ಬೆಂಗಳೂರು : ಇಂದಿನಿಂದ ಹೊಸ ವರ್ಷ 2025 ಪ್ರಾರಂಭವಾಗಿದೆ. ಈ ಹೊಸ ವರ್ಷ ಸಂತೋಷ ಮತ್ತು ಉತ್ಸಾಹದಿಂದ ತುಂಬಿರಲಿ ಎನ್ನುವುದೇ ಪ್ರತಿಯೊಬ್ಬರ ಆಸೆ. ಹೊಸ ವರ್ಷದಲ್ಲಿ ಎಲ್ಲವೂ ಒಳ್ಳೆಯದಾಗಬೇಕು ಎನ್ನುವ ಬಯಕೆ ನಿಮ್ಮದೂ ಆಗಿದ್ದರೆ ಇಂದು ಈ ಕೆಲಸಗಳನ್ನು ಮಾಡಬೇಕು. ಹೀಗೆ ಮಾಡುವುದರಿಂದ ಈ ವರ್ಷ ಪೂರ್ತಿ ನಿಮಗೆ ಹಣದ ಕೊರತೆ ಕಾಡುವುದಿಲ್ಲ.
ಹೊಸ ವರ್ಷದ ಮೊದಲ ದಿನದಂದು ಏನು ಮಾಡಬೇಕು?
ದೇವರ ಪೂಜೆ :
ವರ್ಷದ ಮೊದಲ ದಿನ ದೇವರ ಪೂಜೆಯನ್ನು ಅವಶ್ಯಕವಾಗಿ ಮಾಡಬೇಕು. ಇದಾದ ನಂತರ ದೇವರಿಗೆ ನೈವೇದ್ಯ ಅರ್ಪಿಸಬೇಕು. ನಂತರ ಶಾಂತವಾದ ಸ್ಥಳವನ್ನು ಹುಡುಕಿ ಯೋಗ ಮತ್ತು ಧ್ಯಾನ ಮಾಡಿ. ಹೀಗೆ ಮಾಡುವುದರಿಂದ ಮನಸ್ಸಿನಲ್ಲಿ ಧನಾತ್ಮಕ ಶಕ್ತಿಯು ರವಾನೆಯಾಗುತ್ತದೆ. ವರ್ಷವನ್ನು ಹೀಗೆ ಪ್ರಾರಂಭಿಸುವುದು ಬಹಳ ಮಂಗಳಕರ.
ಇದನ್ನೂ ಓದಿ: ಶುಕ್ರ ದೆಸೆಯಿಂದಲೇ ಈ ರಾಶಿಯವರ ಹೊಸ ವರ್ಷ ಆರಂಭ !ಧನ ಸಂಪತ್ತು ಉಕ್ಕಿ ಬರುವ ವರ್ಷ ! ಮಣ್ಣು ಕೂಡಾ ಹೊನ್ನಾಗುವ ಪರ್ವ ಕಾಲ
ಯೋಗ ಧ್ಯಾನದ ನಂತರ, ವರ್ಷದ ನಿರ್ಣಯವನ್ನು ಮನಸ್ಸಿನಲ್ಲಿಯೇ ತೆಗೆದುಕೊಳ್ಳಬಹುದು. ಈ ನಿರ್ಣಯವು ಈ ವರ್ಷ ನೀವು ಮಾಡಲು ಉದ್ದೇಶಿಸಿರುವ ದೊಡ್ಡ ಕೆಲಸವನ್ನು ಸಂಕೇತಿಸುತ್ತದೆ. ಬೇಕಾದಲ್ಲಿ ಈ ನಿರ್ಣಯವನ್ನು ಎಲ್ಲಿಯಾದರೂ ಬರೆದಿಟ್ಟುಕೊಳ್ಳಿ.
ಹಿರಿಯರ ಆಶೀರ್ವಾದ :
ನಿಮ್ಮ ಹಿರಿಯರ ಆಶೀರ್ವಾದದೊಂದಿಗೆ ವರ್ಷದ ಮೊದಲ ದಿನವನ್ನು ಪ್ರಾರಂಭಿಸಲು ಮರೆಯದಿರಿ. ಅವರಿಗೆ ಉಡುಗೊರೆ ಅಥವಾ ಅವರ ನೆಚ್ಚಿನ ಆಹಾರವನ್ನು ನೀಡಬಹುದು. ಹೀಗೆ ಮಾಡುವುದರಿಂದ ಅವರಿಗೆ ತುಂಬಾ ಸಂತೋಷವಾಗುತ್ತದೆ ಮತ್ತು ಅವರು ನಿಮ್ಮನ್ನು ಮನಸಾರೆ ಹರಸುತ್ತಾರೆ. ನಿಮ್ಮ ಪ್ರಗತಿಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ವರ್ಷ ಪೂರ್ತಿ ನಿಮ್ಮ ಕೈಯ್ಯಲ್ಲಿ ಹಣ ಖಾಲಿಯಗಬಾರದು ಎಂದಾದರೆ ಹೊಸ ವರ್ಷದ ಮೊದಲ ದಿನದಂದು ಹಣದ ಸರಿಯಾದ ನಿರ್ವಹಣೆಗಾಗಿ ಪ್ರತಿಜ್ಞೆ ಮಾಡಬಹುದು. ಈ ದಿನ ಮಾದಕ ವ್ಯಸನ ಮತ್ತು ಕೆಟ್ಟ ಅಭ್ಯಾಸಗಳನ್ನು ತ್ಯಜಿಸುವ ಪ್ರತಿಜ್ಞೆಯನ್ನು ಸಹ ಮಾಡಬಹುದು. ಈ ಪರಿಹಾರದಿಂದ, ಮನೆಯಲ್ಲಿ ವರ್ಷವಿಡೀ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.
ಅಗತ್ಯವಿರುವವರಿಗೆ ಸಹಾಯ ಮಾಡಿ :
ಸನಾತನ ಧರ್ಮದಲ್ಲಿ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಹೀಗೆ ಮಾಡುವುದರಿಂದ ಅಪಾರ ಪುಣ್ಯ ಪ್ರಾಪ್ತಿಯಾಗುತ್ತದೆ. ವರ್ಷದ ಮೊದಲ ದಿನದಂದು ಅವರಿಗೆ ಆಹಾರ, ಔಷಧಗಳು ಅಥವಾ ಇತರ ವಸ್ತುಗಳನ್ನು ನೀಡುವ ಮೂಲಕ ನಿರ್ಗತಿಕರಿಗೆ ಸಹಾಯ ಮಾಡಬಹುದು.
( ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ