Viral Video : ಕೆಲಸದ ಜೊತೆಗೆ ಅದೃಷ್ಟವೂ ಇರಬೇಕು ಎಂದು ದೊಡ್ಡವರು ಹೇಳುತ್ತಾರೆ. ನಾವು ಅದೃಷ್ಟವಂತರಾಗಿದ್ದರೆ, ನಾವು ಕಷ್ಟಪಟ್ಟು ಕೆಲಸ ಮಾಡದಿದ್ದರೂ ಸಹ ಗೆಲುವು ಪಡೆಯಬಹುದು. ಅದೃಷ್ಟ ನಿಮ್ಮ ಕೈ ಹಿಡಿತು ಅಂದ್ರೆ ನೀವು ಸಮುದ್ರದ ಮಧ್ಯದಲ್ಲಿದ್ದರೂ ಸಹ, ಹೇಗೋ ದಡಕ್ಕೆ ತೇಲಿ ಬರುತ್ತಿದ್ದಾರೆ... ಇದಲ್ಲದೆ, ಎಷ್ಟೇ ದೊಡ್ಡ ಅಪಘಾತವಾದರೂ, ಸಣ್ಣ ಗಾಯವೂ ಇಲ್ಲದೆ ನೀವು ಬದುಕುಳಿಯಬಹುದು.
ಇದನ್ನೆಲ್ಲಾ ಈಗ ಏಕೆ ಹೇಳುತ್ತಿದ್ದೇವೆ ಅಂತ ನೀವು ಭಾವಿಸಿರಬಹುದು.. ಬಹುಷಃ ಈ ವಿಡಿಯೋ ಬಹುಷಃ ಈ ವಿಡಿಯೋ ನೀವು ನೋಡಿದರೆ ಖಂಡಿತವಾಗಿಯೂ "ಅದೃಷ್ಟ"ದ ಬಗ್ಗೆ ನಿಮಗೆ ನಂಬಿಕೆ ಬರುತ್ತದೆ. ಅಷ್ಟೇ ಅಲ್ಲ ಯಮಧರ್ಮ ರಾಜನಿಗೂ ರಜೆ ಇರುತ್ತಾ..? ಎನ್ನುವ ಡೌಟ್ ಬರುತ್ತೆ..
ಇದನ್ನೂ ಓದಿ:ಈ ಫೋಟೋದಲ್ಲಿ ಮಧ್ಯದಲ್ಲಿ ಚಪ್ಪಲಿ ಹಾಕಿಕೊಂಡು ನಿಂತಿರುವ ವ್ಯಕ್ತಿಯನ್ನು ಗುರುತಿಸುವೀರಾ?
ರಸ್ತೆಗಳಲ್ಲಿ ಬೈಕ್ ಸವಾರಿ ಮಾಡುವಾಗ ಮೈ ತುಂಬಾ ಕಣ್ಣಿರಬೇಕು. ತುಂಬಾ ಜಾಗರೂಕರಾಗಿರಬೇಕು. ಇದೇ ರೀತಿಯ ವಿಡಿಯೋವೊಂದು ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಹೈವೇ ನಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು.. ಲಾರಿ ಮತ್ತು ಕಾರಿನ ಮದ್ಯ ಸಿಲುಕಿ.. ಡಿಕ್ಕಿ ಹೊಡೆದು ಲಾರಿ ಚಕ್ರದ ಹತ್ತಿರವೇ ಬಿದ್ದರೂ.. ಯಾವುದೇ ಗಾಯಗಳಿಲ್ಲದೆ ಬದುಕುಳಿದಿದ್ದಾರೆ.. ಈ ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
Life doesn't give everyone a second chance; hope they learn from their mistakes
Location - Ranchi- Patna highway
Shared by Dr. Shankar Mahto #driveresponsibly pic.twitter.com/561LfAF60I— Prateek Singh (@Prateek34381357) February 15, 2025
ವೈರಲ್ ಆಗಿರುವ ವಿಡಿಯೋದ ಪ್ರಕಾರ, ಹೆದ್ದಾರಿಯ ಒಂದು ಬದಿಯಲ್ಲಿ ಲಾರಿ ಮತ್ತು ಇನ್ನೊಂದು ಬದಿಯಲ್ಲಿ ಕಾರು ಹೋಗುತ್ತಿವೆ. ಈ ಸಮಯದಲ್ಲಿ, ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಎರಡರ ಮಧ್ಯ ಸಾಗುತ್ತಾರೆ. ಕಾರನ್ನು ಹಿಂದಿಕ್ಕುವ ಮೊದಲೇ ಬೈಕ್ ಕಾರಿಗೆ ಡಿಕ್ಕಿ ಹೊಡೆದು, ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಇಬ್ಬರೂ ಲಾರಿಯ ಚಕ್ರಗಳ ಕೆಳಗೆ ಬೀಳುವ ಹಂತದಲ್ಲಿ.. ಕೆಲವೇ ಸೆಕೆಂಡುಗಳಲ್ಲಿ ಪಾರಾಗಿದ್ದಾರೆ..
ಇದನ್ನೂ ಓದಿ:ಭಾರತದಲ್ಲಿ ಶೀಘ್ರದಲ್ಲಿಯೇ 9 ರಿಂದ 16 ವರ್ಷ ವಯಸ್ಸಿನ ಬಾಲಕಿಯರಿಗೆ ಕ್ಯಾನ್ಸರ್ ಲಸಿಕೆ..!
ಇಡೀ ಘಟನೆಯನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗುತ್ತಿದೆ. ದೃಶ್ಯವನ್ನು ಕಂಡ ನೆಟ್ಟಿಗರು "ಅದೃಷ್ಟ ಅಂದ್ರೆ ಇದೇ" ಅಂತ ಕಾಮೆಂಟ್ ಮಾಡುತ್ತಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.