ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ!ಆದಾಯ ತೆರಿಗೆ ಇಲಾಖೆಯಿಂದ ದೊಡ್ಡ ಮಟ್ಟದ ರಿಲೀಫ್

Income Tax News:ಆದಾಯ ತೆರಿಗೆ ಇಲಾಖೆಯು ಭಾರತೀಯ ನಿವಾಸಿಗಳಿಗೆ ಪರಿಷ್ಕೃತ ITR ಮತ್ತು ಬಿಲೆಟೆಡ್ ITR  ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.  

Written by - Ranjitha R K | Last Updated : Jan 1, 2025, 04:33 PM IST
  • ಪರಿಷ್ಕೃತ ITR ಮತ್ತು ಬಿಲೆಟೆಡ್ ITR ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಣೆ
  • ITR ಅನ್ನು ಸಲ್ಲಿಸಲು ಕೊನೆಯ ದಿನಾಂಕ 31ನೇ ಜುಲೈ 2024
  • ಆದಾಯ ತೆರಿಗೆ ಇಲಾಖೆಯು ತೆಗೆದುಕೊಂಡಿರುವ ನಿರ್ಧಾರ ಪ್ರಯೋಜನಕಾರಿ
ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ!ಆದಾಯ ತೆರಿಗೆ ಇಲಾಖೆಯಿಂದ ದೊಡ್ಡ ಮಟ್ಟದ ರಿಲೀಫ್  title=

Income Tax News: ಒಂದು ವೇಳೆ ನೀವು ಬಿಲೆಟೆಡ್ ITR ಅಥವಾ ಪರಿಷ್ಕೃತ ITR ಅನ್ನು ಫೈಲ್ ಮಾಡದಿದ್ದಲ್ಲಿ ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಆದಾಯ ತೆರಿಗೆ ಇಲಾಖೆಯು ಭಾರತೀಯ ನಿವಾಸಿಗಳಿಗೆ ಪರಿಷ್ಕೃತ ITR ಮತ್ತು ಬಿಲೆಟೆಡ್ ITR  ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಈ ಗಡುವನ್ನು ಜನವರಿ 15, 2025 ರವರೆಗೆ ವಿಸ್ತರಿಸಿದೆ. ಈಗಾಗಲೇ ನಿಗದಿತ ಕಾಲಮಿತಿಯೊಳಗೆ ಐಟಿಆರ್ ಸಲ್ಲಿಸಿದವರು ಪರಿಷ್ಕೃತ ಐಟಿಆರ್ ಸಲ್ಲಿಸಬಹುದು.

ITR ಅನ್ನು ಸಲ್ಲಿಸಲು ಕೊನೆಯ ದಿನಾಂಕ 31ನೇ ಜುಲೈ 2024  :
ನಿಗದಿತ ಸಮಯದ ಮಿತಿಯೊಳಗೆ ಅಥವಾ ಮೊದಲು ವ್ಯಕ್ತಿಯು ಯಾವುದೇ ITR ಅನ್ನು ಸಲ್ಲಿಸದೇ ಇದ್ದಾಗ ಮತ್ತು ಆರಂಭದಲ್ಲಿ ನೀಡಿದ ಗಡುವಿನ ನಂತರ ITR ಅನ್ನು ಸಲ್ಲಿಸಲು ಬಯಸಿದಾಗ ಅದನ್ನು ಬಿಲೆಟೆಡ್ ITR  ಎಂದು ಕರೆಯಲಾಗುತ್ತದೆ. ITR ಸಲ್ಲಿಸಲು ಜುಲೈ 31, 2024 ಕೊನೆಯ ದಿನ ಎಂದು ಆದಾಯ ತೆರಿಗೆ ಇಲಾಖೆ ಸೂಚಿಸಿತ್ತು. ಆದಾಯ ತೆರಿಗೆ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ವಿಸ್ತರಿಸುವ ಬಗ್ಗೆ ಮಾಹಿತಿ ನೀಡಲಾಗಿದೆ. ಈ ನಿರ್ಧಾರವು ಭಾರತದಲ್ಲಿ ವಾಸಿಸುವ ಜನರಿಗೆ ಅನ್ವಯಿಸುತ್ತದೆ.

ಇದನ್ನೂ ಓದಿ : Arecanut Price: ಹೊಸ ವರ್ಷದ ಮೊದಲ ದಿನವೇ ಅಡಿಕೆ ಧಾರಣೆ ಏರಿಕೆ! ಇಂದಿನ ದರದ ಹೇಗಿದೆ ನೋಡಿ

ನಿಗದಿತ ಅವಧಿಗೆ ಮುನ್ನವೇ ಆದಾಯ ತೆರಿಗೆ ಪಾವತಿಸಿದ್ದರೂ ಅದರಲ್ಲಿ ಕೆಲವೊಂದು ತಪ್ಪುಗಳು ಕಂಡು ಬಂದಿದ್ದರೆ ಅಂಥಹ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆಯು ತೆಗೆದುಕೊಂಡಿರುವ ನಿರ್ಧಾರ ಪ್ರಯೋಜನಕಾರಿಯಾಗಿರಲಿದೆ. ಇದಲ್ಲದೆ, ಇನ್ನೂ ತೆರಿಗೆ ರಿಟರ್ನ್ಸ್ ಸಲ್ಲಿಸದ ಜನರು ಕೂಡಾ ಈ ಗಡುವು ವಿಸ್ತರಣೆಯ ಲಾಭ ಪಡೆಯಬಹುದು. AISನಲ್ಲಿ ಕಂಡುಬರುವ ವಹಿವಾಟುಗಳು ಮತ್ತು ITR ನಲ್ಲಿ ವರದಿಯಾದ ಆದಾಯ/ವಹಿವಾಟುಗಳ ಹೊಂದಾಣಿಕೆಯಾಗದಿರುವಿಕೆಗಾಗಿ ಅನೇಕ ತೆರಿಗೆದಾರರು ನೋಟಿಸ್‌ಗಳನ್ನು ಸ್ವೀಕರಿಸಿದ್ದಾರೆ. ಈಗ ಅಂತಹ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಗಡುವನ್ನು ವಿಸ್ತರಿಸಲಾಗಿದೆ.

ಸೆಕ್ಷನ್ 87A ತೆರಿಗೆ ವಿನಾಯಿತಿ ಪ್ರಕರಣದಲ್ಲಿ ನಿರ್ಧಾರವನ್ನು ಪ್ರಕಟಿಸುವವರೆಗೆ ಐಟಿಆರ್ ಸಲ್ಲಿಸಲು ಸಮಯ ಮಿತಿಯನ್ನು ವಿಸ್ತರಿಸಲು ಬಾಂಬೆ ಹೈಕೋರ್ಟ್ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಗೆ (CBDT) ನಿರ್ದೇಶಿಸಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News