Sonu Nigam: ಸೋನು ನಿಗಮ್ ಪ್ರಸಿದ್ಧ ಬಾಲಿವುಡ್ ಗಾಯಕ. ಕನ್ನಡದಲ್ಲಿಯೂ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಖ್ಯಾತ ಗಾಯಕ ಸೋನು ನಿಗಮ್ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಲೈವ್ ಪರ್ಫಾರ್ಮೆನ್ಸ್ ಸಮಯದಲ್ಲಿ ತೀವ್ರ ಬೆನ್ನು ನೋವು ಕಾಣಿಸಿಕೊಂಡಿದೆ. ನೋವಿನ ಹೊರತಾಗಿಯೂ ತಮ್ಮ ಕಾನ್ಸರ್ಟ್ ಮುಂದುವರಿಸಿದ್ದಾರೆ. ಬಳಿಕ ಅಸ್ವಸ್ಥರಾಗದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇತ್ತೀಚೆಗೆ ಪುಣೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಅವರಿಗೆ ಇದ್ದಕ್ಕಿದ್ದಂತೆ ಬೆನ್ನು ನೋವು ಕಾಣಿಸಿಕೊಂಡಿತು. ನಂತರ ಅವರ ಸ್ಥಿತಿ ತುಂಬಾ ಗಂಭೀರವಾಯಿತು. ಬಳಿಕ ಅವರನ್ನು ಆಸ್ಪತಗರೆಗೆ ಕರೆದೊಯ್ಯಲಾಯಿತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸೋನು ನಿಗಮ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಬೆನ್ನು ನೋವಿನ ಬಗ್ಗೆ ಮಾತನಾಡಿದ್ದಾರೆ. ತೀವ್ರ ಬೆನ್ನು ನೋವು ಇದ್ದರೂ, ಅವರು ಲೈವ್ ಕಾನ್ಸರ್ಟ್ ಸಮಯದಲ್ಲಿ ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸಲು ಬಯಸಲಿಲ್ಲ. ಪೂರ್ಣ ಉತ್ಸಾಹದಿಂದ ಅದ್ಭುತ ಪ್ರದರ್ಶನ ನೀಡಿದರು. ಆ ಬಳಿಕ ಗಾಯಕ ಅಸ್ವಸ್ಥರಾಗಿದ್ದಾರೆ. ಈ ಘಟನೆಯ ನಂತರ, ಸೋನು ನಿಗಮ್ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊ ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಸಂಪೂರ್ಣ ಕಥೆಯನ್ನು ಹೇಳಿದರು.
ಇದನ್ನೂ ಓದಿ: ತರುಣ್ ಸುದೀರ್ ರವರಿಂದ ಅನಾವರಣವಾಯಿತು "31 DAYS" ಚಿತ್ರದ ಎರಡನೇ ಹಾಡು
ಇದು ನನ್ನ ಜೀವನದ ಅತ್ಯಂತ ಕಷ್ಟಕರವಾದ ದಿನವಾಗಿತ್ತು. ಆದರೆ ತೃಪ್ತಿಕರವಾದ ದಿನವೂ ಆಗಿತ್ತು. ಹಾಡನ್ನು ಹಾಡುವಾಗ ನನ್ನ ಬೆನ್ನುಮೂಳೆಯಲ್ಲಿ ಸೆಳೆತ ಉಂಟಾಯಿತು. ಆದರೆ ನಾನು ಅದನ್ನು ಹೇಗೋ ನಿಭಾಯಿಸಿದೆ. ನನ್ನ ಪ್ರೇಕ್ಷಕರು ಮತ್ತು ಅಭಿಮಾನಿಗಳಿಗೆ ನಾನು ಯಾವಾಗಲೂ ಅತ್ಯುತ್ತಮ ಅನುಭವವನ್ನು ನೀಡಲು ಬಯಸುತ್ತೇನೆ. ಹಾಗಾಗಿ ನನ್ನ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸಿದೆ. ಈ ನೋವು ತನಗೆ ಅಸಹನೀಯವಾಗಿತ್ತು ಮತ್ತು ಯಾರೋ ಬೆನ್ನುಮೂಳೆಯಲ್ಲಿ ಸೂಜಿಯನ್ನು ಚುಚ್ಚಿದಂತೆ ಭಾಸವಾಯಿತು ಎಂದು ಸೋನು ನಿಗಮ್ ಹೇಳಿದ್ದಾರೆ.
ನನ್ನ ಬೆನ್ನುಮೂಳೆ ಸ್ವಲ್ಪ ಅಲುಗಾಡಿದರೂ, ಸೂಜಿ ಒಳಗೆ ಹೋಗಿದಂತೆ ಭಾಸವಾಯಿತು. ಆದರೆ ಸರಸ್ವತಿ ಮಾತೆಯ ಆಶೀರ್ವಾದ ನನ್ನೊಂದಿಗಿತ್ತು, ಇದರಿಂದಾಗಿ ನಾನು ಇದನ್ನೆಲ್ಲಾ ಮಾಡಲು ಸಾಧ್ಯವಾಯಿತು ಎಂದಿದ್ದಾರೆ. ಸರಸ್ವತಿ ಜಿ ನಿನ್ನೆ ರಾತ್ರಿ ನನ್ನ ಕೈ ಹಿಡಿದಿದ್ದರು ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಜೊತೆ ಗುಟ್ಟಾಗಿ ನಡೀತಾ ವಿಜಯ್ ದೇವರಕೊಂಡ ಎಂಗೇಜ್ಮೆಂಟ್!? ನಿವೃತ್ತಿ ಬಗ್ಗೆ ಮಾತನಾಡಿದ್ದು ಇದಕ್ಕೇನಾ?
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.