ದಿನಭವಿಷ್ಯ 03-02-2025: ಸೋಮವಾರ ರೇವತಿ ನಕ್ಷತ್ರದಲ್ಲಿ ಸಾಧ್ಯ ಯೋಗ, ಈ ರಾಶಿಯವರಿಗೆ ಭೂಮಿ ಖರೀದಿ ಯೋಗ

Today Horoscope 03rd February 2025: ಉತ್ತರಾಯಣ, ಸೌರ ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಸೋಮವಾರದ ಈ ದಿನ ರೇವತಿ ನಕ್ಷತ್ರ, ಸಾಧ್ಯ ಯೋಗ, ಕೌಲವ ಕರಣ.  ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.   

Written by - Yashaswini V | Last Updated : Feb 3, 2025, 08:49 AM IST
  • ಉತ್ತರಾಯಣ, ಸೌರ ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ
  • ಸೋಮವಾರದ ಈ ದಿನ ರೇವತಿ ನಕ್ಷತ್ರ, ಸಾಧ್ಯ ಯೋಗ, ಕೌಲವ ಕರಣ.
  • ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
ದಿನಭವಿಷ್ಯ 03-02-2025:  ಸೋಮವಾರ ರೇವತಿ ನಕ್ಷತ್ರದಲ್ಲಿ ಸಾಧ್ಯ ಯೋಗ, ಈ ರಾಶಿಯವರಿಗೆ ಭೂಮಿ ಖರೀದಿ ಯೋಗ  title=

Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಸೋಮವಾರದ ಈ ದಿನ ರೇವತಿ ನಕ್ಷತ್ರ, ಸಾಧ್ಯ ಯೋಗ, ಕೌಲವ ಕರಣ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ವೃತ್ತಿ-ವ್ಯವಹಾರದಲ್ಲಿ ನೀವು ಪ್ರಭಾವಶಾಲಿಯಾಗಿ ಉಳಿಯುಯಿತ್ತೀರಿ. ಸಂಬಂಧದಲ್ಲಿ ಸಂವಹಣವು ಭಿನ್ನಾಭಿಪ್ರಾಯವನ್ನು ನಿವಾರಿಸಲು ಪರಿಣಾಮಕಾರಿ ಆಗಿದೆ. ನಡತೆಯಲ್ಲಿ ನಮ್ರತೆ ಮತ್ತು ಬುದ್ದಿವಂತಿಕೆಯನ್ನು ಕಾಪಾಡಿಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಆರ್ಥಿಕ ಮತ್ತು ವಾಣಿಜ್ಯ ವಿಚಾರಗಳಲ್ಲಿ ಸಿಗುವ ಹೊಸ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸಿ. ಇದರಿಂದ ಲಾಭ ಹೆಚ್ಚಾಗಿ ಹಣಕಾಸಿನ ಸಮೃದ್ಧಿಯನ್ನು ಕಾಣುವಿರಿ. ಹೊಸ ಒಪ್ಪಂದಕ್ಕೆ ಸಹಿ ಹಾಕಬಹುದು. ವೃತ್ತಿಪರ ವಾತಾವರಣವು ಅನುಕೂಲಕರವಾಗಿರುತ್ತದೆ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಅಧಿಕಾರ ಮತ್ತು ನಿರ್ವಹಣೆಗೆ ಸಂಬಂಧಿಸಿದ ವಿಚಾರಗಳಲ್ಲಿ ಯಶಸ್ಸು ಸಾಧಿಸುವಿರಿ. ಕೆಲಸಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ನಿಮ್ಮ ಸೃಜನಶೀಲತೆಗೆ ಯಶಸ್ಸು ದೊರೆಯಲಿದೆ. ಕುಟುಂಬ ಸದಸ್ಯರ ನಡುವೆ ಪ್ರೀತಿ ಹೆಚ್ಚಾಗಲಿದೆ. ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ವೃತ್ತಿಪರ ಲಾಭಗಳನ್ನು ಹೆಚ್ಚಿಸಲು ತಾಳ್ಮೆಯಿಂದ ವರ್ತಿಸಿ. ವೈಯಕ್ತಿಕ ಸಂಬಂಧಗಳಲ್ಲಿ ನಂಬಿಕೆ ಬಲಗೊಳ್ಳುತ್ತದೆ. ಕಲ್ಯಾಣ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಪ್ರಯಾಣವು ಲಾಭದಾಯಕವಾಗಿರುತ್ತದೆ. 

ಇದನ್ನೂ ಓದಿ- Weekly Horoscope: ಫೆಬ್ರವರಿ ಮೊದಲ ವಾರ 'ಗಜಕೇಸರಿ ಯೋಗ': ಈ ರಾಶಿಯವರಿಗೆ ಕೈ ಹಿಡಿಯಲಿದೆ ಅದೃಷ್ಟ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ವಿವಿಧ ಒಪ್ಪಂದಗಳು ಮತ್ತು ಕಾರ್ಯಗಳಲ್ಲಿ ಜಾಗರೂಕರಾಗಿರಿ. ವೃತ್ತಿಪರ ಬೆಂಬಲವು ನಿಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಸಹೋದ್ಯೋಗಿಗಳ ಬೆಂಬಲದಿಂದ ಕೆಲಸವನ್ನು ಯಶಸ್ವಿಯಾಗಿ ವೇಗವಾಗಿ ಪೂರ್ಣಗೊಳಿಸುವಿರಿ. ಆತ್ಮವಿಶ್ವಾಸ ಹೆಚ್ಚಾಗಲಿದೆ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಉದ್ಯಮದಲ್ಲಿ ಬೆಳವಣಿಗೆ ಮುಂದುವರೆಯಲಿದೆ. ವ್ಯಾಪಾರ ಚಟುವಟಿಕೆಗಳಲ್ಲಿ ಸಮನ್ವಯ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಔದ್ಯಮಿಕ ಚಟುವಟಿಕೆಗಳು ಹೆಚ್ಚಾಗಳಿವೆ. ಕೆಲಸದಲ್ಲಿ ಆಲಸ್ಯವನ್ನು ತಪ್ಪಿಸಿದರೆ ಉತ್ತಮ ಲಾಭ ಪಡೆಯಬಹುದು. ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ನಿಮ್ಮ ಪ್ರಯತ್ನಗಳಲ್ಲಿ ಸಕ್ರಿಯತೆಯನ್ನು ತೋರಿಸಿ. ಹಣಕಾಸಿನ ಚಟುವಟಿಕೆಗಳಲ್ಲಿ ಗಮನ ಕೇಂದ್ರೀಕರಿಸಿ. ಉದ್ಯೋಗಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವರು. ಆಡಳಿತ ವರ್ಗದಲ್ಲಿರುವವರಿಗೆ ದಕ್ಷತೆ ಹೆಚ್ಚಳಿದೆ. ಸಮಯ ನಿರ್ವಹಣೆ ಸುಧಾರಿಸಲಿದೆ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ನಿಮ್ಮ ಬಹುಮುಖ ಪ್ರತಿಭೆ ಮತ್ತು ಪ್ರಗತಿಯನ್ನು ಪ್ರದರ್ಶಿಸಲು ಅವಕಾಶಗಳನ್ನು ಪಡೆದುಕೊಳ್ಳುತ್ತೀರಿ. ಬುದ್ದಿವಂತಿಕೆಯು ನಿಮ್ಮ ಪ್ರಗತಿಯ ಹೊಸ ಮಾರ್ಗಗಳನ್ನು ತೆರೆಯುತ್ತದೆ. ನಿಮ್ಮ ಗುರಿಗಳ ಮೇಲೆ ಗಮನ ಕೇಂದ್ರೀಕರಿಸಿ. ವೈಯಕ್ತಿಕ ಕಾರ್ಯಕ್ಷಮತೆ ಸುಧಾರಿಸುತ್ತದೆ. 

ಇದನ್ನೂ ಓದಿ- ಈ ರಾಶಿಯವರಿಗೆ ಶುಕ್ರ ದೆಸೆ... 2025ರ ವರ್ಷ ಪೂರ್ತಿ ಲಕ್ಷ್ಮಿ ಕೃಪೆಯಿಂದ ಕೈ ಸೇರಲಿದೆ ಅಪಾರ ಸಂಪತ್ತು

ಧನು ರಾಶಿಯವರ ಭವಿಷ್ಯ (Sagittarius Horoscope):  
ಕೌಟುಂಬಿಕ ವಿಷಯಗಳನ್ನು ತಾಳ್ಮೆಯಿಂದ ನಿಭಾಯಿಸುವಿರಿ. ನಿರ್ವಹಣಾ ಕೌಶಲ್ಯಗಳು ಉತ್ತಮ ಕಾರ್ಯಕ್ಷಮತೆಗೆ ಕಾರಣವಾಗುತ್ತದೆ. ಕುಟುಂಬ ಮತ್ತು ಆಡಳಿತಾತ್ಮಕ ಪ್ರಯತ್ನಗಳು ಬಲಗೊಳ್ಳುತ್ತವೆ. ಸ್ವಾರ್ಥ ಮತ್ತು ಸಂಕುಚಿತ ಮನೋಭಾವವನ್ನು ತಪ್ಪಿಸಿ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಸಾಮಾಜಿಕ ಚಟುವಟಿಕೆಗಳನ್ನು ಹೆಚ್ಚಿಸುವಿರಿ. ನಿಮ್ಮ ದಿಟ್ಟ ಪ್ರಯತ್ನಗಳು ಮೇಲುಗೈ ಸಾಧಿಸಲಿವೆ. ಸಂವಹನ ಮತ್ತು ಸಂಪರ್ಕಗಳ ಮೇಲೆ ಗಮನ ಕೇಂದ್ರೀಕರಿಸುವುದರಿಂದ ಉತ್ತಮ ಫಲ. ಕೆಲಸದಲ್ಲಿ ಯಶಸ್ಸನ್ನು ಸಾಧಿಸುವಿರಿ. ಹಣಕಾಸಿನ ವಿಷಯಗಳು ಅನುಕೂಲಕರವಾಗಿರುತ್ತದೆ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಕುಟುಂಬ ಮತ್ತು ಸಂಬಂಧಿಕರೊಂದಿಗೆ ಸಮಯ ಕಳೆಯಲು ನೀವು ಆದ್ಯತೆಯನ್ನು ನೀಡುತ್ತೀರಿ. ಪ್ರೀತಿಪಾತ್ರರೊಂದಿಗೆ ಸಭೆ ಸಂಭಾಷಣೆ ಹೆಚ್ಚಾಗುತ್ತದೆ. ವೈಯಕ್ತಿಕ ವಿಷಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ನಿರ್ವಹಣಾ ಕೌಶಲ್ಯಗಳನ್ನು ಬಲಪಡಿಸುವಿರಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಸೃಜನಶೀಲ ಚಟುವಟಿಕೆಗಳಿಗೆ ಸಮಯ ವಿನಿಯೋಗಿಸುವುದರಿಂದ ಪ್ರಯೋಜನಕಾರಿ ಆಗಿದೆ. ಉದಾರತೆಯಿಂದ ವರ್ತಿಸಿ ಮತ್ತು ಸಾಮಾಜಿಕ ಸಂವಹನ ಮನೋಭಾವವನ್ನು ಬೆಳೆಸಿಕೊಳ್ಳಿ. ವೈಯಕ್ತಿಕ ಜೀವನದಲ್ಲಿ ಸಂತೋಷವನ್ನು ಅನುಭವಿಸುವಿರಿ. ಕುಟುಂಬದಲ್ಲಿ ನೆಮ್ಮದಿ ಸಂತೋಷ ಇರಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News