ಹುಷಾರ್ ! ಮೊಬೈಲ್ ಆಪ್ ಗಳು ನಿಮ್ಮ ಪಾಸ್ ವರ್ಡ್ಗಳನ್ನು ಶೇರ್ ಮಾಡುತ್ತಿವೆ!

    

Last Updated : Jul 13, 2018, 04:14 PM IST
ಹುಷಾರ್ ! ಮೊಬೈಲ್ ಆಪ್ ಗಳು ನಿಮ್ಮ ಪಾಸ್ ವರ್ಡ್ಗಳನ್ನು ಶೇರ್ ಮಾಡುತ್ತಿವೆ! title=

ನವದೆಹಲಿ: ಇನ್ನು ಮುಂದೆ ನೀವು ಯಾವುದೇ ರೀತಿಯ ಪಾಸ್ ವಾರ್ಸ್ ಸೆಟ್ ಮಾಡಿ ಅಥವಾ ಪ್ಯಾಟರ್ನ್ ಬಳಸಿ ಅದೆಲ್ಲವೂ ಸುರಕ್ಷಿತವಲ್ಲ ಎನ್ನುವುದನ್ನು ಹೊಸ ಅಧ್ಯಯನವೊಂದು ಪತ್ತೆ ಮಾಡಿದೆ.

ನಿಮ್ಮ ಮೊಬೈಲ್ ನಲ್ಲಿರುವ ಜನಪ್ರಿಯ ಆಪ್ ಗಳು ನಿಮ್ಮ ಹೆಸರು,ಪಾಸ್ ವರ್ಡ್, ಕ್ರೆಡಿಟ್ ಕಾರ್ಡ್ ವಿವರ, ಇತರ ಮಹತ್ವದ ನಿಮ್ಮ ರಹಸ್ಯ ಮಾಹಿತಿಗಳನ್ನು ಇತರರಿಗೆ ರವಾನಿಸುತ್ತಿವೆ ಎಂದು ಈ ಅಧ್ಯಯನ ತಿಳಿಸಿದೆ.ಅಮೆರಿಕಾದ  ನಾರ್ತ್ ಈಸ್ಟರ್ನ್ ವಿವಿ ಈ ಅಧ್ಯಯನದ ಮೂಲಕ ಈ ಅಂಶವನ್ನು ಬಹಿರಂಗ ಪಡಿಸಿದೆ.

ಈ ಅಧ್ಯಯನದ ಕುರಿತಾಗಿ ಪ್ರತಿಕ್ರಿಯಿಸಿರುವ ಡೇವಿಡ್ ಚೋಫ್ಫ್ನೆಸ್ " ಸಾವಿರಾರು ಆಪ್ ಗಳು ನಿಮ್ಮ  ಮೊಬೈಲ್ ಸ್ಕ್ರೀನ್ ನಲ್ಲಿ ನೀವು ಟೈಪ್ ಮಾಡುವ ಯಾವುದೇ ರೀತಿಯ ಮಾಹಿತಿಯನ್ನು ರಿಕಾರ್ಡ್ ಮಾಡುವುದರ ಬಗ್ಗೆ ಪತ್ತೆ ಹಚ್ಚಿದ್ದೇವೆ. ಇದು  ನಿಮ್ಮ ಹೆಸರು, ಪಾಸ್ ವರ್ಡ್ಗಳನ್ನೂ ಒಳಗೊಂಡಿದೆ. ಏಕೆಂದರೆ ಇದು ನೀವು ಟೈಪ್ ಮಾಡಿದ ನಂತರ ಅದು ಕಪ್ಪುಮಾರ್ಕ್ ಆಗಿ ಪರಿವರ್ತನೆಯಾಗುವುದಕ್ಕಿಂತಲೂ ಮೊದಲು ಅದೆಲ್ಲವನ್ನು ರಿಕಾರ್ಡ್ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
 

Trending News