Lord Vishnu and Mother Lakshmi: ಹಿಂದೂ ಧರ್ಮದಲ್ಲಿ ದೇವತೆಗಳ ಗುರುವಾದ ಗುರುವನ್ನು ಸಂಪತ್ತಿನ ಅಂಶವೆಂದು ಹೇಳಲಾಗಿದೆ. ಜಾತಕದಲ್ಲಿ ಗುರುವಿನ ಬಲವಾದ ಉಪಸ್ಥಿತಿಯಿರುವ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ಹಣದ ಕೊರತೆಯನ್ನು ಎದುರಿಸುವುದಿಲ್ಲ. ಅದೇ ರೀತಿ ಜಾತಕದಲ್ಲಿ ಗುರು ದುರ್ಬಲನಾಗಿದ್ದರೆ ಆ ವ್ಯಕ್ತಿಯು ಹಣದ ಕೊರತೆಯಿಂದ ಬಳಲುತ್ತಲೇ ಇರುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಗುರುವನ್ನು ಬಲಪಡಿಸುವ ಮಾರ್ಗಗಳನ್ನು ತಿಳಿಯಿರಿ.
ಗುರುವಾರ ವಿಷ್ಣುದೇವ ಮತ್ತು ತಾಯಿ ಲಕ್ಷ್ಮಿದೇವಿಗೆ ಸಮರ್ಪಿತವಾಗಿದೆ. ಈ ದಿನದಂದು ಉಪವಾಸ ವ್ರತ ಆಚರಿಸಬೇಕು. ಉಪವಾಸ ಮಾಡುವುದರಿಂದ ವಿಷ್ಣು ಮತ್ತು ಲಕ್ಷ್ಮಿ ಸಂತುಷ್ಟರಾಗುತ್ತಾರೆ. ಅವರು ಸಂತೋಷ ಮತ್ತು ಸಮೃದ್ಧಿಯನ್ನು ಅನುಗ್ರಹಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಗುರುವಾರದಂದು ಸರಿಯಾದ ಆಚರಣೆಗಳೊಂದಿಗೆ ವಿಷ್ಣುವನ್ನು ಪೂಜಿಸುವ ಮೂಲಕ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಬಹುದು. ಪೂಜೆಯ ಸಮಯದಲ್ಲಿ ಈ ಪರಿಹಾರಗಳನ್ನು ಅನುಸರಿಸಿ, ಇದು ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಸೂರ್ಯ-ಶನಿಯ ಸಂಯೋಗದಿಂದ ಈ ಮೂರು ರಾಶಿಯವರಿಗೆ ಎದುರಾಗಲಿದೆ ಸಂಕಷ್ಟ!! ಈಗಲೇ ಎಚ್ಚೆತ್ತುಕೊಳ್ಳಿರಿ
* ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ ಗುರುವಾರ ಸ್ನಾನ ಮಾಡಿ ವಿಷ್ಣು ಮತ್ತು ಲಕ್ಷ್ಮಿದೇವಿಯನ್ನು ಪೂಜಿಸಿ. ಪೂಜೆಯ ಸಮಯದಲ್ಲಿ, ವಿಷ್ಣುವಿಗೆ 7 ಗಂಟು ಅರಿಶಿನವನ್ನು ಅರ್ಪಿಸಿ ಮತ್ತು ಪೂಜೆಯ ನಂತರ, ಅದನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ತಿಜೋರಿಯಲ್ಲಿ ಇರಿಸಿ.
* ಎರಡನೆಯ ಪರಿಹಾರವೆಂದರೆ ಸ್ನಾನ ಮಾಡುವಾಗ ಗಂಗಾ ಜಲವನ್ನು ಸೇರಿಸಿ ನಂತರ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು. ನಂತರ ಬಾಳೆ ಗಿಡವನ್ನು ಅರಿಶಿನದೊಂದಿಗೆ ಬೆರೆಸಿ ಸುಟ್ಟು ಲಕ್ಷ್ಮಿದೇವಿಯ ಮಂತ್ರವನ್ನು ಪಠಿಸಬೇಕು. ಇದರಿಂದ ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ವಾಸಿಸುತ್ತಾಳೆ.
* ಗುರುವಾರದಂದು ವಿಧಿವಿಧಾನಗಳ ಪ್ರಕಾರ ಪೂಜೆಯನ್ನು ಮಾಡಿದ ನಂತರ, ದೇವಸ್ಥಾನಕ್ಕೆ ಹೋಗಿ ವಿಷ್ಣುವಿಗೆ ಕೊಳಲು ಅಥವಾ ದಕ್ಷಿಣವರ್ತಿ ಶಂಖವನ್ನು ಅರ್ಪಿಸಬೇಕು. ನಂತರ ಅದನ್ನು ಮನೆಗೆ ತಂದು ದೇವರ ಮನೆಯಲ್ಲಿರಿಸಿ. ಇದು ನಿಮ್ಮ ಸಂತೋಷ ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: 30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಶನಿಯ ನೆಲೆ! ಫೆಬ್ರವರಿ 27 ರಿಂದ ಈ ರಾಶಿ ಜನರ ಜೀವನದಲ್ಲಿ ಸವಾಲು, ಕಷ್ಟ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.