viral Girl Monalisa: ಮಹಾಕುಂಭಮೇಳದಲ್ಲಿ ಪಾದಚಾರಿ ಮಾರ್ಗದಲ್ಲಿ ಕುಳಿತು ರುದ್ರಾಕ್ಷಗಳನ್ನು ಮಾರುವ ಸುಂದರ ಯುವತಿ ಮೊನಾಲಿಸಾ ಭೋಸಲೆ ರಾತ್ರೋರಾತ್ರಿ ಪ್ರಸಿದ್ಧಿಯಾಗಿದ್ದಾಳೆ. ಇಂದು ಅವರು ಒಬ್ಬ ತಾರೆಯಾಗಿ ಗುರುತಿಸಲ್ಪಡುತ್ತಿದ್ದಾರೆ. ಮೊನಾಲಿಸಾಳ ಸುಂದರ ಕಣ್ಣುಗಳು ಮತ್ತು ಅಪಾರ ಸೌಂದರ್ಯಕ್ಕೆ ಅನೇಕ ಜನರು ಮಾರುಹೋಗಿದ್ದಾರೆ. ಮೊನಾಲಿಸಾ ಅವರ ಜನಪ್ರಿಯತೆಯನ್ನು ನೋಡಿ, ಪ್ರಸಿದ್ಧ ಚಲನಚಿತ್ರ ನಿರ್ಮಾಪಕರು ಅವರಿಗೆ ಚಿತ್ರವೊಂದನ್ನು ನೀಡಲು ಮುಂದಾಗಿದ್ದಾರೆ. ನಿರ್ದೇಶಕ ಸನೋಜ್ ಮಿಶ್ರಾ ಅವರ 'ದಿ ಡೈರಿ ಆಫ್ ಮಣಿಪುರ' ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಮಧ್ಯೆ ನಿರ್ಮಾಪಕ ಜಿತೇಂದ್ರ ನಾರಾಯಣ್ ಅವರು ಸನೋಜ್ ಅವರು ಮೊನಾಲಿಸಾ ಅವರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೊನಾಲಿಸಾ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ವೀಡಿಯೊಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ. ಕೆಲವು ವೀಡಿಯೊಗಳಲ್ಲಿ, ಮೊನಾಲಿಸಾ ನಟನಾ ಪಾಠಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು. ಇದೆಲ್ಲದರ ನಡುವೆ ಸನೋಜ್ ಮೇಲೆ ಮೊನಾಲಿಸಾಗೆ ಮೋಸ ಮಾಡಿದ ಆರೋಪವಿದೆ. ನಿರ್ಮಾಪಕ ಜಿತೇಂದ್ರ ನಾರಾಯಣ್ ಅವರು ಸನೋಜ್ ವಿರುದ್ಧ ಈ ಆರೋಪಗಳನ್ನು ಮಾಡಿದ್ದಾರೆ.
ಇದನ್ನೂ ಓದಿ-"ಮಾರುತ" ನ ಹಾಡುಗಳಿಗೆ ಧ್ವನಿಯಾದ ಹೆಸರಾಂತ ಗಾಯಕ - ಗಾಯಕಿಯರು!
ಜಿತೇಂದ್ರ ನಾರಾಯಣ್ ಸಿಂಗ್ ಅಲಿಯಾಸ್ ವಾಸಿಮ್ ರಿಜ್ವಿ ಇತ್ತೀಚೆಗೆ ಟಾಪ್ ಸೀಕ್ರೆಟ್ಗೆ ಸಂದರ್ಶನ ನೀಡಿದರು. ಈ ಸಂದರ್ಶನದಲ್ಲಿ, ಸನೋಜ್ ಬಡ ಕುಟುಂಬದ ಹುಡುಗಿಯೊಬ್ಬಳನ್ನು ಬಳಸಿಕೊಳ್ಳುತ್ತಿದ್ದಾರೆ.. ಆತ ಆ ಮುಗ್ಧ ಹುಡುಗಿಯರನ್ನು ಸಿನಿಮಾಗಳಲ್ಲಿ ಕೆಲಸ ಮಾಡುವಂತೆ ಆಮಿಷ ಒಡ್ಡಿ ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಾನೆ ಎಂದು ಜಿತೇಂದ್ರ ಹೇಳಿದ್ದಾರೆ.. ನನಗೆ ಸನೋಜ್ ಜೊತೆ ಕೆಲಸ ಮಾಡುವಾಗ ತುಂಬಾ ಕೆಟ್ಟ ಅನುಭವ ಆಗಿತ್ತು.. ಸನೋಜ್ ನಾನು ಮೂರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ.. ಎಂದು ಹೇಳಿಕೊಂಡಿದ್ದಾರೆ..
ಇದನ್ನೂ ಓದಿ-"ಮಾರುತ" ನ ಹಾಡುಗಳಿಗೆ ಧ್ವನಿಯಾದ ಹೆಸರಾಂತ ಗಾಯಕ - ಗಾಯಕಿಯರು!
"ಮೊನಾಲಿಸಾ ಮತ್ತು ಅವರ ಕುಟುಂಬದ ಬಗ್ಗೆ ನನಗೆ ತುಂಬಾ ವಿಷಾದವಿದೆ." ಅವರು ತುಂಬಾ ಸರಳ ಮತ್ತು ನೇರ ಜನರು. ಆದರೆ ಸನೋಜ್ ಮಿಶ್ರಾ ಅವರಂತಹ ಜನರು ನಿಮ್ಮ ಬಾಗಿಲಲ್ಲಿ ನಿಂತು ಕರೆದರೇ ಯಾವುದೇ ಪ್ರಶ್ನೆ ಮಾಡದೆ, ಅವರು ತಮ್ಮ ಮಗಳನ್ನು ಸನೋಜ್ಗೆ ಒಪ್ಪಿಸಿದ್ದಾರೆ.. ಇದೇ ವಿಚಿತ್ರ ಎಂದು ಜಿತೇಂದ್ರ ಹೇಳಿದ್ದಾರೆ.. ಈ ಸಂದರ್ಶನದಲ್ಲಿ, ಜಿತೇಂದ್ರ ಅವರು ಪ್ರಸ್ತುತ ಯಾರೂ ಸನೋಜ್ ಅವರೊಂದಿಗೆ ಕೆಲಸ ಮಾಡಲು ಸಿದ್ಧರಿಲ್ಲ ಎಂದು ಹೇಳಿಕೊಂಡಿದ್ದಾರೆ..
ಮೊನಾಲಿಸಾ ತನ್ನ ಮೊದಲ ಚಿತ್ರಕ್ಕೆ ಎಷ್ಟು ಹಣ ಪಡೆದಿದ್ದಾರೆ?
ಜೀತೇಂದ್ರ ಮತ್ತು ಸನೋಜ್ ನಡುವಿನ ವಿವಾದ ನಡೆಯುತ್ತಿರುವಾಗಲೇ, ಮೊನಾಲಿಸಾ ತನ್ನ ಮೊದಲ ಚಿತ್ರಕ್ಕೆ ಎಷ್ಟು ಹಣ ಪಡೆದರು ಎಂಬುದರ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮೊನಾಲಿಸಾ ತಮ್ಮ ಮೊದಲ ಚಿತ್ರಕ್ಕೆ 21 ಲಕ್ಷ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎಂಬ ವದಂತಿಗಳಿವೆ. ಅದರಲ್ಲಿ 1 ಲಕ್ಷ ರೂ.ಗಳನ್ನು ಮುಂಗಡವಾಗಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.