Railway recruitment scam: ಭಾರತೀಯ ರೈಲ್ವೆ ಇಲಾಖೆಯ ನೇಮಕಾತಿಯಲ್ಲಿ ಬಹುದೊಡ್ಡ ಹಗರಣ ನಡೆದಿದೆ. ರೈಲ್ವೆ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಲಂಚ ಪಡೆದ ಪ್ರಕರಣ ಬೆಳಕಿಗೆ ಬಂದಿದೆ. ಈ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಲವಾರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ವಡೋದರಾ, ಮುಂಬೈ ಮತ್ತು ಇತರ ಸ್ಥಳಗಳ ರೈಲ್ವೆ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ರೈಲ್ವೆ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಲಂಚ ಪಡೆದ ಪ್ರಕರಣದಲ್ಲಿ ಅಂಕುಶ್ ವಾಸನ್ (IRPS, ಪಶ್ಚಿಮ ರೈಲ್ವೆ, ವಡೋದರಾ), ಸಂಜಯ್ ಕುಮಾರ್ ತಿವಾರಿ (ಉಪ ಮುಖ್ಯ ವಾಣಿಜ್ಯ ವ್ಯವಸ್ಥಾಪಕ, ಚರ್ಚ್‌ಗೇಟ್, ಪಶ್ಚಿಮ ರೈಲ್ವೆ, ಮುಂಬೈ), ನೀರಜ್ ಸಿನ್ಹಾ (ಉಪ ಸೂಪರಿಂಟೆಂಡೆಂಟ್) ಮತ್ತು ಮುಖೇಶ್ ಮೀನಾ ಸೇರಿದಂತೆ ಹಲವಾರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
4-5 ಲಕ್ಷ ರೂ. ಲಂಚ ಸ್ವೀಕಾರ!
ಸಿಬಿಐನಿಂದ ಬಂದ ಮಾಹಿತಿಯ ಪ್ರಕಾರ, ಹಣ ಪಾವತಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಬಯಸುವ ಒಟ್ಟು 10 ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಪ್ರತಿಯೊಬ್ಬ ಅಭ್ಯರ್ಥಿಯಿಂದ 4-5 ಲಕ್ಷ ರೂಪಾಯಿಗಳ ಲಂಚ ಸ್ವೀಕರಿಸಲಾಗಿದೆ. ಈ ಭ್ರಷ್ಟ ಅಧಿಕಾರಿಗಳು ಅಭ್ಯರ್ಥಿಗಳಿಂದ ಲಂಚವನ್ನ ನಗದು ಬದಲಾಗಿ ಚಿನ್ನದಲ್ಲಿ ಸ್ವೀಕರಿಸಿದ್ದರು ಎನ್ನಲಾಗಿದೆ. ಪಶ್ಚಿಮ ರೈಲ್ವೆ ನಡೆಸಲಿರುವ ಸಮಿತಿ ವಿಭಾಗದ ಪರೀಕ್ಷೆಯಲ್ಲಿ ಆಯ್ಕೆಗಾಗಿ ಲಂಚ ನೀಡಲು ಸಿದ್ಧರಿರುವ 10 ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಅಂಕುಶ್ ವಾಸನ್ ಸಂಜಯ್ ಕುಮಾರ್ ತಿವಾರಿಗೆ ಸೂಚಿಸಿದ್ದರು ಎಂದು ಸಿಬಿಐ ತನಿಖೆಯಲ್ಲಿ ಕಂಡುಬಂದಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳೇ ಗುಡ್ ನ್ಯೂಸ್..! ಬೇಸಿಗೆ ಹಿನ್ನೆಲೆ ರಾಜ್ಯದ ಎಲ್ಲಾ ಶಾಲೆಗಳಿಗೆ ಅರ್ಧ ದಿನ ರಜೆ..
ಅಂಕುಶ್, ಸಂಜಯ್‌ಗೆ ಮುಖೇಶ್ ಮೀನಾ ಜೊತೆ ಸಂಪರ್ಕದಲ್ಲಿರಿ. ಲಂಚ ನೀಡಲು ಎಷ್ಟು ಅಭ್ಯರ್ಥಿಗಳು ಸಿದ್ಧರಿದ್ದಾರೆ ಎಂಬುದನ್ನು ಪತ್ತೆ ಮಾಡಿ, ಅವರಿಂದ ಹಣ ಪಡೆಯುವಂತೆ ತಿಳಿಸಿದ್ದರಂತೆ. ಇದಾದ ನಂತರ, ಸಂಜಯ್ ಕುಮಾರ್ ತಿವಾರಿ ಅವರು ಮುಖೇಶ್ ಮೀನಾ ಅವರಿಂದ ಆಸಕ್ತ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಮುಖೇಶ್ ಮೀನಾ ಅವರು ಈಗಾಗಲೇ 5 ಅಭ್ಯರ್ಥಿಗಳಿಂದ ಹಣ ಪಡೆದಿದ್ದಾರೆಂದು ತಿಳಿದುಬಂದಿದೆ.
ಇಬ್ಬರೂ ಇದಕ್ಕೆ ಒಪ್ಪಿಕೊಂಡರು
ಸಂಗ್ರಹಿಸಿದ ಲಂಚವನ್ನು ಮುಖೇಶ್ ಮೀನಾ ನೇರವಾಗಿ ಎಸ್.ಕೆ.ತಿವಾರಿಗೆ ಹಸ್ತಾಂತರಿಸುವುದಾಗಿ ಮತ್ತು ಇದರಲ್ಲಿ ಯಾವುದೇ ಮಧ್ಯವರ್ತಿ ಇರಬಾರದೆಂದು ಒಪ್ಪಿಕೊಂಡಿದ್ದರು. ನಂತರ ಅಂಕುಶ್ ವಾಸನ್ ಮತ್ತು ಎಸ್.ಕೆ.ತಿವಾರಿ ನಡುವೆ ಈ ಬಗ್ಗೆ ಚರ್ಚೆ ನಡೆಯಿತು. ಮುಖೇಶ್ ಮೀನಾ ಆನಂದ್ ತಲುಪಿದಾಗ, ಮುಖೇಶ್‌ನಿಂದ ಹಣ ಸಂಗ್ರಹಿಸಲು ಅಂಕುಶ್ ವಾಸನ್ ಅವರು ಸಂಜಯ್ ತಿವಾರಿಗೆ ಸೂಚಿಸಿದ್ದರು. ಆಯ್ಕೆಗಾಗಿ 4 ಜನರಿಗೆ ಹಣ ನೀಡಲು ವ್ಯವಸ್ಥೆ ಮಾಡಿರುವುದಾಗಿ ನೀರಜ್ ಸಿನ್ಹಾ ಸಂಜಯ್‌ಗೆ ತಿಳಿಸಿದ್ದರು ಎನ್ನಲಾಗಿದೆ. ರೈಲ್ವೆ ಇಲಾಖೆಯಲ್ಲಿ ನಡೆಯುವ ವಿವಿಧ ನೇಮಕಾತಿ ವೇಳೆ ಲಂಚ ಸ್ವೀಕರಿಸಿ ಹುದ್ದೆ ನೀಡುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿವೆ. ಇದಕ್ಕೆ ರೈಲ್ವೆ ಇಲಾಖೆ ಕಡಿವಾಣ ಹಾಕಬೇಕಿದೆ.
ಇದನ್ನೂ ಓದಿ: 10, 12 ನೇ ತರಗತಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಪಬ್ಲಿಕ್ ಪರೀಕ್ಷೆ!? ಈ ಮಹತ್ವದ ನಿರ್ಧಾರಕ್ಕೆ ಕಾರಣವೇನು?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.