Winter depression: ಜೀವನದಲ್ಲಿ ಎಷ್ಟೇ ತೊಂದರೆಗಳು ಬಂದರೂ ಯಾವುದೇ ಕಾರಣಕ್ಕೂ ಹೆದರಬಾದರು, ಧೈರ್ಯದಿಂದ ಮುನ್ನುಗ್ಗಬೇಕು... ನಮ್ಮನ್ನು ನಾವು ಬಿಟ್ಟುಕೊಡಬಾರದು.. ಸದಾ ಉತ್ಸಾಹ-ಉಲ್ಲಾಸದಿಂದ ಇರಬೇಕು. ಏಕೆಂದರೆ ಜೀವನವು ನಿರಂತರವಾಗಿ ಮುಂದುವರಿಯುವುದೇ ಆಗಿದೆ, ಕೆಲವು ದುಃಖಗಳು ಇದ್ದರೂ ಕಾಲಕಳೆದಂತೆ ಮಾಯವಾಗುತ್ತವೆ. ಜೀವನದಲ್ಲಿ ಬರುವ ಪ್ರತಿಯೊಂದು ಸಮಸ್ಯೆಯೂ ದೂರವಾಗುತ್ತವೆ. ಕೆಲವೊಮ್ಮೆ ಜನರು ತಮ್ಮ ಅದೃಷ್ಟವನ್ನು ಜೀವನದುದ್ದಕ್ಕೂ ಶಪಿಸುತ್ತಲೇ ಇರುತ್ತಾರೆ ಮತ್ತು ಕೆಲವೊಮ್ಮೆ ಅವರು ಕಷ್ಟಗಳನ್ನು ಎದುರಿಸಿ ಮುನ್ನಡೆಯುತ್ತಾರೆ. ಈ ಜಗತ್ತು ನಮ್ಮಿಂದ ಕಸಿದುಕೊಳ್ಳುವುದಕ್ಕಿಂತ ಹೆಚ್ಚಿನದನ್ನು ನಮಗೆ ನೀಡುತ್ತದೆ. ಅದಕ್ಕಾಗಿಯೇ ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ʼಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿʼ.. ಈ ಸಂದೇಶದ ಮೂಲಕ ಅವರು ಯುವ ಸಮುದಾಯವನ್ನು ಎಚ್ಚರಿಸಿದ್ದಾರೆ.
ನಿಮ್ಮ ಜೀವನದಲ್ಲಿ ಬರುವ ಪ್ರತಿ ಕ್ಷಣವೂ ಸವಾಲುಗಳನ್ನು ಎದುರಿಸಿ. ನಿಮ್ಮ ಜೀವನವನ್ನು ಸಂತೋಷದಿಂದ ಇರಿಸಿರಿ. ಆಲೋಚನೆಯಲ್ಲಿ ಸಕಾರಾತ್ಮಕತೆಯನ್ನು ತಂದು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದರಿಂದ ಇದೆಲ್ಲವೂ ಸಂಭವಿಸುತ್ತದೆ. ಏಕೆಂದರೆ ನಕಾರಾತ್ಮಕ ಭಾವನೆಗಳು ದೀರ್ಘಕಾಲದವರೆಗೆ ಇದ್ದರೆ, ಮಧುಮೇಹ, ಹೃದಯ ಸಮಸ್ಯೆ, ಅಧಿಕ ಬಿಪಿ, ಕ್ಯಾನ್ಸರ್ನಂತಹ ಅಪಾಯಕಾರಿ ಕಾಯಿಲೆಗಳು ಬರುವ ಅಪಾಯವಿದೆ. ಹೀಗಾಗಿ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ನೀವೇ ಉತ್ತರ ಕಂಡುಕೊಳ್ಳಿರಿ. ಉದಾಹರಣೆಗೆ, ʼಸಂತೋಷದ ರಹಸ್ಯವೇನು?' ಇದು ಎಲ್ಲಿ ಲಭ್ಯ? ಹಣ ಮತ್ತು ಸಂತೋಷದ ನಡುವೆ ಏನಾದರೂ ಸಂಬಂಧವಿದೆಯೇ ಅಥವಾ ಇಲ್ಲವೇ? ಸಂಬಂಧಗಳಲ್ಲಿ ಸಂತೋಷವಾಗಿರುವುದು ಅಗತ್ಯವೇ ಅಥವಾ ಆರೋಗ್ಯವಾಗಿರುವುದು ಸಾಕೇ? ಈ ಎಲ್ಲಾ ಪ್ರಶ್ನೆಗಳಿಗೂ ನೀವು ಉತ್ತರವನ್ನು ಕಂಡುಕೊಳ್ಳಬೇಕು.
WHOದಿಂದ ಎಚ್ಚರಿಕೆ
* ಒಂಟಿತನವು ಗಂಭೀರ ಜಾಗತಿಕ ಸಮಸ್ಯೆ ಎಂದು ಎಚ್ಚರಿಕೆ ನೀಡಿದೆ
* 21% ವಯಸ್ಕರು ಮತ್ತು 15% ಮಕ್ಕಳು ಈ ಸಮಸ್ಯೆಯಿಂದ ಹೋರಾಡುತ್ತಿದ್ದಾರೆ
ಒಂಟಿತನದಿಂದ ಏನಾಗುತ್ತದೆ?
* ಜೀವನಶೈಲಿಯನ್ನು ಹಾಳುಮಾಡುತ್ತದೆ
* ದಿನಚರಿಯನ್ನು ಹಾಳುಮಾಡುತ್ತದೆ
* ಕೆಲಸದಲ್ಲಿ ಯಾವುದೇ ಆಸಕ್ತಿ ಇರುವುದಿಲ್ಲ
* ಒಂಟಿತನ 15 ಸಿಗರೇಟ್ ಸೇದುವಷ್ಟು ಮಾರಕ
ಚಳಿಗಾಲದಲ್ಲಿ ಮೂಡ್ ಸ್ವಿಂಗ್ಸ್
* ತಲೆನೋವು
* ಸ್ನಾಯು ನೋವು
* ಹೊಟ್ಟೆ ಸೆಳೆತ
* ಅಜೀರ್ಣ
* ನಿದ್ರಾಹೀನತೆ
* ಉಸಿರಾಟದ ಸಮಸ್ಯೆ
ಸಂತೋಷವಾಗಿರುವಿರಿ - ಆರೋಗ್ಯವಾಗಿದ್ದರೆ
* ಹೃದಯಾಘಾತದ ಅಪಾಯವು 39%ರಷ್ಟು ಕಡಿಮೆಯಾಗುತ್ತದೆ
* ಆರೋಗ್ಯ ದಕ್ಷತೆಯಲ್ಲಿ 72% ಹೆಚ್ಚಳವಾಗುತ್ತದೆ
* ರೋಗನಿರೋಧಕ ಶಕ್ತಿ 52% ರಷ್ಟು ಹೆಚ್ಚಾಗುತ್ತದೆ
* ವಯಸ್ಸು 8 ವರ್ಷ ಹೆಚ್ಚಾಗುತ್ತದೆ
ನಗುವಿನಲ್ಲಿದೆ ಆರೋಗ್ಯದ ರಹಸ್ಯ
* ಕೇವಲ 30% ಜನರು ದಿನಕ್ಕೆ 20 ಬಾರಿ ನಗುತ್ತಾರೆ
* 18 ವರ್ಷ ವಯಸ್ಸಿನ ಮಕ್ಕಳು ಪ್ರತಿದಿನ 400 ಬಾರಿ ನಗುತ್ತಾರೆ
* ವಯಸ್ಸಾದಂತೆ ನಗು ಕಡಿಮೆಯಾಗುತ್ತದೆ
ಖಿನ್ನತೆಯಿಂದ ದೂರವಿರಲು ಏನು ಮಾಡಬೇಕು?
* 8 ಗಂಟೆಗಳ ಸುಖಕರ ನಿದ್ದೆ ಮಾಡಿ
* ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಕುಳಿತುಕೊಳ್ಳಿ
* ಉದ್ಯಾನದಲ್ಲಿ ನಡೆಯಿರಿ
* ತಲೆ ಮಸಾಜ್ ಮಾಡಿಕೊಳ್ಳಿರಿ
* ಯೋಗ ಮಾಡಿ
* ಧ್ಯಾನ ಪ್ರಯೋಜನಕಾರಿ
ಈ ಕೆಲಸ ಮಾಡಿದ್ರೆ ಖಿನ್ನತೆ ಬರಲ್ಲ
* ನಿಮ್ಮನ್ನು ಕಾರ್ಯನಿರತವಾಗಿರಿಸಿಕೊಳ್ಳಿರಿ
* ಹೊಸ ಸ್ನೇಹಿತರನ್ನು ಮಾಡಿಕೊಳ್ಳಿ
* ಒಳ್ಳೆಯ ಪುಸ್ತಕಗಳನ್ನು ಓದಿ
* ಸ್ವಲ್ಪ ಕಾಲ ನಡೆಯಿರಿ
* ಸಂಗೀತವನ್ನು ಆಲಿಸಿ
ಸಂತೋಷವಾಗಿರುವುದು ಹೇಗೆ?
* ಇತರರಿಗೆ ಸಹಾಯ ಮಾಡಿರಿ
* ಪ್ರತಿ ಗಂಟೆಗೆ 10 ಸೆಕೆಂಡುಗಳ ಸ್ಟ್ರೆಚಿಂಗ್ ಮಾಡಿ
* ಸಿಹಿ ತಿನ್ನುವುದರಿಂದ ಸಂತೋಷ ಹೆಚ್ಚುತ್ತದೆ
ಮೆದುಳು ಸಕ್ರಿಯವಾಗಿರಲು ಈ ಜ್ಯೂಸ್ ಸೇವಿಸಿ
* ಅಲೋ ವೆರಾ
* ಗಿಲೋಯ್
* ಅಶ್ವಗಂಧ
ಖಿನ್ನತೆಗೆ ಈ ಆಹಾರ ಪ್ರಯೋಜನಕಾರಿ
* ವಾಲ್ನಟ್
* ಹಸಿರು ಚಹಾ
* ಅರಿಶಿನ ಹಾಲು
* ಮೊಸರು
* ಕಡಲೆ ಕಾಳು
* ಅಗಸೆಬೀಜ
ಖಿನ್ನತೆಯಿಂದ ಮುಕ್ತಿ ಹೊಂದಲು ಇವುಗಳನ್ನ ಸೇವಿಸಬೇಡಿ
* ಶಕ್ತಿ ಪಾನೀಯಗಳು
* ಚಹಾ ಕಾಫಿ
* ಧೂಮಪಾನ
ಈ ನೈಸರ್ಗಿಕ ಪರಿಹಾರಗಳನ್ನು ಪ್ರಯತ್ನಿಸಿ
* ಮೂತ್ರಪಿಂಡ - ಗೋಖ್ರು ಕಷಾಯ
* ಕಣ್ಣುಗಳು - ಆಮ್ಲಾ-ಅಲೋವೆರಾ ಜ್ಯೂಸ್
* ಯಕೃತ್ತು - ಸರ್ವಕಲ್ಪ್ ಕ್ವಾತ್ ಕಧಾ
* ಹೃದಯ - ಅರ್ಜುನ ತೊಗಟೆ, ದಾಲ್ಚಿನ್ನಿ ಕಷಾಯ ಸೇವಿಸಿರಿ
ಇದನ್ನೂ ಓದಿ: ಕೀಲುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಸಿಡ್ ಅನ್ನು ಚಿಟಕಿಯಲ್ಲಿ ನಿಯಂತ್ರಿಸಬಲ್ಲ ಪಾನೀಯಗಳಿವು...!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.