ಮನೆ ಬಾಗಿಲಿಗೆ ಬಂದಾಯ್ತು ದಿಬ್ಬಣ !ಮಂಟಪಕ್ಕೆ ಬರಬೇಕಾಗಿದ್ದ ವಧು ಹೋಗಿದ್ದು ಮಾತ್ರ ...!ವರನ ಪಾಡು ಶತ್ರುವಿಗೂ ಬೇಡ !

ಮದುವೆಯ ದಿನ ಮಾಮೂಲಿಯಂತೆ ವರನ ದಿಬ್ಬಣ ನಿಗದಿತ ಸಮಯಕ್ಕೆ ಮದುವೆ ಮನೆಗೆ ಬಂದಿದೆ. ವಧುವಿನ ಕಡೆಯವರು ದಿಬ್ಬಣವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.

Written by - Ranjitha R K | Last Updated : Feb 3, 2025, 11:16 AM IST
  • ಅಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು.
  • ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ನಡೆದ ಅಚ್ಚರಿಯ ಘಟನೆ.
  • ಮದುವೆ ದಿನ ಮಾತ್ರ ಮನೆ ಮಂದಿಗೆ ಅಚ್ಚರೀ ಕಾದಿತ್ತು.
ಮನೆ ಬಾಗಿಲಿಗೆ ಬಂದಾಯ್ತು ದಿಬ್ಬಣ !ಮಂಟಪಕ್ಕೆ ಬರಬೇಕಾಗಿದ್ದ ವಧು ಹೋಗಿದ್ದು ಮಾತ್ರ ...!ವರನ ಪಾಡು ಶತ್ರುವಿಗೂ ಬೇಡ !  title=

ಅಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ವರ ದಿಬ್ಬನವೂ ವಧುವಿನ ಮನೆ ಬಾಗಿಲಿಗೆ ಬಂದಾಗಿತ್ತು. ಇನ್ನೇನು ಸ್ವಲ್ಪ ಸಮಯದಲ್ಲಿಯೇ ಮದುವೆ ಶಾಸ್ತ್ರ ನಡೆದು ಎರಡು ಕುಟುಂಬಗಳು ಒಂದಾಗಬೇಕು ಎನ್ನುವಷ್ಟರಲ್ಲಿ ಯಾರೂ ನಿರೀಕ್ಷಿಸದ ಘಟನೆ ನಡೆದು ಹೋಗಿತ್ತು. 

ಇದು ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ನಡೆದ ಅಚ್ಚರಿಯ ಘಟನೆ. ಸುಮಾರು ೮ ದಿನಗಳಿಂದ ಇಲ್ಲಿ ಮದುವೆಯ ಶಾಸ್ತ್ರಗಳು ನಡೆದಿವೆ. ಪ್ರತಿಯೊಂದು ಸಮಾರಂಭವೂ ಅದ್ದೂರಿಯಾಗಿಯೇ ನೆರವೇರಿದೆ. ಆದರೆ  ಮದುವೆ ದಿನ ಮಾತ್ರ ಮನೆ ಮಂದಿಗೆ ಅಚ್ಚರೀ ಕಾದಿತ್ತು. 

ಇದನ್ನೂ ಓದಿ : ಚೀನಾ ವಿಜ್ಞಾನಿಗಳಿಂದ ಸಂಶೋಧನೆ! ಹೆಣ್ಣಿಲ್ಲದೆ ಗಂಡಿನಿಂದ ಸಂತಾನೋತ್ಪತ್ತಿ... ಯಾವುದು ಈ ಪ್ರಾಣಿ? ಮನುಷ್ಯನಾ?

ಮದುವೆಯ ದಿನ ಮಾಮೂಲಿಯಂತೆ ವರನ ದಿಬ್ಬಣ ನಿಗದಿತ ಸಮಯಕ್ಕೆ ಮದುವೆ ಮನೆಗೆ ಬಂದಿದೆ. ವಧುವಿನ ಕಡೆಯವರು ದಿಬ್ಬಣವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಹಾಡು, ಕುಣಿತ, ತಮಾಷೆ ಎಲ್ಲವೂ ಅಲ್ಲಿ ಮನೆ ಮಾಡಿತ್ತು. ಇನ್ನೇನು ಮದುವೆ ಮಂಟಪಕ್ಕೆ ವಧುವನ್ನು ಕರೆ ತರಬೇಕು ಎನ್ನುವಾಗಲೇ  ಅಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ತಿಳಿದು ಬಂದಿದ್ದು. ವರ ವಧುವಿಗಾಗಿ ಮಂಟಪದಲ್ಲಿ ಕಾದು ಕುಳಿತಿದ್ದಾನೆ.ಐದು ನಿಮಿಷದಲ್ಲಿ ವಧು ಬರುತ್ತಾಳೆ, ಎಂದು ಹೇಳಿಕೊಂಡೇ ವಧುವಿನ ಮನೆಯವರು ಗಂಟೆ ಗಟ್ಟಲೆ ವರನನ್ನು ಕಾಯಿಸಿದ್ದಾರೆ. 

ಕೊನೆಗೆ ಇಲ್ಲಿ ಏನೋ ಸರಿಯಿಲ್ಲ ಎನ್ನುವ ಅನುಮಾನ ಬಂದು, ವಧು ಮನೆಯವರನ್ನು ಗದರಿ ಕೇಳಿದಾಗ ಗೊತ್ತಾದ ಸತ್ಯ, ಮದುವೆ ದಿನವೇ ವಧು ತನ್ನ ಪ್ರಿಯಕರ ಜೊತೆಗೆ ಓಡಿ ಹೋಗಿದ್ದಾಳೆ ಎನ್ನುವುದು. ಯಾರಿಗೂ ಅನುಮಾನ ಬರಬಾರದು ಎನ್ನುವ ಕಾರಣಕ್ಕೆ ಮದುವೆ ಹಿಂದಿನ ಎಲ್ಲಾ ಶಾಸ್ತ್ರಗಳಲ್ಲಿ ಭಾಗಾವಹಿಸಿ, ಮದುವೆ ದಿನವೇ ಕಾಲ್ಕಿತ್ತಿದ್ದಾಳೆ ವಧು.

ಇದನ್ನೂ ಓದಿ : Viral Video: ಮೆಟ್ರೋ ಆಯ್ತು ಈಗ ಟ್ರೇನ್‌ನಲ್ಲಿ.. ಪ್ರೇಮಿಗಳ ಸರಸ ಕಂಡು ರೊಚ್ಚಿಗೆದ್ದ ನೆಟ್ಟಿಗರು! ವಿಡಿಯೋ ವೈರಲ್..‌

ವಧು ಓಡಿ ಹೋಗಿರುವ ವಿಷಯ ತಿಳಿಯುತ್ತಿದ್ದ ಹಾಗೆ ವರ ಕೆರಳಿ ಕೆಂಡವಾಗಿದ್ದಾನೆ. ತನಗೆ ಮೋಸವಾಗಿದೆ, ತಾನು ಇಲ್ಲಿವರೆಗೆ ವಧುವಿಗಾಗಿ, ವಧುವಿನ ಒಡವೆ,ವಸ್ತ್ರಕ್ಕಾಗಿ ಮತ್ತು ಮದುವೆಗಾಗಿ ಮಾಡಿರುವ ಖರ್ಚು ಕೂಡಲೇ  ವಾಪಸ್ ನೀಡುವಂತೆ ಪಟು ಹಿಡಿದಿದ್ದಾನೆ. ಅಲ್ಲದೆ, ನಂಗೆ ನ್ಯಾಯಬೇಕು ಎಂದು ಒತ್ತಾಯಿಸಿ ಪೋಲಿಸ್ ಸ್ಟೇಷನ್ ಮೆಟ್ಟಿಲೇರಿದ್ದಾನೆ.

ವಧುವಿನ ತಂದೆ ಕೂಡಾ ಅದೇ ಗ್ರಾಮದ ಯುವನ ಮೇಲೆ ತನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ದೂರು ನೀಡಿದ್ದಾರೆ. ನೈನವಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News