ವಿಧಾನಸಭೆ ಚುನಾವಣೆ ಗೆಲ್ಲಲು ಬಿಜೆಪಿ ರಣವ್ಯೂಹ. ಇಂದು ರಾಜ್ಯಕ್ಕೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ. ಅಭಿವೃದ್ದಿ ಹೆಸರಲ್ಲಿ ಮತಬೇಟೆ ಮಾಡಲಿರುವ ನಮೋ. ಇಂದು ಬೆಂಗಳೂರು, ತುಮಕೂರಿನಲ್ಲಿ ಕಾರ್ಯಕ್ರಮ. ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಮಾಡಲಿರೋ ಮೋದಿ.
ಮುನಿಯಪ್ಪ, ರಮೇಶ್ ಕುಮಾರ್ ಎದುರೇ ಸ್ಪಷ್ಟನೆ
ಬಾದಾಮಿಗೆ ಬೈ.. ಕೋಲಾರಕ್ಕೆ ಜೈ ಎಂದ ‘ಟಗರು’
ಕ್ಷೇತ್ರ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ಸಿದ್ದರಾಮಯ್ಯ
ಬಿಜೆಪಿಯ ವರ್ತೂರು ಪ್ರಕಾಶ್ ವಿರುದ್ಧ ಸ್ಪರ್ಧೆ ಖಚಿತ
ಸಿದ್ದರಾಮಯ್ಯ ಸೋಲಿಸಲು ಕಾಂಗ್ರೆಸ್ನವರೇ ಸಾಕು ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ. ನಾನು ಅವರ ಇವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಗೆಲುವು.. ಸೋಲು ಜನರು ತೀರ್ಮಾನ ಮಾಡ್ತಾರೆ ಎಂದಿದ್ದಾರೆ.
ಕೋಲಾರದಲ್ಲಿ ನೂರಕ್ಕೆ ನೂರು ಸಿದ್ದರಾಮಯ್ಯ ಗೆಲ್ಲಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಎಲ್ಲರೂ ಸೇರಿ ನಿಮ್ಮನ್ನು ಬಲಿ ನೀಡಲು ಹೊರಟಿದ್ದಾರೆ. ಕೋಲಾರಕ್ಕೆ ಹೋಗಬೇಡಿ ವರಣಾದಲ್ಲೇ ನಿಲ್ಲಿ ಎಂದು ಇಬ್ರಾಹಿಂ ಹೇಳಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಈ ಬಾರಿ ಒಂದು ಕ್ಷೇತ್ರದಿಂದ ಸ್ಪರ್ಧಿಸಿ, ಮುಂದಿನ ಬಾರಿ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸಿದರೆ ಆ ಕ್ಷೇತ್ರದ ಜನರ ಪ್ರೀತಿ ವಿಶ್ವಾಸ ಗಳಿಸಿಲ್ಲ ಎಂದರ್ಥ- ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ
ಸಿಎಂ ಆಗೋ ದಾವಂತ ಇರೋದು ಸಿದ್ದು, ಡಿಕೆಶಿಗೆ. ನಮಗೆ ಯಾವುದೇ ಚುನಾವಣೆ ದಾವಂತ ಇಲ್ಲ ಎಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಅವಧಿ ಪೂರ್ವ ಚುನಾವಣೆ ಬರಲ್ಲ. ನಮ್ಮ ಸರ್ಕಾರದ ಪೂರ್ಣ ಅವಧಿ ಪೂರೈಸುತ್ತವೆ ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.