ಪಾಕಿಸ್ತಾನದಲ್ಲಿ ಮದುವೆಯಾಗಲು ಹುಡುಗಿಗೆ ವಯಸ್ಸು ಎಷ್ಟಿರಬೇಕು ಗೊತ್ತೆ..? 72ರ ಮುದುಕ.. 12 ವರ್ಷದ ಬಾಲಕಿ..

Pakistan marriage age : ಪಾಕಿಸ್ತಾನದಲ್ಲಿ, ಇಂದಿಗೂ, ಚಿಕ್ಕ ಹುಡುಗಿಯರನ್ನು ವಯಸ್ಸಾದ ಮುದುಕರಿಗೆ ಮದುವೆ ಮಾಡಲಾಗುತ್ತದೆ. ಹಾಗಾಗಿ ಈ ದೇಶದಲ್ಲಿ ಬಾಲ್ಯವಿವಾಹ ವ್ಯಾಪಕವಾಗಿದೆ. ಹಾಗಾದ್ರೆ ಅಲ್ಲಿನ ಸರ್ಕಾರ ನಿಗದಿ ಪಡಿಸಿರುವ ಸರಿಯಾದ ಮದುವೆ ವಯಸ್ಸು ಎಷ್ಟು..? ಬನ್ನಿ ತಿಳಿಯೋಣ..

Written by - Krishna N K | Last Updated : Jan 13, 2025, 12:21 PM IST
    • ಈ ಜಗತ್ತಿನಲ್ಲಿ ಇನ್ನೂ ಕೆಲವು ದೇಶಗಳು ಹಳೆಯ ಪದ್ದತಿಯನ್ನು ಪಾಲಿಸುತ್ತಾ ವಾಸಿಸುತ್ತಿವೆ.
    • ಪಾಕಿಸ್ತಾನದಲ್ಲಿ, ಇಂದಿಗೂ, ಚಿಕ್ಕ ಹುಡುಗಿಯರನ್ನು ವಯಸ್ಸಾದ ಮುದುಕರಿಗೆ ಮದುವೆ ಮಾಡಲಾಗುತ್ತದೆ.
    • ಅಂತಹ ದೇಶಗಳಲ್ಲಿ ಪಾಕಿಸ್ತಾನವೂ ಒಂದು.. ಇಲ್ಲಿ ಇಂದಿಗೂ ಬಾಲ್ಯ ವಿವಾಹ ಪದ್ದತಿ ಇದೆ..
ಪಾಕಿಸ್ತಾನದಲ್ಲಿ ಮದುವೆಯಾಗಲು ಹುಡುಗಿಗೆ ವಯಸ್ಸು ಎಷ್ಟಿರಬೇಕು ಗೊತ್ತೆ..? 72ರ ಮುದುಕ.. 12 ವರ್ಷದ ಬಾಲಕಿ.. title=

Pakistan marriage rules : ಇಂದು ಇಡೀ ಜಗತ್ತು ಪ್ರಗತಿ ಮತ್ತು ಆಧುನಿಕತೆಯತ್ತ ಸಾಗುತ್ತಿದೆ. ಆದರೂ ಈ ಜಗತ್ತಿನಲ್ಲಿ ಇನ್ನೂ ಕೆಲವು ದೇಶಗಳು ಹಳೆಯ ಪದ್ದತಿಯನ್ನು ಪಾಲಿಸುತ್ತಾ ವಾಸಿಸುತ್ತಿವೆ. ಅಂತಹ ದೇಶಗಳಲ್ಲಿ ಪಾಕಿಸ್ತಾನವೂ ಒಂದು.. ಇಲ್ಲಿ ಇಂದಿಗೂ ಬಾಲ್ಯ ವಿವಾಹ ಪದ್ದತಿ ಇದೆ.. ಆದರಲ್ಲೂ.. ಹಣ್ಣಣ್ಣು ಮುದಕರೂ 12 ವರ್ಷದ ಬಾಲಕಿಯನ್ನೂ ಮುದೆಯಾಗಬಹುದು..

ಹೌದು.. ವಿಶ್ವದಲ್ಲೇ ಅತಿ ಹೆಚ್ಚು ಬಾಲ್ಯವಿವಾಹದ ಪ್ರಮಾಣ ಪಾಕಿಸ್ತಾನದಲ್ಲಿದೆ. ಈ ದೇಶದಲ್ಲಿ ಕಾನೂನಿನ ಪ್ರಕಾರ ಗಂಡು ಮಗುವಿನ ಮದುವೆಯ ವಯಸ್ಸು 18 ವರ್ಷ ಮತ್ತು ಹುಡುಗಿಯ ವಯಸ್ಸು 16 ವರ್ಷ ಎಂದು ನಿಗದಿಪಡಿಸಲಾಗಿದೆ. ಈ ಅಸಮಾನತೆಯು ಪಾಕಿಸ್ತಾನದಂತಹ ದೇಶಗಳಲ್ಲಿ ಇನ್ನೂ ಅಸ್ತಿತ್ವದಲ್ಲಿದೆ.

ಇದನ್ನೂ ಓದಿ :ಹೊಸ ನಾಯಕನನ್ನು ಹುಡುಕಿಕೊಳ್ಳಿ : BCCIಗೆ ಸೆಡ್ಡು ಹೊಡೆದ ರೋಹಿತ್ ಶರ್ಮಾ!ಯಾರ ಹೆಗಲಿಗೆ ಟೀಂ ಇಂಡಿಯಾ ಮುಂದಿನ ಸಾರಥ್ಯ? 

ಪಾಕಿಸ್ತಾನದಲ್ಲಿ ಶೇಕಡಾ 30 ರಷ್ಟು ಹುಡುಗಿಯರು 18 ವರ್ಷಕ್ಕಿಂತ ಮುಂಚೆಯೇ ಮದುವೆಯಾಗುತ್ತಾರೆ. UNICEF ಪ್ರಕಾರ, ಪಾಕಿಸ್ತಾನದಲ್ಲಿ 18.9 ಮಿಲಿಯನ್ ಹುಡುಗಿಯರು 18 ವರ್ಷಕ್ಕಿಂತ ಮೊದಲು ಮತ್ತು 4.6 ಮಿಲಿಯನ್ ಹುಡುಗಿಯರು 16 ವರ್ಷಕ್ಕಿಂತ ಮೊದಲು ಮದುವೆಯಾಗಿದ್ದಾರೆ.

ಖೈಬರ್ ಪಖ್ತುಂಖ್ವಾ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನ್‌ನಂತಹ ಪ್ರದೇಶಗಳಲ್ಲಿ ಈ ಸಮಸ್ಯೆಯು ವಿಶೇಷವಾಗಿ ಹೆಚ್ಚು. ಅಲ್ಲಿ ಸಾಂಸ್ಕೃತಿಕ ಮತ್ತು ಸಾಮಾಜಿಕ ರೂಢಿಗಳು ಸಾಮಾನ್ಯವಾಗಿ ಬಾಲ್ಯ ವಿವಾಹವನ್ನು ಪ್ರೋತ್ಸಾಹಿಸುತ್ತವೆ. ಆದ್ದರಿಂದ ಈ ದೇಶಗಳಲ್ಲಿ ಬಾಲ್ಯವಿವಾಹವನ್ನು ತಡೆಗಟ್ಟಲು ಕಠಿಣ ಕಾನೂನುಗಳು ಮತ್ತು ಕಠಿಣ ಶಿಕ್ಷೆಗಳನ್ನು ಒತ್ತಾಯಿಸುವ ಕಾರ್ಯಕರ್ತರು ಇದ್ದಾರೆ.

ಇದನ್ನೂ ಓದಿ:ಕೊಬ್ಬರಿ ಎಣ್ಣೆಯಲ್ಲಿ ಈ ಪುಡಿ ಬೆರೆಸಿ ಹಚ್ಚಿ ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಿ...!

ಕಳೆದ ವರ್ಷ ಖೈಬರ್ ಪಖ್ತುಂಖ್ವಾದ ಪೇಶಾವರದಲ್ಲಿ ನಡೆದ ಘಟನೆಯೊಂದು ಈ ವಿಷಯವನ್ನು ಎತ್ತಿ ತೋರಿಸಿತ್ತು. ಪಾಕಿಸ್ತಾನದಲ್ಲಿ 12 ವರ್ಷದ ಬಾಲಕಿಯನ್ನು ಮದುವೆಯಾಗಲು ಯತ್ನಿಸಿದ 72 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಬಾಲಕಿಯ ತಂದೆ ಆಲಂ ಸೈಯದ್ ಆಕೆಯನ್ನು ಹಬೀಬ್ ಖಾನ್ ಎಂಬ ಮುದುಕನಿಗೆ ಐದು ಲಕ್ಷ ಪಾಕಿಸ್ತಾನಿ ರೂಪಾಯಿ ನೀಡಿ ಮದುವೆ ಮಾಡಿಕೊಡುವುದಾಗಿ ಒಪ್ಪಿಗೆ ನೀಡಿದ್ದರು. ಈ ಸಂಬಂಧ 72 ವರ್ಷದ ಖಾನ್ ನನ್ನು ಬಂಧಿಸಿದ್ದರು. ಆದರೆ ಬಾಲಕಿಯ ತಂದೆ ಆಲಂ ಸೈಯದ್ ತಪ್ಪಿಸಿಕೊಂಡಿದ್ದ. 

ಈ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನಗಳ ಹೊರತಾಗಿಯೂ, ಪಾಕಿಸ್ತಾನದಲ್ಲಿ ಬಾಲ್ಯ ವಿವಾಹವು ಗಂಭೀರ ಸವಾಲಾಗಿ ಉಳಿದಿದೆ. ಬಾಲ್ಯ ವಿವಾಹ ಮತ್ತು ಅದರ ಪರಿಣಾಮಗಳಿಂದ ಮಕ್ಕಳನ್ನು ರಕ್ಷಿಸಲು ಕಠಿಣ ಕಾನೂನುಗಳು ಮತ್ತು ಜಾರಿಗಾಗಿ ಕಾರ್ಯಕರ್ತರು ಇಂದಿಗೂ ಸಹ ಹೋರಾಡುತ್ತಿದ್ದಾರೆ..  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News