Viral News : ಪೋಷಕರು ಹೆತ್ತ ಮಗುವನ್ನು ಸಾಕಲು ಹರಸಾಹಸ ಪಡುತ್ತಿರುವ ಕಾಲದಲ್ಲಿ ವ್ಯಕ್ತಿಯೊಬ್ಬ 12 ಮಂದಿಯನ್ನು ಮದುವೆಯಾಗಿ 100 ಮಕ್ಕಳ ತಂದೆಯಾಗಿದ್ದಾನೆ.. ನಮ್ಮಲ್ಲಿ.. ನಾವಿಬ್ಬರು ನಮಗಿಬ್ಬರು ಎನ್ನುವ ಮಾತು ಹೋಗಿ ಈಗ ನಾವಿಬ್ಬರು ಆದರೆ ಒಂದು ಮಗು ಸಾಕು ಸ್ಥಿತಿ ಇದೆ... ಆದರೆ ಉಗಾಂಡದ ಈ ವ್ಯಕ್ತಿಗೆ 578 ಮೊಮ್ಮಕ್ಕಳು..
ಹೌದು.. ಉಗಾಂಡ ಪೂರ್ವ ಏಷ್ಯಾದ ಒಂದು ದೇಶ. ಇಲ್ಲಿ ವಿವಿಧ ಸಂಸ್ಕೃತಿ, ಸಂಪ್ರದಾಯಗಳಿವೆ.. ಈ ದೇಶದಲ್ಲಿ ಕೆಲವು ಸಮುದಾಯಗಳ ಸದಸ್ಯರು ಬಹುಪತ್ನಿತ್ವ ವಿವಾಹಗಳನ್ನು ಹೊಂದಲು ಅನುಮತಿಸಲಾಗಿದೆ. ಸಾಮಾನ್ಯವಾಗಿ ಒಂದೆರಡು ಮದುವೆಗಳನ್ನು ಮಾಡಿದ ಅನೇಕ ಪುರುಷರನ್ನು ಅಲ್ಲಿ ನೋಡಬಹುದು. ಆದರೆ ಮೂಸಾ ಹಸಹ್ಯಾ ಎಂಬ ವ್ಯಕ್ತಿ ಬರೋಬ್ಬರಿ 12 ಜನರನ್ನು ಮದುವೆಯಾಗಿದ್ದಾನೆ.
ಇದನ್ನೂ ಓದಿ:ಇಂದು ಅಮವಾಸ್ಯೆ ರಾತ್ರಿ ಆಗಸದಲ್ಲಿ 'ಕಪ್ಪು ಚಂದಿರ' ಗೋಚರ..! ನೋಡುವುದು ಓಳ್ಳೆಯದಾ.. ಕೆಟ್ಟದ್ದಾ..?
ಮೂಸಾ ಕೇವಲ 17 ವರ್ಷ ವಯಸ್ಸಿನವರಾಗಿದ್ದಾಗ 1972 ರಲ್ಲಿ ಮೊದಲ ಬಾರಿಗೆ ವಿವಾಹವಾದರು. ಈತನ ತಂದೆಗೆ ಕೇವಲ ಇಬ್ಬರು ಮಕ್ಕಳಿದ್ದರು. ಬಡ ಕುಟುಂಬದಿಂದ ಬೆಳೆದ ಮೂಸಾ ಕೃಷಿ ಮತ್ತು ದನದ ಮಾಂಸ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಬೆಳೆದರು.
ಶ್ರಿಮಂತರಾಗುತ್ತಿದ್ದಂತೆ ಸಾಲು ಸಾಲು ಹೆಣ್ಣಿನ ಸಹವಾಸದಿಂದ ಮದುವೆಯಾಗಲು ಮುಂದಾದರು. ಹಾಗಾಗಿ ಒಬ್ಬರ ನಂತರ ಒಬ್ಬರನ್ನು ವಿವಾಹವಾದರು. ಈತನ ಪತ್ನಿಯರು ವಿವಿಧ ಭಾಷೆಗಳನ್ನು ಮಾತನಾಡುವ ಉಗಾಂಡಾದ ವಿವಿಧ ಪ್ರಾಂತ್ಯಗಳಿಂದ ಬಂದವರು.
ಮೂಸಾಗೆ ಈಗ 70 ವರ್ಷ.. ಪ್ರತಿ ಹೆಂಡತಿ ಸರಾಸರಿ 9 ಮಕ್ಕಳಿಗೆ ಜನ್ಮ ನೀಡಿದ್ದಾಳೆ. 102ನೇ ಮಗುವಿನ ಜನನದ ನಂತರ, ಮೂಸಾಗೆ ತಾನು ಸ್ವಲ್ಪ ಮಿತಿಮೀರಿ ಹೋಗುತ್ತಿರುವಂತೆ ಭಾಸವಾಗುತ್ತದೆ. ಆಗ ಯಾರನ್ನೂ ಮದುವೆಯಾಗುವುದಿಲ್ಲ ಮತ್ತು ಮಕ್ಕಳನ್ನ ಮಾಡಿಕೊಳ್ಳಬಾರದು ಅಂತ ನಿರ್ಧರಿಸಿ. ಆಗ ಅವನ ಮಕ್ಕಳು ಮದುವೆಯಾಗಿ ಮಕ್ಕಳನ್ನು ಮಾಡಿಕೊಂಡರು.
ಪ್ರಸ್ತುತ ಮೂಸಾಗೆ 578 ಮೊಮ್ಮಕ್ಕಳಿದ್ದಾರೆ. ಕೆಲವು ಮೊಮ್ಮಕ್ಕಳು ಅವರ ಕೊನೆಯ ಹೆಂಡತಿಗಿಂತ ದೊಡ್ಡವರಾಗಿದ್ದಾರೆ.. ಮಕ್ಕಳು ಮತ್ತು ಮೊಮ್ಮಕ್ಕಳ ಹೆಸರುಗಳ ದಾಖಲೆಯನ್ನು ಇಡಲು ಸಾಧ್ಯವಿಲ್ಲದ ಕಾರಣ, ಪ್ರತ್ಯೇಕ ರಿಜಿಸ್ಟರ್ ಅನ್ನು ಬಳಸುತ್ತಿದ್ದಾರೆ. ಈಗ ವಯಸ್ಸಾದ ಮೂಸಾ, ತನ್ನ ಕುಟುಂಬವನ್ನು ಪೋಷಿಸಲು ಸಾಕಷ್ಟು ಹಣವಿಲ್ಲದೆ ಬಡತನದಲ್ಲಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ.
ಇದನ್ನೂ ಓದಿ:ಈ ಹಾವು ತಿಂದರೆ ಲೈಂಗಿಕ ಶಕ್ತಿ ಅನಿಯಮಿತ, ಮನೆಯಲ್ಲಿಟ್ಟರೆ ಹಣದ ಹೊಳೆ..! ಅಸಲಿಗೆ ಇದು ನಿಜವೇ..? ಇಲ್ಲಿದೆ ಸತ್ಯ..
ಮೂಸಾ ಅವರ ಪತ್ನಿಯರು ಮತ್ತು ಮಕ್ಕಳು ಹೇಳುವ ಪ್ರಕಾರ ಬಡತನದಲ್ಲಿ ಇದ್ದರೂ ಸಹ ಸಂತೋಷವಾಗಿದ್ದಾಗಿ ಹೇಳಿಕೊಳ್ಳುತ್ತಾರೆ.. ಒಟ್ಟಾರೆಯಾಗಿ ಮದುವೆಯಾಗಿ ಹೆಂಡತಿಯೊಬ್ಬಳ ಜೊತೆ ಸರಿಯಾಗಿ ಸಂಸಾರ ಮಾಡಲಾಗದ ಇಂದಿನ ಯುಗದಲ್ಲಿ ಮೂಸಾ 12 ಮದುವೆಯಾಗಿದ್ದು ನಿಜಕ್ಕೂ ಅಚ್ಚರಿ ವಿಚಾರ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.