Famous Kannada Actress Urvashi: ದಕ್ಷಿಣ ಭಾರತದ ಪ್ರಖ್ಯಾತ ನಟಿ ಊರ್ವಶಿ ಕನ್ನಡ ಸಿನಿರಂಗದಲ್ಲಿ ಮಿಂಚಿದವರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
Famous Kannada Actress Urvashi: ದಕ್ಷಿಣ ಭಾರತದ ಪ್ರಖ್ಯಾತ ನಟಿ ಊರ್ವಶಿ ಕನ್ನಡ ಸಿನಿರಂಗದಲ್ಲಿ ಮಿಂಚಿದವರು. ಊರ್ವಶಿ ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಅಭಿನಯ ಮತ್ತು ಸೌಂದರ್ಯದಿಂದ ಅನೇಕ ಜನರ ಮನಗೆದ್ದವರು.
80ನೇ ದಶಕದಲ್ಲಿ ಬಾಲ ನಟಿಯಾಗಿ ನಟಿ ಊರ್ವಶಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಸ್ಟಾರ್ ನಟರಾದ ಕಮಲ್ ಹಾಸನ್, ರಜನಿಕಾಂತ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ರಮೇಶ್ ಅರವಿಂದ, ಮೋಹನ್ಲಾಲ್ ಮಮ್ಮುಟ್ಟಿ, ಡಾಕ್ಟರ್ ರಾಜಕುಮಾರ್ ಜೊತೆ ನಟಿಸಿ ಸೈ ಎನಿಸಿಕೊಂಡವರು.
ಅತಿ ಕಡಿಮೆ ಅವಧಿಯಲ್ಲಿಯೇ ಬಹು ಬೇಡಿಕೆಯ ನಟಿಯಾಗಿದ್ದ ಊರ್ವಶಿ ವೃತ್ತಿ ಬದುಕಿನಲ್ಲಿ ಅಪಾರ ಯಶಸ್ಸು ಕಂಡರು. ಆದರೆ ಇವರ ವೈಯಕ್ತಿಕ ಜೀವನ ಮಾತ್ರ ಕಷ್ಟದ ಸರಮಾಲೆಯಲ್ಲೇ ಸಾಗಿತು. ಕೆಲವು ಕೆಟ್ಟ ಹವ್ಯಾಸಗಳಿಂದ ಊರ್ವಶಿ ಜೀವನವೇ ಹಾಳಾಗಿತ್ತು. ಬಾಳ ಸಂಗಾತಿಯ ಆಯ್ಕೆಯಲ್ಲಿ ಎಡವಿದ ಊರ್ವಶಿ ಬದುಕು ನರಕವಾಗಿತ್ತು.
1980ರಲ್ಲಿ ಚಿತ್ರರಂಗಕ್ಕೆ ಬಾಲನಟಿಯಾಗಿ ಕಾಲಿಟ್ಟ ನಟಿ ಊರ್ವಶಿ 1984 ರಲ್ಲಿ ತೆರೆಕಂಡ ಶ್ರಾವಣ ಬಂತು ಎಂಬ ಕನ್ನಡ ಸಿನಿಮಾ ಮೂಲಕ ರಾತ್ರೋ ರಾತ್ರಿ ಸ್ಟಾರ್ ನಟಿಯಾದರು. ರವಿಚಂದ್ರನ್ ಅವರೊಂದಿಗೆ ‘ನಾನು ನನ್ನ ಹೆಂಡತಿ’ ಚಿತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಪ್ರಶಂಸೆ ಪಡೆದುಕೊಂಡರು.
2000ರಲ್ಲಿ ಮನೋಜ್ ಕೆ ಜಯನ್ ಜೊತೆ ನಟಿ ಊರ್ವಶಿ ಮದುವೆಯಾದರು. ಈ ದಂಪತಿಗೆ ತೇಜ ಲಕ್ಷ್ಮಿ ಜಯಂತಿ ಎಂಬ ಮಗಳು ಜನಿಸಿದಳು. ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳಿಂದ ಊರ್ವಶಿ 2008ರಲ್ಲಿ ಮನೋಜ್ ಅವರಿಗೆ ವಿಚ್ಛೇದನ ನೀಡಿದರು.
ಊರ್ವಶಿಯ 2016ರಲ್ಲಿ ಚೆನ್ನೈ ಉದ್ಯಮಿ ಶಿವಪ್ರಸಾದ್ ಅವರನ್ನು ಮದುವೆಯಾದರು. ಊರ್ವಶಿ ಮತ್ತು ಶಿವಪ್ರಸಾದ್ ದಂಪತಿಗೆ ಇಹಾನ್ ಪ್ರಜಾಪತಿ ಎಂಬ ಗಂಡು ಮಗು ಜನಿಸಿತು.
ಎರಡನೇ ಮದುವೆ ಬಳಿಕ ಊರ್ವಶಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಇಂದಿಗೂ ಲವು ಪೋಷಕ ಪಾತ್ರಗಳ ಮೂಲಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.