ಬೆಂಗಳೂರು : ವಾಸ್ತು ಶಾಸ್ತ್ರದಲ್ಲಿ ಹೇಳಲಾದ ನಿಯಮಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಸಂಪತ್ತು ಮತ್ತು ಸಂತೋಷ ಹೆಚ್ಚಾಗುತ್ತದೆ. ಮನೆಯಲ್ಲಿ ಸಕಾರಾತ್ಮಕತೆ ಇರುತ್ತದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಹುಡುಕಿಕೊಂಡು ಬರುತ್ತದೆ. ವಾಸ್ತು ಶಾಸ್ತ್ರದಲ್ಲಿ, ಪತಿ ಪತ್ನಿ ಅನುಸರಿಸಲೆಬೇಕಾದ ಕೆಲವು ನಿಯಮಗಳನ್ನು ಹೇಳಲಾಗಿದೆ.ಈ ನಿಯಮಗಳ ಪ್ರಕಾರ ಜೀವನ ನಡೆಸಿದರೆ ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಇಬ್ಬರ ನಡುವಿನ ಸಂಬಂಧ ಗಟ್ಟಿಯಾಗುತ್ತದೆ.
ಪತ್ನಿ ಪತಿಯ ಈ ಮಗ್ಗುಲಲ್ಲಿ ಮಲಗಬೇಕು :
ವಾಸ್ತು ಶಾಸ್ತ್ರದ ಪ್ರಕಾರ ಪತ್ನಿ ಪತಿಯ ಎಡಭಾಗದಲ್ಲಿ ಮಲಗಬೇಕು. ಪತ್ನಿಯು ಪತಿಯ ಎಡಭಾಗದಲ್ಲಿ ಮಲಗುವುದು ಶುಭ. ಇದರಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಗಂಡನ ಆಯಸ್ಸು ಮನೆಯಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚಾಗುತ್ತದೆ.
ಇದನ್ನೂ ಓದಿ : ಮಕರ ರಾಶಿಯಲ್ಲಿ ಬುಧ ಅಸ್ತ: ಈ ರಾಶಿಯವರಿಗೆ ಸವಾಲಿನ ಸಮಯ, ಟೆನ್ಷನ್ ಹೆಚ್ಚಳ, ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆ ಅಗತ್ಯ
ಪುರಾಣಗಳ ಪ್ರಕಾರ, ಶಿವನು ಅರ್ಧನಾರೇಶ್ವರನ ರೂಪವನ್ನು ಪಡೆದಾಗ, ಅವನ ಎಡ ದೇಹದಿಂದ ಸ್ತ್ರೀ ಅಂಶ ಅಂದರೆ ತಾಯಿ ಪಾರ್ವತಿ ಕಾಣಿಸಿಕೊಳ್ಳುತ್ತಾಳೆ. ಅದಕ್ಕಾಗಿಯೇ ಹಿಂದೂ ಧರ್ಮದಲ್ಲಿ ಹೆಂಡತಿಯನ್ನು ವಮಾಂಗಿ ಎಂದು ಕರೆಯಲಾಗುತ್ತದೆ. ಅಂದರೆ ಎಡ ಬದಿಯ ಅಧಿಪತಿ. ಆದ್ದರಿಂದ, ಮದುವೆಯ ನಂತರ, ಪ್ರತಿ ಶುಭ ಕಾರ್ಯದಲ್ಲಿ, ಹೆಂಡತಿಯು ಗಂಡನ ಎಡಭಾಗದಲ್ಲಿ ಕುಳಿತುಕೊಳ್ಳುತ್ತಾಳೆ. ಹಾಗೆಯೇ ಪತ್ನಿ ಮಲಗುವಾಗಲೂ ಗಂಡನ ಎಡಭಾಗದಲ್ಲಿಯೇ ಮಲಗಬೇಕು.
ಈ ವಿಷಯಗಳನ್ನು ನೆನಪಿನಲ್ಲಿಡಿ :
ವಾಸ್ತು ಶಾಸ್ತ್ರದ ಪ್ರಕಾರ ಗಂಡ ಹೆಂಡತಿಯ ಕೋಣೆ ದಕ್ಷಿಣ ದಿಕ್ಕಿನಲ್ಲಿರಬೇಕು. ಈ ಕಾರಣದಿಂದಾಗಿ ಅವರು ಯಾವಾಗಲೂ ಆರೋಗ್ಯವಾಗಿರುತ್ತಾರೆ. ದಾಂಪತ್ಯ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಪ್ರೀತಿ ಇರುತ್ತದೆ.
- ಪತಿ ಪತ್ನಿ ಮಲಗುವ ಮಂಚ ಮರದಿಂದ ಮಾಡಲ್ಪಟ್ಟಿರಬೇಕು ಮತ್ತು ಉತ್ತಮ ಸ್ಥಿತಿಯಲ್ಲಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಮುರಿದ ಮಂಚದಲ್ಲಿ ಪತಿ ಪತ್ನಿ ಎಂದಿಗೂ ಮಲಗಬೇಡಿ. ಕಬ್ಬಿಣದ ಮಂಚದ ಮೇಲೆ ಕೂಡಾ ಮಲಗುವಂತಿಲ್ಲ. ಇದು ಜೀವನದಲ್ಲಿ ಬಡತನ, ನಕಾರಾತ್ಮಕತೆ ಮತ್ತು ಒತ್ತಡವನ್ನು ಹೆಚ್ಚಿಸುತ್ತದೆ.
- ಮಲಗುವ ಕೋಣೆಯಲ್ಲಿ ಪೊರಕೆ, ಡಸ್ಟ್ ಬಿನ್, ಜಂಕ್ ಇಡಬೇಡಿ. ಮಲಗುವ ಕೋಣೆ ಯಾವಾಗಲೂ ಸ್ವಚ್ಛವಾಗಿರಬೇಕು ಮತ್ತು ವ್ಯವಸ್ಥಿತವಾಗಿರಬೇಕು.
(ಸೂಚನೆ : ಈ ಸುದ್ದಿಯನ್ನು ಬರೆಯುವಾಗ ನಾವು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ಜೀ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.