90 ಗಂಟೆ ಕೆಲಸದ ವಿವಾದದ ನಡುವೆಯೇ ಈ ಸರ್ಕಾರದ ಹೊಸ ಘೋಷಣೆ ! ಇನ್ನು ವಾರಕ್ಕೆ ಎರಡಲ್ಲ 3 ದಿನ ರಜೆ !ಮಕ್ಕಳು ಮಾಡಿಕೊಳ್ಳಲು, ಮಕ್ಕಳ ಆರೈಕೆಗೆಂದೇ ಮೂರನೇ ರಜೆ

ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕು  ಎನ್ನುವ ಎಲ್‌ಎನ್‌ಟಿ ಅಧ್ಯಕ್ಷ ಎಸ್‌ಎನ್ ಸುಬ್ರಮಣಿಯನ್ ಹೇಳಿಕೆ ವಿವಾದ ಹುಟ್ಟಿಸಿದೆ. ಇದರ ಬೆನ್ನಲ್ಲೇ ಇಲ್ಲಿನ ಸರ್ಕಾರ ರಜೆಗೆ ಸಂಬಂಧಿಸಿದಂತೆ ಹೊಸ ಘೋಷಣೆ ಮಾಡಿದೆ.

Written by - Ranjitha R K | Last Updated : Jan 13, 2025, 01:25 PM IST
  • ವಿವಾದ ಹುಟ್ಟಿಸಿದೆ ಎಲ್‌ಎನ್‌ಟಿ ಅಧ್ಯಕ್ಷ ಎಸ್‌ಎನ್ ಸುಬ್ರಮಣಿಯನ್ ಹೇಳಿಕೆ
  • ಸಾಮಾಜಿಕ ಜಾಲತಾಣಗಳಲ್ಲಿ ಸುಬ್ರಮಣಿಯನ್ ಅವರನ್ನು ಟೀಕಿಸಲಾಗುತ್ತಿದೆ
  • ಇಲ್ಲಿನ ಸರ್ಕಾರ ರಜೆಗೆ ಸಂಬಂಧಿಸಿದಂತೆ ಹೊಸ ಘೋಷಣೆ ಮಾಡಿದೆ.
90 ಗಂಟೆ ಕೆಲಸದ ವಿವಾದದ ನಡುವೆಯೇ ಈ ಸರ್ಕಾರದ ಹೊಸ ಘೋಷಣೆ ! ಇನ್ನು ವಾರಕ್ಕೆ ಎರಡಲ್ಲ 3 ದಿನ ರಜೆ !ಮಕ್ಕಳು ಮಾಡಿಕೊಳ್ಳಲು, ಮಕ್ಕಳ ಆರೈಕೆಗೆಂದೇ ಮೂರನೇ ರಜೆ  title=

ನೌಕರರು ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಎಲ್‌ಎನ್‌ಟಿ ಅಧ್ಯಕ್ಷ ಎಸ್‌ಎನ್ ಸುಬ್ರಮಣಿಯನ್ ಹೇಳಿಕೆ ಇದೀಗ ಪ್ರಪಂಚದಾದ್ಯಂತ ಚರ್ಚೆಗೆ ಕಾರಣವಾಗಿದೆ. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಬ್ರಮಣಿಯನ್ ಅವರನ್ನು ಟೀಕಿಸಲಾಗುತ್ತಿದೆ. ಜನರು ಕೆಲಸದ ಜೀವನದ ಸಮತೋಲನದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇದರ ಮಧ್ಯೆಯೇ ಇಲ್ಲಿನ ಸರ್ಕಾರ ರಜೆಗೆ ಸಂಬಂಧಿಸಿದಂತೆ ಹೊಸ ಘೋಷಣೆ ಮಾಡಿದೆ. ಈ ಪ್ರಕಾರ ವಾರಕ್ಕೆ ಎರಡಲ್ಲ ಮೂರು ದಿನ ರಜೆ ಎಂದು ಪ್ರಕಟಿಸಿದೆ. ಇಲ್ಲಿ ಮೂರೂ ಡಿಯನ್ ರಜೆ ಘೋಷಿಸಿರುವ ಹಿಂದಿನ ಕಾರಣ ಕೂಡಾ ಕುತೂಹಲ ಹುಟ್ಟಿಸಿದೆ. 

ಪ್ರಸ್ತುತ, ಪ್ರಪಂಚದ ಅನೇಕ ದೇಶಗಳಲ್ಲಿ ಜನನ ದರದಲ್ಲಿನ ಕುಸಿತವು ಕಳವಳಕಾರಿ ವಿಷಯವಾಗಿದೆ.ಈ ವಿಚಾರದಲ್ಲಿ ಜಪಾನ್ ಕೂಡಾ ಅಗ್ರಸ್ಥಾನದಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಇಲ್ಲಿನ ಜನನ ಪ್ರಮಾಣದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಇದರಿಂದ ಇಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ. ಮುಂಬರುವ ದಿನಗಳಲ್ಲಿ, ದೇಶವು ಜನಸಂಖ್ಯೆ ಸಂಬಂಧಿತ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಇದನ್ನು ಎದುರಿಸಲು ಜಪಾನ್ ಸರ್ಕಾರ ನಾನಾ ಯೋಜನೆಗಳನ್ನು ತರುತ್ತಿದೆ. ಇತ್ತೀಚೆಗೆ ಜಪಾನ್ ಸರ್ಕಾರ ತಂದಿರುವ ಈ ಯೋಜನೆಯು ಭಾರತದಲ್ಲೂ ಸಾಕಷ್ಟು ಚರ್ಚೆಯಾಗುತ್ತಿದೆ.

ಇದನ್ನೂ ಓದಿ : ಕಾಲೇಜ್‌ ಹುಡುಗಿಯರಿಗೆ ಭರ್ಜರಿ ಆಫರ್...! ಮಗುವಿಗೆ ಜನ್ಮ ಕೊಡಿ, 80 ಸಾವಿರ ರೂ. ಪಡೆಯಿರಿ..

ಮಕ್ಕಳು ಮಾಡಿಕೊಳ್ಳಲು ರಜೆ ನೀಡುತ್ತಿರುವ ಜಪಾನ್ ಸರ್ಕಾರ : 
ಕಡಿಮೆ ಜನನ ಪ್ರಮಾಣದಿಂದ ಸಂಕಷ್ಟದಲ್ಲಿರುವ ಜಪಾನ್ ಸರ್ಕಾರ ಉದ್ಯೋಗಿಗಳಿಗಾಗಿ ಹೊಸ ಯೋಜನೆಯೊಂದನ್ನು ಪ್ರಕಟಿಸಿದೆ.  ಏಪ್ರಿಲ್ 2025 ರಿಂದ, ನೌಕರರು ವಾರಕ್ಕೆ 3 ದಿನಗಳ ರಜೆ ತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದು ಟೋಕಿಯೊ ಗವರ್ನರ್ ಯುರಿಕೊ ಕೊಯಿಕೆ ಘೋಷಿಸಿದ್ದಾರೆ. ಇದರಿಂದಾಗಿ ಮಕ್ಕಳನ್ನು ಹೊಂದಲು, ಮಕ್ಕಳ ಆರೈಕೆ ಮಾಡಿಕೊಳ್ಳಲು ಕುಟುಂಬ ಜೀವನವನ್ನು ಸುಧಾರಿಸಲು ಹೆಚ್ಚಿನ ಸಮಯ ಸಿಕ್ಕಂತೆ ಆಗುತ್ತದೆ ಎಂದು ಹೇಳಿದ್ದಾರೆ. 

ವೃತ್ತಿಗೆ ಆದ್ಯತೆ ನೀಡುತ್ತಾ ಕುಟುಂಬದ ಕಡೆಗಣನೆ :
ವೃತ್ತಿ ಮತ್ತು ಕೆಲಸದ ಒತ್ತಡದಿಂದಾಗಿ, ಜಪಾನ್‌ನಲ್ಲಿ ಜನರು ಕುಟುಂಬ ಜೀವನದ ಬಗ್ಗೆ ಸರಿಯಾದ ಗಮನವನ್ನು ನೀಡಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ಕಳೆದ ಕೆಲವು ವರ್ಷಗಳಲ್ಲಿ, ಜಪಾನ್‌ನಲ್ಲಿ ಜನರು ಮಕ್ಕಳನ್ನು ಹೊಂದಲು ಕಡಿಮೆ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಇದು ದೇಶದ ಜನಸಂಖ್ಯೆಯ ಮೇಲೆ ಪರಿಣಾಮ ಬೀರಿದೆ. 

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮದುವೆಯಾಗಲು ಹುಡುಗಿಗೆ ವಯಸ್ಸು ಎಷ್ಟಿರಬೇಕು ಗೊತ್ತೆ..? 72ರ ಮುದುಕ.. 12 ವರ್ಷದ ಬಾಲಕಿ..

ಗವರ್ನರ್ ಕೊಯ್ಕೆ ಪ್ರಕಾರ, ವಾರದಲ್ಲಿ 4 ದಿನಗಳು ಕೆಲಸ ಮಾಡುವುದು ಮತ್ತು 3 ದಿನಗಳ ರಜೆ ಪಡೆಯುವುದು ಕೆಲಸದ ಸ್ಥಳದಲ್ಲಿ ನಮ್ಯತೆಯನ್ನು ತರುತ್ತದೆ. ಅಲ್ಲದೆ, ಮಹಿಳೆಯರು ವೃತ್ತಿ ಮತ್ತು ಕುಟುಂಬವನ್ನು ಸಮತೋಲನಗೊಳಿಸುವುದು ಸುಲಭವಾಗುತ್ತದೆ. ಮಕ್ಕಳನ್ನು ಬೆಳೆಸುವ ಕಾರಣದಿಂದ ಯಾವುದೇ ಉದ್ಯೋಗಿ ತನ್ನ ವೃತ್ತಿಯನ್ನು ತೊರೆಯುವ ಅಗತ್ಯ ಇರುವುದಿಲ್ಲ.ಅಲ್ಲದೆ, ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರ ಕೆಲಸದ ಸಮಯವನ್ನು ಕಡಿಮೆ ಮಾಡುವ ಆಯ್ಕೆಯನ್ನು ಕೂಡಾ ನೀಡಲಾಗುತ್ತದೆ. ಆದರೆ ಈ ಆಯ್ಕೆಯಲ್ಲಿ ವೇತನದಲ್ಲಿ ಸಮತೋಲಿತ ಕಡಿತ ಇರುತ್ತದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News