Income Tax Relief: 2025ರ ಫೆಬ್ರವರಿ 01ರಂದು ಎಂಟನೇ ಬಾರಿಗೆ ಬಜೆಟ್ ಮಂಡನೆ ಮಾಡಿ ಇತಿಹಾಸ ನಿರ್ಮಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆಗೆ ಸಂಬಂಧಿಸಿದಂತೆ ದೊಡ್ಡ ಘೋಷಣೆ ಮಾಡಿದ್ದಾರೆ. ಕೋಟ್ಯಾಂತರ ತೆರಿಗೆದಾರರಿಗೆ ಮೋದಿ ಸರ್ಕಾರ ಬಿಗ್ ಗಿಫ್ಟ್ ನೀಡಿದ್ದು ಹೊಸ ತೆರಿಗೆ ಪದ್ದತಿಯಡಿಯಲ್ಲಿ 12 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯವನ್ನು ತೆರಿಗೆ ಮುಕ್ತ ಗೊಳಿಸುವುದಾಗಿ ಘೋಷಿಸಲಾಗಿದೆ. ಈ ವೇಳೆ ಹಳೆಯ ತೆರಿಗೆ ಪದ್ದತಿಯಡಿ ತೆರಿಗೆ ಪಾವತಿ ಮಾಡುವವರಿಗೆ ಬಂಪರ್ ಉಡುಗೊರೆಯೊಂದನ್ನು ನೀಡಲಾಗಿದೆ.
ಹೌದು, ಕೇಂದ್ರ ಬಜೆಟ್ 2025ರಲ್ಲಿ ಹಳೆ ತೆರಿಗೆ ಪದ್ದತಿಯ ಬಗ್ಗೆಯೂ ಮಹತ್ವದ ಘೋಷಣೆ ಮಾಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸರ್ಕಾರಿ ಯೋಜನೆಯದ ಎನ್‌ಪಿಎಸ್ ವಾತ್ಸಲ್ಯ ಯೋಜನೆಯಡಿ ಹೂಡಿಕೆ ಮಾಡುವವರಿಗೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80ಸಿಸಿಡಿಯ ಉಪವಿಭಾಗ (1ಬಿ) ಅಡಿಯಲ್ಲಿ ₹50,000 ಹೆಚ್ಚುವರಿ ತೆರಿಗೆ ರಿಯಾಯಿತಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ.
ತೆರಿಗೆದಾರರು ತಮ್ಮ ಮಗುವಿನ ಹೆಸಲಿನಲ್ಲಿ ಎನ್‌ಪಿಎಸ್ ವಾತ್ಸಲ್ಯ ಯೋಜನೆಯಡಿ ಹೂಡಿಕೆ ಮಾಡಿದರೆ ಸೆಕ್ಷನ್ 80ಸಿಸಿಡಿಯ (1ಬಿ) ಅಡಿಯಲ್ಲಿ ಹೆಚ್ಚುವರಿಯಾಗಿ ₹50,000 ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.
ಇದನ್ನೂ ಓದಿ- ಹೊಸ ತೆರಿಗೆ ಸ್ಲ್ಯಾಬ್‌ನಲ್ಲಿ 12 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ವಿನಾಯಿತಿ..! ಇಲ್ಲಿದೆ ಮಹತ್ವದ ಮಾಹಿತಿ
ಏನಿದು ಎನ್‌ಪಿಎಸ್ ವಾತ್ಸಲ್ಯ ಯೋಜನೆ?
ಮಕ್ಕಳ ಉಜ್ವಲ ಭವಿಷ್ಯವನ್ನು ಭದ್ರಪಡಿಸಲು ಕೇಂದ್ರ ಸರ್ಕಾರವು 18 ಸೆಪ್ಟೆಂಬರ್ 2024ರಂದು ಎನ್‌ಪಿಎಸ್ ವಾತ್ಸಲ್ಯ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಪೋಷಕರು ಮಗುವಿನ ಹೆಸರಿನಲ್ಲಿ ಕನಿಷ್ಠ ₹1000 ಹೂಡಿಕೆ ಮಾಡಬಹುದು. ಅಪ್ರಾಪ್ತ ವಯಸ್ಕರಿಗಾಗಿ ಆರಂಭಿಸಲಾಗಿರುವ ಈ ಯೋಜನೆಯು ಮಗುವಿಗೆ 18 ವರ್ಷ ತುಂಬಿದ ಬಳಿಕ ಪೂರ್ವ ನಿಯೋಜಿತ ಎನ್‌ಪಿಎಸ್ ಗೆ ಬದಲಾವಣೆ ಆಗುತ್ತದೆ.
ಪಿಎಫ್‌ಆರ್‌ಡಿಎ ನಿರ್ವಹಿಸುವ ಈ ಯೋಜನೆಯಲ್ಲಿ ಕೆಲವು ಶರತ್ತುಗಳು ಕೂಡ ಅನ್ವಯಿಸುತ್ತದೆ. ಇದರಲ್ಲಿ ಹೂಡಿಕೆ ಮಾಡುವ ಹಣವು 3 ವರ್ಷಗಳ ಲಾಕ್ ಇನ್ ಅವಧಿಯನ್ನು ಹೊಂದಿರುತ್ತದೆ. ಮೂರು ವರ್ಷಗಳ ಬಳಿಕ ಗರಿಷ್ಠ ಮೂರು ಬಾರಿ ಇದರಿಂದ ಹಣವನ್ನು ಹಿಂಪಡೆಯಬಹುದಾಗಿದೆ.
ಇದನ್ನೂ ಓದಿ- Ration Card: APL, BPL ಕಾರ್ಡ್ ಅಲ್ಲದೆ ಇವೆ ಇನ್ನೂ ಹಲವು ಬಗೆಯ ರೇಷನ್ ಕಾರ್ಡುಗಳು... ಯಾವ ಕಾರ್ಡ್ ಯಾರಿಗೆ?
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವೆಬ್ಸೈಟ್ ನಲ್ಲಿ ಲಭ್ಯವಿರುವ ಮಾಹಿತಿಗಳ ಪ್ರಕಾರ, 3 ವರ್ಷಗಳ ಲಾಕ್-ಇನ್ ಅವಧಿ ಪೂರ್ಣಗೊಂಡ ಬಳಿಕ ಮಗುವಿನ ಶಿಕ್ಷಣ, ಗಂಭೀರ ಆರೋಗ್ಯ ಸಮಸ್ಯೆ ಮತ್ತು ಅಂಗವೈಕಲ್ಯದಂತಹ ಸಂದರ್ಭದಲ್ಲಿ 25%ವರೆಗಿನ ಕೊಡುಗೆಯನ್ನು ಹಿಂಪಡೆಯಬಹುದಾಗಿದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ಎನ್‌ಪಿಎಸ್ ಹೂಡಿಕೆಯ ಮೇಲೆ ₹1,50,000 ದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಮತ್ತೊಂದೆಡೆ ಎನ್‌ಪಿಎಸ್ ವಾತ್ಸಲ್ಯ ಯೋಜನೆಯಲ್ಲಿ 80ಸಿಸಿಡಿ (ಬಿ) ₹50,000 ಹೆಚ್ಚುವರಿ ಕಡಿತವನ್ನು ಸರ್ಕಾರ ಘೋಷಿಸಿದ್ದು ಒಟ್ಟು ₹ 2,00,000ದ ವರೆಗೆ ತೆರಿಗೆ ವಿನಾಯಿತಿ ಲಭ್ಯವಾಗಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.