಗಿ ಮಗನ ಮದುವೆ ಕೂಡ ಸಾಂಪ್ರದಾಯಿಕವಾಗಿ ಇರುತ್ತದೆ ಎಂದು ಹೇಳಿ ಎಲ್ಲರನ್ನೂ ಚಿಕಿತಗೊಳಿಸಿದರು.

ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮತ್ತು ಉದ್ಯಮಿ ವೀರನ್ ಮರ್ಚೆಂಟ್ ಮಗಳು ರಾಧಿಕಾ ಮರ್ಚೆಂಟ್ ನಡುವೆ ಅತ್ಯಂತ ಸಡಗರ, ಸಂಭ್ರಮದಿಂದ ಮದುವೆ ಆಗಿದ್ದರಿಂದ ಬಿಲೇನಿಯರ್ ಗೌತಮ್ ಅದಾನಿ ಮಗನ ಮದುವೆ ಸರಳವಾಗಿ ನಡೆಯುತ್ತದೆ ಎನ್ನುವುದನ್ನು ಕೇಳಿ ಆಶ್ಚರ್ಯವಾಗಿದೆ. 

ಇದನ್ನೂ ಓದಿ- 2025ರ ಬಜೆಟ್‌ನಲ್ಲಿ  ಹಳೆ ತೆರಿಗೆ ಪದ್ಧತಿ ಬದಲಿಸ್ತಾರಾ ನಿರ್ಮಲಾ ಸೀತಾರಾಮನ್? ತೆರಿಗೆದಾರರ ಮೇಲೆ ಏನು ಪರಿಣಾಮ..! 

ನಿಮ್ಮ ಮಗನ ಮದುವೆ ಸೆಲೆಬ್ರಿಟಿಗಳ ಮಹಾ ಕುಂಭವಾಗಲಿದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಗೌತಮ್ ಅದಾನಿ ಸಿಂಪಲ್ ಆಗಿ ಇಲ್ಲ ಅಂತಾ ಉತ್ತರ ಕೊಟ್ಟಿದ್ದಾರೆ. ಹಾಗಾಗಿ ಮದುವೆ ಕೂಡ ಸಿಂಪಲ್ ಆಗಿ ನಡೆಯುತ್ತದೆ ಎನ್ನುವ ಬಗ್ಗೆ ಅನುಮಾನಗಳಿಲ್ಲ. ಅಂದಹಾಗೆ ಗುಜರಾತ್ ಮೂಲದ ಗೌತಮ್ ಅದಾನಿ ಮಗನ ಮದುವೆ ಮಾಡುತ್ತಿರುವುದು ಕೂಡ ತಮ್ಮ ಊರು ಅಹಮದಾಬಾದ್ ನಲ್ಲಿ. ಇಷ್ಟಾದರೂ ಹುಡುಗಿಯರು ಎನ್ನುವ ಗುಟ್ಟು ಬಿಟ್ಟುಕೊಟ್ಟಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News