Dragon Fruit Benefits: ಹಣ್ಣುಗಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಅಂತಹ ಪ್ರಯೋಜನಕಾರಿ ಹಣ್ಣುಗಳಲ್ಲಿ ಡ್ರ್ಯಾಗನ್ ಫ್ರೂಟ್ ಕೂಡ ಒಂದು. ಈ ಹಣ್ಣಿನಲ್ಲಿ ಪ್ರೋಟೀನ್, ಫೈಬರ್, ಕಬ್ಬಿಣ, ಮೆಗ್ನೀಸಿಯಮ್ ಮತ್ತು ವಿಟಮಿನ್ ಗಳು ಸಮೃದ್ಧವಾಗಿವೆ. ಅಷ್ಟೇ ಅಲ್ಲದೆ, ಪಾಲಿಫಿನಾಲ್ಗಳು, ಕ್ಯಾರೊಟಿನಾಯ್ಡ್ಗಳು ಮತ್ತು ಬೀಟಾಸಯಾನಿನ್ಗಳಂತಹ ಸಸ್ಯ ಸಂಯುಕ್ತಗಳಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಹಣ್ಣುಗಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಅಂತಹ ಪ್ರಯೋಜನಕಾರಿ ಹಣ್ಣುಗಳಲ್ಲಿ ಡ್ರ್ಯಾಗನ್ ಫ್ರೂಟ್ ಕೂಡ ಒಂದು. ಈ ಹಣ್ಣಿನಲ್ಲಿ ಪ್ರೋಟೀನ್, ಫೈಬರ್, ಕಬ್ಬಿಣ, ಮೆಗ್ನೀಸಿಯಮ್ ಮತ್ತು ವಿಟಮಿನ್ ಗಳು ಸಮೃದ್ಧವಾಗಿವೆ. ಅಷ್ಟೇ ಅಲ್ಲದೆ, ಪಾಲಿಫಿನಾಲ್ಗಳು, ಕ್ಯಾರೊಟಿನಾಯ್ಡ್ಗಳು ಮತ್ತು ಬೀಟಾಸಯಾನಿನ್ಗಳಂತಹ ಸಸ್ಯ ಸಂಯುಕ್ತಗಳಿವೆ.
ಡ್ರ್ಯಾಗನ್ ಹಣ್ಣಿನಲ್ಲಿ ವಿಟಮಿನ್ ಸಿ, ಬೀಟಾ-ಕ್ಯಾರೋಟಿನ್, ಲೈಕೋಪೀನ್ ಮತ್ತು ಬೆಟಾಲೈನ್ ಎಂಬ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಹಾಗಾದರೆ ಡ್ರ್ಯಾಗನ್ ಹಣ್ಣನ್ನು ತಿನ್ನುವುದರಿಂದಾಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
ರೋಗನಿರೋಧಕ ಶಕ್ತಿ: ಡ್ರ್ಯಾಗನ್ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಕ್ಯಾರೊಟಿನಾಯ್ಡ್ಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು, ಡ್ರ್ಯಾಗನ್ ಹಣ್ಣನ್ನು ಸೇವಿಸಬಹುದು.
ಜೀರ್ಣಕ್ರಿಯೆ: ಡ್ರ್ಯಾಗನ್ ಹಣ್ಣಿನಲ್ಲಿ ಆಹಾರದ ನಾರು ಸಮೃದ್ಧವಾಗಿದ್ದು, ಇದು ನಮ್ಮ ಜೀರ್ಣಕ್ರಿಯೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ.
ಕಬ್ಬಿಣಾಂಶ: ಡ್ರ್ಯಾಗನ್ ಹಣ್ಣನ್ನು ಕಬ್ಬಿಣಾಂಶ ಸಮೃದ್ಧವೆಂದು ಪರಿಗಣಿಸಲಾಗುತ್ತದೆ. ರಕ್ತಹೀನತೆ ಇದ್ದರೆ ಡ್ರ್ಯಾಗನ್ ಹಣ್ಣನ್ನು ಸೇವಿಸಬಹುದು. ಇದನ್ನು ಪ್ರತಿದಿನ ತಿನ್ನುವುದರಿಂದ ರಕ್ತಹೀನತೆಯನ್ನು ಹೋಗಲಾಡಿಸಬಹುದು.
ಚರ್ಮ: ಡ್ರ್ಯಾಗನ್ ಹಣ್ಣಿನಲ್ಲಿರುವ ವಿಟಮಿನ್ ಸಿ ಚರ್ಮದಲ್ಲಿ ಕಾಲಜನ್ ಉತ್ಪಾದಿಸಲು, ಕೂದಲನ್ನು ಬಲಪಡಿಸಲು ಮತ್ತು ಕೂದಲು ಒಡೆಯುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಹೃದಯ: ಡ್ರ್ಯಾಗನ್ ಹಣ್ಣಿನಲ್ಲಿ ಒಮೆಗಾ-3 ಮತ್ತು ಒಮೆಗಾ-9 ಕೊಬ್ಬಿನಾಮ್ಲಗಳಿದ್ದು, ಇದು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಮಧುಮೇಹ: ಡ್ರ್ಯಾಗನ್ ಹಣ್ಣನ್ನು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಮಧುಮೇಹ ರೋಗಿಗಳಿಗೆ ಡ್ರ್ಯಾಗನ್ ಹಣ್ಣನ್ನು ಪ್ರಯೋಜನಕಾರಿ ಹಣ್ಣೆಂದು ಪರಿಗಣಿಸಲಾಗಿದೆ.
ಸೂಚನೆ: ಸಲಹೆಯನ್ನು ಒಳಗೊಂಡ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಗೆ ಜೀ ಕನ್ನಡ ನ್ಯೂಸ್ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ