ಗ್ರ್ಯಾಮಿ ರೆಡ್ ಕಾರ್ಪೆಟ್‌ಲ್ಲಿ ಸಂಪೂರ್ಣ ಬೆತ್ತಲಾಗಿ ಬಂದ ಖ್ಯಾತ ತಾರೆ ! ವಿಡಿಯೋ ಇಲ್ಲಿದೆ ನೋಡಿ

ಗ್ರ್ಯಾಮಿ ಅವಾರ್ಡ್‌ 2025 ಆರಂಭವಾಗಿದೆ. ಈ ವಿಶೇಷ ಸಂದರ್ಭದಲ್ಲಿ ಹಾಲಿವುಡ್ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ತಮ್ಮ ಗ್ಲಾಮರ್ ಅನ್ನು ಪ್ರದರ್ಶಿಸಿದರು.ಆದರೆ ಅಮೇರಿಕನ್ ರ‍್ಯಾಪರ್ ಕಾನ್ಯೆ ವೆಸ್ಟ್ ಮತ್ತು ಆಸ್ಟ್ರೇಲಿಯಾದ ಮಾಡೆಲ್ ಬಿಯಾಂಕಾ ಸೆನ್ಸೋರಿ ರೆಡ್ ಕಾರ್ಪೆಟ್ ಮೇಲೆ ಬಂದಾಗ ಎಲ್ಲರೂ ಬೆರಗಾದರು. ಇಬ್ಬರೂ ಪಾಪರಾಜಿಗಳಿಗೆ ಒಟ್ಟಿಗೆ ಪೋಸ್‌ ನೀಡಿದರು. ಈ ಸಂದರ್ಭದಲ್ಲಿ ಕಾನ್ಯೆ ಕ್ಯಾಶುಯಲ್ ಉಡುಪಿನಲ್ಲಿ ಕಾಣಿಸಿಕೊಂಡರೆ, ಬಿಯಾಂಕಾ ಸೆನ್ಸೋರಿ ಕಪ್ಪು ಉದ್ದನೆಯ ಕೋಟ್‌ನಲ್ಲಿ ಕಾಣಿಸಿಕೊಂಡರು.

Written by - Chetana Devarmani | Last Updated : Feb 4, 2025, 12:03 PM IST
  • ಗ್ರ್ಯಾಮಿ ಅವಾರ್ಡ್‌ 2025
  • ಗ್ರ್ಯಾಮಿ ರೆಡ್ ಕಾರ್ಪೆಟ್‌
  • ಬಿಯಾಂಕಾ ಸೆನ್ಸೊರಿ ವಿಡಿಯೋ
ಗ್ರ್ಯಾಮಿ ರೆಡ್ ಕಾರ್ಪೆಟ್‌ಲ್ಲಿ ಸಂಪೂರ್ಣ ಬೆತ್ತಲಾಗಿ ಬಂದ ಖ್ಯಾತ ತಾರೆ ! ವಿಡಿಯೋ ಇಲ್ಲಿದೆ ನೋಡಿ title=
Grammy Awards 2025

Bianca Censori Video in Grammy: ಗ್ರ್ಯಾಮಿ ಅವಾರ್ಡ್‌ 2025 ಆರಂಭವಾಗಿದೆ. ಈ ವಿಶೇಷ ಸಂದರ್ಭದಲ್ಲಿ ಹಾಲಿವುಡ್ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ತಮ್ಮ ಗ್ಲಾಮರ್ ಅನ್ನು ಪ್ರದರ್ಶಿಸಿದರು.ಆದರೆ ಅಮೇರಿಕನ್ ರ‍್ಯಾಪರ್ ಕಾನ್ಯೆ ವೆಸ್ಟ್ ಮತ್ತು ಆಸ್ಟ್ರೇಲಿಯಾದ ಮಾಡೆಲ್ ಬಿಯಾಂಕಾ ಸೆನ್ಸೋರಿ ರೆಡ್ ಕಾರ್ಪೆಟ್ ಮೇಲೆ ಬಂದಾಗ ಎಲ್ಲರೂ ಬೆರಗಾದರು. ಇಬ್ಬರೂ ಪಾಪರಾಜಿಗಳಿಗೆ ಒಟ್ಟಿಗೆ ಪೋಸ್‌ ನೀಡಿದರು. ಈ ಸಂದರ್ಭದಲ್ಲಿ ಕಾನ್ಯೆ ಕ್ಯಾಶುಯಲ್ ಉಡುಪಿನಲ್ಲಿ ಕಾಣಿಸಿಕೊಂಡರೆ, ಬಿಯಾಂಕಾ ಸೆನ್ಸೋರಿ ಕಪ್ಪು ಉದ್ದನೆಯ ಕೋಟ್‌ನಲ್ಲಿ ಕಾಣಿಸಿಕೊಂಡರು.

ಆದರೆ ಕೆಲವೇ ನಿಮಿಷಗಳಲ್ಲಿ ಇಡೀ ವಾತಾವರಣ ಬದಲಾಯಿತು. ಬಿಯಾಂಕಾ ಸೆನ್ಸೋರಿ ತನ್ನ ಕೋಟ್ ಬಿಚ್ಚಿದರು. ವಾಸ್ತವವಾಗಿ ಬಿಯಾಂಕಾ ನಗ್ನ ಪಾರದರ್ಶಕ ಉಡುಪಿನಲ್ಲಿ ರೆಡ್ ಕಾರ್ಪೆಟ್ ತಲುಪಿದರು. ಅವರ ಈ ಲುಕ್‌ ಎಲ್ಲರನ್ನೂ ಅಚ್ಚರಿಗೊಳಿಸಿತು. ಕೆಲವೇ ನಿಮಿಷಗಳಲ್ಲಿ ಅವರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಪ್ರಾರಂಭಿಸಿದವು. ಜನರು ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು. ಇವರಿಬ್ಬರನ್ನೂ ಪ್ರಶಸ್ತಿ ಪ್ರದಾನ ಸಮಾರಂಭದಿಂದ ಹೊರಹಾಕಲಾಯಿತು. ಆದರೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಏಕಾಏಕಿ ಆಸ್ಪತ್ರೆಗೆ ದಾಖಲು!

ಆಕೆಯ ಈ ಉಡುಗೆ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ. ಎಂಟರ್‌ಟೈನ್‌ಮೆಂಟ್ ಟುನೈಟ್ ಘಟನೆಯನ್ನು ದೃಢಪಡಿಸಿದ್ದು, ರೆಡ್ ಕಾರ್ಪೆಟ್ ಮೇಲೆ ಬಂದ ನಂತರ ಕಾನ್ಯೆ ಮತ್ತು ಬಿಯಾಂಕಾ ಸೇರಿದಂತೆ ಐದು ಜನರನ್ನು ಹೊರಹೋಗುವಂತೆ ಹೇಳಲಾಗಿದೆ ಎಂದು ವರದಿ ಮಾಡಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾನ್ಯೆ ವೆಸ್ಟ್ ಎರಡು ಪ್ರಶಸ್ತಿಗಳಿಗೆ ನಾಮಿನೇಟ್‌ ಆಗಿದ್ದರು. ಅವರು ಅತ್ಯುತ್ತಮ ರ್ಯಾಪರ್‌ ಗೆ ನಾಮಿನೇಟ್‌ ಆಗಿದ್ದರು. ಅವರು ಗೆದ್ದರೆ, ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಬಿಯಾಂಕಾ ಅವರ ಈ ಫ್ಯಾಷನ್ ದೊಡ್ಡ ವಿವಾದವನ್ನೇ ಹುಟ್ಟು ಹಾಕಿದೆ.  

 

 

ಇಷ್ಟೇ ಅಲ್ಲ, ಕ್ಯಾಲಿಫೋರ್ನಿಯಾ ಕಾನೂನಿನಡಿಯಲ್ಲಿ ಇದನ್ನು ಅಸಭ್ಯವಾಗಿ ಪರಿಗಣಿಸಬಹುದೇ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಪ್ರಾರಂಭವಾಗಿದೆ. ಕ್ಯಾಲಿಫೋರ್ನಿಯಾ ದಂಡ ಸಂಹಿತೆ 314(1) ರ ಪ್ರಕಾರ, ಒಬ್ಬ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಮತ್ತು ಅಶ್ಲೀಲವಾಗಿ ಇತರರಿಗೆ ಕಿರಿಕಿರಿಯನ್ನುಂಟು ಮಾಡುವ ರೀತಿಯಲ್ಲಿ ನಗ್ನತೆಯನ್ನು ಬಹಿರಂಗಪಡಿಸಿದರೆ ಅದನ್ನು ಅಸಭ್ಯ ಪ್ರದರ್ಶನ ಎಂದು ಪರಿಗಣಿಸಲಾಗುತ್ತದೆ. ಬಿಯಾಂಕಾಳ ಉಡುಗೆ ಈ ವರ್ಗಕ್ಕೆ ಸೇರುತ್ತದೆಯೇ ಅಥವಾ ಇಲ್ಲವೇ ಎಂಬುದು ಘಟನೆಯ ಉದ್ದೇಶ ಮತ್ತು ಸಂದರ್ಭವನ್ನು ಅವಲಂಬಿಸಿರುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ದುಬಾರಿ ಕಾರು, 65 ಕೋಟಿಯ ಬಂಗಲೆ.. ಸಿನಿರಂಗ ಆಳುತ್ತಿರುವ ಈ ಚೆಲುವೆಯ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತೇ!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News