ಭಾರೀ ನಿರೀಕ್ಷೆ ಮೂಡಿಸಿರುವ ʼಹೆಬ್ಬುಲಿ ಕಟ್‌ʼ; ತೆರೆಗೆ ಅಪ್ಪಳಿಸಲಿದೆ ʼಕಿಚ್ಚʼನ ಅಭಿಮಾನಿಯ ಕಥೆ!!

Hebbuli Cut: ʼಹೆಬ್ಬುಲಿ' ಸಿನಿಮಾದಲ್ಲಿ ಕಿಚ್ಚ ಸುದೀಪರ ಕೇಶವಿನ್ಯಾಸವು ದೊಡ್ಡ ಟ್ರೆಂಡ್ ಸೃಷ್ಟಿಸಿತ್ತು. ʼಹೆಬ್ಬುಲಿ ಕಟ್‌ʼ ಎಂದೇ ಖ್ಯಾತಿಯಾಗಿದ್ದ ಈ ಹೇರ್‌ ಸ್ಟೈಲ್‌ ಇದೀಗ ಸಿನಿಮಾದ ಶೀರ್ಷಿಕೆಯಾಗಿರುವುದು ವಿಶೇಷ. ಈಗಾಗಲೇ ಚಿತ್ರತಂಡವು ಬಿಡುಗಡೆಗೊಳಿಸಿರುವ ಈ ಸಿನಿಮಾದ ಪೋಸ್ಟರ್‌ ಮತ್ತು ತುಣುಕುಗಳು ಗಮನ ಸೆಳೆಯುತ್ತಿವೆ.

Written by - Puttaraj K Alur | Last Updated : Feb 4, 2025, 08:56 PM IST
  • ಭಾರೀ ನಿರೀಕ್ಷೆ ಮೂಡಿಸಿರುವ ʼಹೆಬ್ಬುಲಿ ಕಟ್‌ʼ ಸಿನಿಮಾ
  • ತೆರೆಗೆ ಅಪ್ಪಳಿಸಲಿದೆ ಕಿಚ್ಚ ಸುದೀಪ್ ಅಭಿಮಾನಿಯ ಕಥೆ!!‌
  • ಯುವ ನಿರ್ದೇಶಕ ಭೀಮರಾವ್‌ಗೆ ನಟ ಸತೀಶ್‌ ನೀನಾಸಂ ಸಾಥ್
ಭಾರೀ ನಿರೀಕ್ಷೆ ಮೂಡಿಸಿರುವ ʼಹೆಬ್ಬುಲಿ ಕಟ್‌ʼ; ತೆರೆಗೆ ಅಪ್ಪಳಿಸಲಿದೆ ʼಕಿಚ್ಚʼನ ಅಭಿಮಾನಿಯ ಕಥೆ!! title=
ನಿರೀಕ್ಷೆ ಮೂಡಿಸಿರುವ ʼಹೆಬ್ಬುಲಿ ಕಟ್‌ʼ

Hebbuli Cut Kannada Movie: 2017ರಲ್ಲಿ ಕಿಚ್ಚ ಸುದೀಪ್‌ ನಟನೆಯ ʼಹೆಬ್ಬುಲಿʼ ಸಿನಿಮಾ ಗಮನ ಸೆಳೆದಿತ್ತು. ಈ ಸಿನಿಮಾದಲ್ಲಿ ಕಿಚ್ಚನ ಅದ್ಭುತ ಹೇರ್‌ ಸ್ಟೈಲ್‌ ಸಖತ್‌ ಸೌಂಡ್‌ ಮಾಡಿತ್ತು. ಈ ಸಿನಿಮಾ ನೋಡಿದ ಬಳಿಕ ಸುದೀಪ್‌ ಅವರ ಸಾವಿರಾರು ಅಭಿಮಾನಿಗಳು ʼಹೆಬ್ಬುಲಿʼ ಹೇರ್‌ ಸ್ಟೈಲ್‌ ಮಾಡಿಸಿಕೊಂಡು ಖುಷಿಪಟ್ಟಿದ್ದರು. ಸಮಾಜದ ಮೇಲೆ ಸಿನಿಮಾದ ಪ್ರಭಾವ ದೊಡ್ಡದು. ಸಿನಿಮಾ ನೋಡಿ ಜೀವನ ಬದಲಾಯಿಸಿಕೊಂಡವರು ಅನೇಕರಿದ್ದಾರೆ. 

ಸಿನಿಮಾ ಸಮಾಜದ ಮೇಲೆ ಹೇಗೆ ಪ್ರಭಾವ ಬೀರುತ್ತದೋ ಅದೇ ರೀತಿ ನಟ-ನಟಿಯರ ಅನುಕರಣೆ ಮಾಡುವ ದೊಡ್ಡ ಅಭಿಮಾನಿ ಬಳಗವೇ ಇದೆ. ತಮ್ಮ ನೆಚ್ಚಿನ  ನಟನ ಸಿನಿಮಾ ಬಿಡುಗಡೆಯಾದ ಮೇಲೆ ಅವರ ರೀತಿ ಬಾಡಿ ಬಿಲ್ಡ್‌ ಮಾಡುವುದು, ದುಬಾರಿ ಬಟ್ಟೆಗಳನ್ನ ಧರಿಸುವುದು, ಬೈಕ್‌ ಖರೀದಿಸುವುದು, ಸಿಗರೇಟ್‌ ಸೇದುವುದು ಅದೇ ರೀತಿ ಹೇರ್‌ ಸ್ಟೈಲ್‌ ಮಾಡಿಸುವುದು ಕೂಡ ನಡೆಯುತ್ತಲೇ ಇದೆ. ಅಂದು ʼಹೆಬ್ಬುಲಿʼ ಸಿನಿಮಾದ ಕಿಚ್ಚನ ಹೇರ್‌ ಸ್ಟೈಲ್‌ ಅಭಿಮಾನಿಗಳ ಮೇಲೆ ಎಷ್ಟು ಪ್ರಭಾವ ಬೀರಿತ್ತು ಅಂದ್ರೆ ಶಾಲಾ-ಕಾಲೇಜಿನ ಹುಡುಗರು ಸಲೂನ್‌ ಶಾಪ್‌ಗಳಿಗೆ ಕ್ಯೂ ಹಚ್ಚಿ ಹೆಬ್ಬುಲಿ ಹೇರ್‌ ಸ್ಟೈಲ್‌ ಮಾಡಿಸಿಕೊಂಡು ಖುಷಿಪಟ್ಟಿದ್ದರು. 

ಇದನ್ನೂ ಓದಿ: ಫೆಬ್ರವರಿ 7ಕ್ಕೆ ರೂಪೇಶ್ ಶೆಟ್ಟಿ ಹಾಗೂ ಜಾಹ್ನವಿ ನಟನೆಯ ಅಧಿಪತ್ರ ರಿಲೀಸ್

ಶಾಲಾ ವಿದ್ಯಾರ್ಥಿಗಳನ್ನ ಸೆಳೆದಿದ್ದ ಈ ಹೇರ್‌ ಸ್ಟೈಲ್‌ ಶಿಕ್ಷಕರ ಕೆಂಗಣ್ಣಿಗೂ ಗುರಿಯಾಗಿತ್ತು. ಈ ರೀತಿ ಹೇರ್‌ ಕಟ್ಟಿಂಗ್‌ ಮಾಡಬೇಡಿ ಅಂತಾ ಶಾಲೆಯ ಪ್ರಾಂಶುಪಾಲರು ಪತ್ರವನ್ನೇ ಬರೆದಿದ್ದರು. ಇದೀಗ ಇದೇ ಹೆಸರಿನ ಸಿನಿಮಾವೊಂದು ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಹೌದು, 'ಹೆಬ್ಬುಲಿ ಕಟ್' ಸಿನಿಮಾ ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಸ್ಯಾಂಡಲ್‌ವುಡ್‌ ಖ್ಯಾತ ನಟ ಸತೀಶ್ ನೀನಾಸಂ ತಮ್ಮ ʼಸತೀಶ್ ಪಿಕ್ಚರ್ ಹೌಸ್ʼನಡಿ ಅರ್ಪಿಸುತ್ತಿರುವ ಈ ಚಿತ್ರವನ್ನು ಭೀಮರಾವ್ ನಿರ್ದೇಶಿಸುತ್ತಿದ್ದಾರೆ.

ʼಹೆಬ್ಬುಲಿ' ಸಿನಿಮಾದಲ್ಲಿ ಕಿಚ್ಚ ಸುದೀಪರ ಕೇಶವಿನ್ಯಾಸವು ದೊಡ್ಡ ಟ್ರೆಂಡ್ ಸೃಷ್ಟಿಸಿತ್ತು. ʼಹೆಬ್ಬುಲಿ ಕಟ್‌ʼ ಎಂದೇ ಖ್ಯಾತಿಯಾಗಿದ್ದ ಈ ಹೇರ್‌ ಸ್ಟೈಲ್‌ ಇದೀಗ ಸಿನಿಮಾದ ಶೀರ್ಷಿಕೆಯಾಗಿರುವುದು ವಿಶೇಷ. ಈಗಾಗಲೇ ಚಿತ್ರತಂಡವು ಬಿಡುಗಡೆಗೊಳಿಸಿರುವ ಈ ಸಿನಿಮಾದ ಪೋಸ್ಟರ್‌ ಮತ್ತು ತುಣುಕುಗಳು ಗಮನ ಸೆಳೆಯುತ್ತಿವೆ. ಮೌನೇಶ್ ನಟರಂಗ, ಅನನ್ಯ ನಿಹಾರಿಕ, ಮಹಾದೇವ ಹಡಪದ, ಉಮಾ ವೈ.ಜಿ., ವಿನಯ್ ಮಹಾದೇವನ್, ಮಹಾಂತೇಶ್ ಹಿರೇಮಠ ಮುಂತಾದವರು ತಾರಾಬಳಗದಲ್ಲಿದ್ದಾರೆ. 

ಇದನ್ನೂ ಓದಿ: "ಟೀಸರ್ ಹಾಗೂ ಹಾಡುಗಳಲ್ಲಿ "ನೆನಪುಗಳ ಮಾತು ಮಧುರ"

ಈ ಚಿತ್ರದ ನಾಯಕಿಗೆ ನಟ ಸುದೀಪ್‌ ಅಂದ್ರೆ ಪಂಚಪ್ರಾಣ. ಅವರ ʼಹೆಬ್ಬುಲಿʼ ಹೇರ್‌ಕಟ್‌ ಅಂದ್ರೆ ತುಂಬಾ ಇಷ್ಟ. ಇದನ್ನರಿತ ನಾಯಕ ಆ ರೀತಿ ಕೇಶವಿನ್ಯಾಸ ಮಾಡಿಕೊಳ್ಳಲು ಮುಂದಾಗುತ್ತಾನೆ. ಆದರೆ ಆತ ʼಹೆಬ್ಬುಲಿ ಕಟ್‌ʼ ಹೇರ್‌ಸ್ಟೈಲ್‌ ಮಾಡಿಸಿಕೊಂಡನಾ? ಅಥವಾ ಇಲ್ಲವಾ? ಅನ್ನೋದೇ ಈ ಚಿತ್ರದ ಕಥೆ. ಪಕ್ಕಾ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಮೂಡಿಬಂದಿರೋ ಈ ಸಿನಿಮಾ ಹಾಸ್ಯದ ಜೊತೆಗೆ ಸಮಾಜಕ್ಕೆ ಬಹದೊಡ್ಡ ಸಂದೇಶವನ್ನು ಹೊಂದಿದೆ. ಮಾರ್ಚ್‌ ತಿಂಗಳ ಕೊನೆಯಲ್ಲಿ ಈ ಸಿನಿಮಾ ಬಿಡುಗಡೆಗೆ ನಿರ್ದೇಶಕ ಭೀಮರಾವ್‌ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ.

ಈ ಸಿನಿಮಾವನ್ನು ವೀಕ್ಷಿಸಿದ ಸತೀಶ್‌ ನೀನಾಸಂ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ರೀತಿಯ ಸಿನಿಮಾಗೆ ಬೆಂಬಲ ನೀಡದೆ ಮತ್ಯಾವ ಸಿನಿಮಾಗಳಿಗೆ ನಾನು ಬೆಂಬಲ ನೀಡಲಿ ಅಂತಾ ಅವರೇ ತಮ್ಮ ಬ್ಯಾನರ್‌ನಡಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. 'ಡೇ‌ಡೆವಿಲ್ ಮುಸ್ತಾಫಾ' ಚಿತ್ರದ ಚಿತ್ರಕಥೆ, ಸಂಭಾಷಣೆ ಬರೆದಿದ್ದ ಅನಂತ ಶಾಂದ್ರೇಯ ಅವರು ಈ ಸಿನಿಮಾಗೂ ಚಿತ್ರಕಥೆ ಬರೆದಿದ್ದಾರೆ. ದೀಪಕ್ ಯರಗೇರಾ ಛಾಯಾಗ್ರಹಣ, ನವನೀತ್ ಶ್ಯಾಮ್‌ ಅವರ ಸಂಗೀತ ಚಿತ್ರಕ್ಕಿದೆ. ಕನ್ನಡದ ಖ್ಯಾತ ನಟರಾದ ಡಾಲಿ ಧನಂಜಯ್‌, ನವೀನ್‌ ಶಂಕರ್‌, ನವೀನ್ ಸಜ್ಜು ಮುಂತಾದವರು ಈ ಸಿನಿಮಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾರೀ ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ದೊಡ್ಡಮಟ್ಟದ ಯಶಸ್ಸು ಕಾಣಲಿ, ಅಭಿಮಾನಿಗಳ ಬೆಂಬಲ ಈ ಸಿನಿಮಾಗೆ ಇರಲಿ ಎಂದು ಶುಭ ಹಾರೈಸುವ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News