ಮುಖ್ಯಮಂತ್ರಿಯವರಿಗೆ 40.53 ಕೋಟಿ ರೂ. ಲಾಭಾಂಶ ಅರ್ಪಿಸಿದ ಕ್ರೆಡಲ್!

 ಕ್ರೆಡಲ್‌ ಸಂಸ್ಥೆಯು 2023-24ನೇ ಸಾಲಿನಲ್ಲಿ ಗಳಿಸಿದ್ದ 40,53,59,320 ರೂ. ಲಾಭಾಂಶವನ್ನು ಇಂಧನ ಸಚಿವ ಕೆ.ಜೆ ಜಾರ್ಜ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಅರ್ಪಿಸಿದರು.   

Written by - Savita M B | Last Updated : Jan 2, 2025, 05:14 PM IST
  • ಇದೇ ವೇಳೆ ಕ್ರೆಡಲ್ ವತಿಯಿಂದ ಮಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ
  • ಡಿಸೆಂಬರ್‌ನಲ್ಲಿ ನಡೆದ ಶೇರುದಾರರ 28ನೇ ಸಾಮಾನ್ಯ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿತ್ತು.
ಮುಖ್ಯಮಂತ್ರಿಯವರಿಗೆ 40.53 ಕೋಟಿ ರೂ. ಲಾಭಾಂಶ ಅರ್ಪಿಸಿದ ಕ್ರೆಡಲ್!  title=

ಬೆಂಗಳೂರು,ಜನವರಿ, 2, 2025: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕ್ರೆಡಲ್‌) 2023-24ನೇ ಸಾಲಿನಲ್ಲಿ ಗಳಿಸಿದ್ದ 135.12 ಕೋಟಿ ರೂ. ಮೊತ್ತದ ನಿವ್ವಳ ಲಾಭದ ಮೇಲೆ ಶೇ.30 ಲಾಭಾಂಶ (ಡಿವಿಡೆಂಡ್) 40,53,59,320 ರೂ. ಮೊತ್ತದ ಚೆಕ್‌ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ  ಕಚೇರಿಯಲ್ಲಿ ಸ್ವೀಕರಿಸಿದರು. 

ಇದೇ ವೇಳೆ ಕ್ರೆಡಲ್ ವತಿಯಿಂದ ಮಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ. ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವರು ಹಸ್ತಾಂತರಿಸಿದರು.

 ಈ  ಸಂದರ್ಭದಲ್ಲಿ ಶಾಸಕರು, ಕ್ರೆಡಲ್ ಅಧ್ಯಕ್ಷರಾದ ಟಿ.ಡಿ. ರಾಜೇಗೌಡ,  ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ,  ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಉಪಸ್ಥಿತರಿದ್ದರು. 

2024ರ ಅಕ್ಟೋಬರ್‌ನಲ್ಲಿ ನಡೆದ ಕ್ರೆಡಲ್‌ನ 106ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ 2023-24ನೇ ಸಾಲಿನ ಲೆಕ್ಕಪತ್ರಗಳನ್ನು ಮಂಡಿಸಿತ್ತು. 2024ರ ಆಗಸ್ಟ್‌ನಲ್ಲಿ ನಡೆದ 105ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ. ಧನ ಸಹಾಯ ನೀಡಲು ಅನುಮೋದಿಸಲಾಗಿತ್ತು.  ಡಿಸೆಂಬರ್‌ನಲ್ಲಿ ನಡೆದ ಶೇರುದಾರರ 28ನೇ ಸಾಮಾನ್ಯ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News