15 ನೇ ವಯಸ್ಸಿಗೆ ಮದುವೆ, 17 ವರ್ಷಕ್ಕೆ ತಾಯಿ.. ಆದರೂ ಆಲಿಯಾ, ರಶ್ಮಿಕಾಗಿಂತಲೂ ಫೇಮಸ್‌ ಈ ಸ್ಟಾರ್‌ ನಟಿ !

Moushumi Chatterjee: ಕೆಲವು ನಟಿಯರು ತಮ್ಮ ಸೌಂದರ್ಯ ಮತುತ ನಟನೆಯಿಂದ ಜನರ ಮನಸ್ಸಿನಲ್ಲಿ ನೆಲೆ ಪಡೆದರು. ಅವರು ಸಿನಿರಂಗದಿಂದ ದೂರವಾದರು ಜನ ಮಾತ್ರ ಅವರನ್ನು ಮರೆತಿಲ್ಲ. ಮದುವೆ ಮತ್ತು ಮಕ್ಕಳಾದ ನಂತರವೂ ಬಾಲಿವುಡ್ ನಟಿಯರಿಗೆ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ. 

Written by - Chetana Devarmani | Last Updated : Feb 4, 2025, 01:37 PM IST
  • 15 ನೇ ವಯಸ್ಸಿಗೆ ಮದುವೆ
  • 17 ವರ್ಷಕ್ಕೆ ತಾಯಿ ಆದ ನಟಿ
  • ಫುಲ್‌ ಫೇಮಸ್‌ ಈ ಸ್ಟಾರ್‌ ನಟಿ !
15 ನೇ ವಯಸ್ಸಿಗೆ ಮದುವೆ, 17 ವರ್ಷಕ್ಕೆ ತಾಯಿ.. ಆದರೂ ಆಲಿಯಾ, ರಶ್ಮಿಕಾಗಿಂತಲೂ ಫೇಮಸ್‌ ಈ ಸ್ಟಾರ್‌ ನಟಿ ! title=

Moushumi Chatterjee: ಕೆಲವು ನಟಿಯರು ತಮ್ಮ ಸೌಂದರ್ಯ ಮತುತ ನಟನೆಯಿಂದ ಜನರ ಮನಸ್ಸಿನಲ್ಲಿ ನೆಲೆ ಪಡೆದರು. ಅವರು ಸಿನಿರಂಗದಿಂದ ದೂರವಾದರು ಜನ ಮಾತ್ರ ಅವರನ್ನು ಮರೆತಿಲ್ಲ. ಮದುವೆ ಮತ್ತು ಮಕ್ಕಳಾದ ನಂತರವೂ ಬಾಲಿವುಡ್ ನಟಿಯರಿಗೆ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ. ಪ್ರೇಕ್ಷಕರು ಅವರನ್ನು ಪ್ರೀತಿಸುತ್ತಿದ್ದಾರೆ. ಕರೀನಾ ಕಪೂರ್ ಖಾನ್ ನಿಂದ ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆ ವರೆಗೆ ಅನೇಕ ನಟಿಯರು ಮದುವೆ, ಮಗುವಾ ನಂತರವೂ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ. 

ಆದರೆ ಒಂದು ಕಾಲದಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ನಟಿಯರು ಮದುವೆ ಮತ್ತು ಹೆರಿಗೆಯ ನಂತರ ಕೆಲಸ ಹುಡುಕಲು ಅಲೆದಾಡುತಿದ್ದ ಕಾಲವಿತ್ತು. 1960 ರ ದಶಕದಲ್ಲಿ ಮದುವೆ ಮತ್ತು ಮಕ್ಕಳಾದ ನಂತರವೂ ಯಶಸ್ಸನ್ನು ಕಂಡುಕೊಂಡ ಒಬ್ಬ ನಟಿ ಇದ್ದರು. ಈ ಸುಂದರಿ 15 ನೇ ವಯಸ್ಸಿನಲ್ಲಿ ಸಿನಿರಂಗ ಎಂಟ್ರಿಕೊಟ್ಟರು. ಅದೇ ವರ್ಷ ವಿವಾಹವಾದರು. ಕೇವಲ ಎರಡು ವರ್ಷಗಳ ನಂತರ 17 ನೇ ವಯಸ್ಸಿನಲ್ಲಿ, ಅವರು ತಾಯಿಯಾದರು.

ನಾವು ಮಾತನಾಡುತ್ತಿರುವ ನಟಿ ಬೇರೆ ಯಾರೂ ಅಲ್ಲ, ಹಿಂದಿ ಮತ್ತು ಬಂಗಾಳಿ ಚಿತ್ರರಂಗದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾದ ಮೌಶುಮಿ ಚಟರ್ಜಿ. 1952 ರಲ್ಲಿ ಇಂದಿರಾ ಚಟರ್ಜಿಯಾಗಿ ಜನಿಸಿದ ಮೌಶುಮಿ ಚಟರ್ಜಿ 1967 ರ ಬಂಗಾಳಿ ಚಲನಚಿತ್ರ ಬಾಲಿಕಾ ವಧು ನಲ್ಲಿ ಬಾಲ ಕಲಾವಿದೆಯಾಗಿ ಪದಾರ್ಪಣೆ ಮಾಡಿದರು. ರಾತ್ರೋರಾತ್ರಿ ಸ್ಟಾರ್‌ ಆದರು. ಅವರ ಮೊದಲ ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸನ್ನು ಪಡೆಯಿತು. ಅವರು ತಮ್ಮ ಅಧ್ಯಯನವನ್ನು ಮುಂದುವರಿಸಲು ಬಯಸಿದ್ದರು. ಆದರೆ ಅವರ ಕುಟುಂಬದ ಕೋರಿಕೆಯ ಮೇರೆಗೆ ಪ್ರಸಿದ್ಧ ಭಾರತೀಯ ಸಂಗೀತ ನಿರ್ದೇಶಕ ಮತ್ತು ಗಾಯಕ ಹೇಮಂತ್ ಕುಮಾರ್ ಅವರ ಮಗ ಜಯಂತ್ ಮುಖರ್ಜಿ ಅವರನ್ನು ವಿವಾಹವಾದರು.

ಇದನ್ನೂ ಓದಿ: ಈ ಫೋಟೋದಲ್ಲಿರುವ ಪುಟ್ಟ ಹುಡುಗಿ ಇಂದು ಸೌತ್‌ ಇಂಡಸ್ಟ್ರಿ ಆಳುತ್ತಿರುವ ಸ್ಟಾರ್‌ ನಟಿ.. ಯಾರು ನೆನಪಾಯ್ತಾ?

ಸಂದರ್ಶನವೊಂದರಲ್ಲಿ ನಟಿ ತಮ್ಮ ಬಾಲ್ಯ ವಿವಾಹದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದರು. ನನ್ನ ತಂದೆ ಕ್ಯಾನ್ಸರ್‌ನ ಅಂತಿಮ ಹಂತದಲ್ಲಿದ್ದರು. ಅವರ ಕೊನೆಯ ಆಸೆ ನನ್ನ ಮದುವೆಯಾಗುವುದನ್ನು ನೋಡುವುದಾಗಿತ್ತು. ಆಗ ನನ್ನ ಮಾವ ನಾವು ಮದುವೆಯಾಗಬೇಕೆಂದು ಸೂಚಿಸಿದರು. ನಾನು ನನ್ನ ಪರೀಕ್ಷೆಗಳನ್ನು ಬಿಟ್ಟೆ. ಅದೇ ಸಮಯದಲ್ಲಿ ನನಗೆ ಚಲನಚಿತ್ರ ಆಫರ್ ಬಂದಿತು ಎಂದಿದ್ದರು.

1969 ರಲ್ಲಿ ಬಿಡುಗಡೆಯಾದ ಅವರ ಎರಡನೇ ಬಂಗಾಳಿ ಚಿತ್ರ ಪರಿಣೀತಾ ಇನ್ನೂ ದೊಡ್ಡ ಹಿಟ್ ಆಯಿತು. ಬಳಿಕ 1972 ರಲ್ಲಿ ಅನುರಾಗ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡದಿರು. ತಾನು ಎಷ್ಟು ಯಶಸ್ವಿಯಾಗಿದ್ದೇನೆಂದು ಮೌಶುಮಿಗೆ ತಿಳಿದಿರಲಿಲ್ಲ. "17 ನೇ ವಯಸ್ಸಿನಲ್ಲಿ  ನಾನು ತಾಯಿಯಾದೆ. ನನಗೆ ನನ್ನದೇ ಆದ ಮರ್ಸಿಡಿಸ್ ಸಿಕ್ಕಿತು. ಆ ಸಮಯದಲ್ಲಿ ಯಶಸ್ಸು ಎಂದರೆ ಏನು ಎಂದು ನನಗೆ ತಿಳಿದಿರಲಿಲ್ಲ. ದೊಡ್ಡ ಪರದೆಯ ಮೇಲೆ ನನ್ನ ಮುಖ ನೋಡಿ ನನಗೆ ತುಂಬಾ ಸಂತೋಷವಾಯಿತು" ಎಂದಿದ್ದಾರೆ. 

ಮೌಶುಮಿ ಚಟರ್ಜಿ 1970 ರ ದಶಕದಲ್ಲಿ ಅವರು ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾದರು. ನಿರಂತರವಾಗಿ ಹಿಟ್ ಚಿತ್ರಗಳನ್ನು ನೀಡಿದರು. 1980 ರ ದಶಕದ ಹೊತ್ತಿಗೆ, ಅವರು ಹಿಂದಿ ಮತ್ತು ಬಂಗಾಳಿ ಸಿನಿಮಾ ಎರಡರಲ್ಲೂ ಪೋಷಕ ಪಾತ್ರಗಳನ್ನು ವಹಿಸಿಕೊಳ್ಳಲು ಪ್ರಾರಂಭಿಸಿದರು. 1991 ರಲ್ಲಿ ರಾಜ್‌ಕುಮಾರ್ ಸಂತೋಷಿ ನಿರ್ದೇಶಿಸಿದ ಘಾಯಲ್ ಚಿತ್ರದಲ್ಲಿ ಅವರ ಅತ್ಯಂತ ಸ್ಮರಣೀಯ ಪಾತ್ರವಿತ್ತು, ಅಲ್ಲಿ ಅವರು ಸನ್ನಿ ಡಿಯೋಲ್ ಅವರ ಅತ್ತಿಗೆಯಾಗಿ ನಟಿಸಿದ್ದರು. 

ಒಂದು ದಿನ, ಸನ್ನಿ ಸೆಟ್‌ಗೆ ತಡವಾಗಿ ಬಂದು ಫೋನ್‌ನಲ್ಲಿ ಸಮಯ ಕಳೆದರು. ಅದು ಮೌಶುಮಿಯನ್ನು ಕೆರಳಿಸಿತು. ತಂದೆ ಧರ್ಮೇಂದ್ರ ಅವರ ಖ್ಯಾತಿಗೆ ಕಳಂಕ ತರಬೇಡಿ ಎಂದು ಸಲಹೆ ನೀಡಿದರು. ಈ ಘಟನೆಯ ನಂತರ, ಸನ್ನಿ ಅವಳಲ್ಲಿ ಕ್ಷಮೆಯಾಚಿಸಿದರು. ಸೆಟ್‌ನಲ್ಲಿ ಹೆಚ್ಚು ಶಿಸ್ತುಬದ್ಧರಾದರು ಎಂದು ಹೇಳಲಾಗುತ್ತದೆ.

ನೇರ ಮತ್ತು ದಿಟ್ಟ ಸ್ವಭಾವದಿಂದಾಗಿ ಮೌಶುಮಿ ಚಟರ್ಜಿ ಹಲವಾರು ಚಿತ್ರಗಳ ಅವಕಾಶ ಕಳೆದುಕೊಂಡರಂತೆ. "ನಾನು ಆ ಚಿತ್ರಗಳಿಗೆ ಸಹಿ ಹಾಕಿದ್ದೆ. ಆದರೆ ನಂತರ ನನ್ನನ್ನು ಆ ಚಿತ್ರಗಳಿಂದ ತೆಗೆದುಹಾಕಲಾಯಿತು. ನಾನು ಎಂದಿಗೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ನಾನು ಯಾವಾಗಲೂ ಎಲ್ಲದಕ್ಕೂ 'ಹೌದು' ಎಂದು ಹೇಳಬೇಕೆಂದು ನಿರೀಕ್ಷಿಸಲಾಗಿತ್ತು. ಆದರೆ ನಾನು ಹಾಗೆ ಮಾಡಲು ಸಾಧ್ಯವಾಗಲಿಲ್ಲ" ಎಂದಿದ್ದಾರೆ.

ಮೌಶುಮಿ ಚಟರ್ಜಿ ಅವರ ಕೊನೆಯ ಬಾಲಿವುಡ್ ಚಿತ್ರ 2015 ರಲ್ಲಿ ಬಿಡುಗಡೆಯಾದ ಡ್ರಾಮಾ ಪಿಕು, ಇದನ್ನು ಶೂಜಿತ್ ಸರ್ಕಾರ್ ನಿರ್ದೇಶಿಸಿದ್ದರು. ಇದರಲ್ಲಿ ಅವರು ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ದಿವಂಗತ ಇರ್ಫಾನ್ ಖಾನ್ ಅವರೊಂದಿಗೆ ಕಾಣಿಸಿಕೊಂಡರು. ಅವರು ಬಂಗಾಳಿ ಚಿತ್ರರಂಗದಲ್ಲಿ ನಟಿಸುವುದನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ: ಕುಂಭ ಮೇಳದ ವೈರಲ್‌ ಹುಡುಗಿ ಮೊನಾಲಿಸಾ ಮೊದಲ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಗೊತ್ತಾ..? ಇದಲ್ವಾ ಲಕ್‌ ಅಂದ್ರೆ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News