ಹೆಣ್ಣು ದೆವ್ವದ ಕಾಟಕ್ಕೆ 36 ವರ್ಷಗಳಿಂದ ಮಹಿಳೆಯಾಗಿ ಬದುಕುತ್ತಿದ್ದಾನೆ ಈ ವ್ಯಕ್ತಿ..! ಗಂಡಾದರೆ..?

ಇಂದಿನ ವೈಜ್ಞಾನಿಕ ಯುಗದಲ್ಲಿ ಮೂಢನಂಬಿಕೆ ಇನ್ನೂ ಅಸ್ತಿತ್ವದಲ್ಲಿ ಇದೆ. ಇದಕ್ಕೆ ಉದಾರಹಣೆ ಎನ್ನುವಂತೆ.. ಉತ್ತರ ಪ್ರದೇಶದ ಜೌನ್‌ಪುರದಿಂದ ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದೆ. ಇಲ್ಲಿ, ಕಳೆದ 36 ವರ್ಷಗಳಿಂದ ದೆವ್ವಗಳ ಭಯದಿಂದ ಪುರುಷನೊಬ್ಬ ಸ್ತ್ರೀ ರೂಪದಲ್ಲಿದ್ದಾನೆ... ಏಕೆ ಗೊತ್ತೆ..?

Written by - Krishna N K | Last Updated : Feb 13, 2025, 07:58 PM IST
    • ಇಂದಿನ ವೈಜ್ಞಾನಿಕ ಯುಗದಲ್ಲಿ ಮೂಢನಂಬಿಕೆ ಇನ್ನೂ ಅಸ್ತಿತ್ವದಲ್ಲಿ ಇದೆ.
    • ಉತ್ತರ ಪ್ರದೇಶದ ಜೌನ್‌ಪುರದಿಂದ ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದೆ.
    • 36 ವರ್ಷಗಳಿಂದ ದೆವ್ವಗಳ ಭಯದಿಂದ ಪುರುಷನೊಬ್ಬ ಸ್ತ್ರೀ ರೂಪ ತಾಳಿದ್ದಾನೆ
ಹೆಣ್ಣು ದೆವ್ವದ ಕಾಟಕ್ಕೆ 36 ವರ್ಷಗಳಿಂದ ಮಹಿಳೆಯಾಗಿ ಬದುಕುತ್ತಿದ್ದಾನೆ ಈ ವ್ಯಕ್ತಿ..! ಗಂಡಾದರೆ..?  title=

ಉತ್ತರ ಪ್ರದೇಶ : ಜೌನ್‌ಪುರ ಜಿಲ್ಲೆಯಲ್ಲಿ ವಾಸಿಸುವ ಈ ವ್ಯಕ್ತಿ ಮೂರು ದಶಕಗಳಿಗೂ ಹೆಚ್ಚು ಕಾಲ ಮಹಿಳೆಯರಂತೆ ಸೀರೆ ಉಟ್ಟು ತಿರುಗಾಡುತ್ತಿದ್ದಾನೆ. ಹೀಗೆ ಮಾಡಲು ಕಾರಣವೇನೆಂದರೆ, ಅವನಿಗೆ ದೆವ್ವಗಳಿಂದ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದಾನೆ.. ಆತನ ಪ್ರಕಾರ, ಒಂದು ಆತ್ಮವು ಅವನನ್ನು ಕಾಡುತ್ತಿತ್ತು, ಪುರುಷನಾಗಿ ಉಳಿದರೆ ಜೀವಕ್ಕೆ ಅಪಾಯವಿದೆ ಎಂದು ಹೇಳಿಕೊಂಡಿದ್ದಾನೆ..

ಕೆಲವರು ಇದನ್ನು ಮಾನಸಿಕ ಆರೋಗ್ಯ ಸಮಸ್ಯೆ ಎಂದು ಪರಿಗಣಿಸುತ್ತಿದ್ದಾರೆ. ಇನ್ನೂ ಕೆಲವರು ಇದನ್ನು ದೆವ್ವಗಳ ಪ್ರಭಾವ ಎಂದು ಕರೆಯುತ್ತಿದ್ದಾರೆ. ದೆವ್ವ ಎನೂ ಇಲ್ಲ.. ಈ ವ್ಯಕ್ತಿಗೆ ಸರಿಯಾದ ಸಲಹೆ ಮತ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಕೆಲವು ಜನರು ಸಲಹೆ ನೀಡುತ್ತಿದ್ದಾರೆ. 

ಇದನ್ನೂ ಓದಿ:ಕಿಚ್ಚ ಫ್ಯಾನ್ಸ್‌ ಗುಡ್‌ ನ್ಯೂಸ್‌ : ಫೆ.15ಕ್ಕೆ ಜೀ ಕನ್ನಡ ಹಾಗೂ ಜೀ5 ಒಟಿಟಿಯಲ್ಲಿ "ಮ್ಯಾಕ್ಸ್"

ಒಬ್ಬ ವ್ಯಕ್ತಿ 3 ಬಾರಿ ಮದುವೆಯಾಗಿದ್ದಾನೆ.. ಆತನ 9 ಮಕ್ಕಳಲ್ಲಿ 7 ಮಕ್ಕಳು ಸಾವನ್ನಪ್ಪಿದ್ದಾರೆ. ಅದರಲ್ಲಿ ಎರಡನೇ ಹೆಂಡತಿ ಬಂಗಾಳಿ. ಆಕೆಯ ಮರಣದ ನಂತರ, ನನಗೆ ಈ ಕನಸು ಬಿತ್ತು.. ಆ ಕನಸಿನಲ್ಲಿ ಆಕೆಯ ಆತ್ಮ ನನ್ನನ್ನು ಕಾಡುತ್ತಿದೆ, ಅದು ನನ್ನನ್ನು ಮಹಿಳೆಯರಂತೆ ಬದುಕುವಂತೆ ಮಾಡಿದೆ ಎಂದು ವ್ಯಕ್ತಿ ಹೇಳುತ್ತಾನೆ..

ಈ ಘಟನೆಯು ಮೂಢನಂಬಿಕೆ ಮತ್ತು ಮಾನಸಿಕ ಆರೋಗ್ಯದ ಕೊರತೆಯನ್ನು ಎತ್ತಿ ತೋರಿಸುತ್ತದೆ. ತನಿಖೆ ಮಾಡದೆ ಮೂಢನಂಬಿಕೆಗಳನ್ನು ನಂಬಬಾರದು.. ಈ ವಿಷಯದ ಬಗ್ಗೆ ವೈಜ್ಞಾನಿಕ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವುದು ಮುಖ್ಯ. ಈ ವ್ಯಕ್ತಿ ನಿಜವಾಗಿಯೂ ದೆವ್ವಗಳ ಭಯದಿಂದ ಮಹಿಳೆಯಾದನೇ ಅಥವಾ ಮಾನಸಿಕ ಸ್ಥಿತಿಯ ಪರಿಣಾಮವೇ..? ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News