ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಅಟ್ಟಹಾಸ ಒಂದೊಂದಾಗೇ ಬಯಲಾಗ್ತಿದೆ.. ಕಷ್ಟಕ್ಕೆ ಅಂತಾ ಮೈಕ್ರೋ ಫೈನಾನ್ಸ್ನಲ್ಲಿ ಸಾಲ ಪಡೆದೋರು ಬೀದಿಗೆ ಬರುವಂತಾಗಿದೆ.. ಯಾದಗಿರಿಯಲ್ಲೊಂದು ಕುಟುಂಬ ಮೈಕ್ರೋ ಫೈನಾನ್ಸ್ ಕಿರುಕುಳ ತಾಳಲಾರದೆ ಊರು ತೊರೆದಿದೆ..
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸಹಾಯ ವಾಣಿ ಓಪನ್ ಮಾಡ್ತಿದ್ದೀವಿ.. ದೂರು ಕೊಟ್ಟರೆ ಕೂಡಲೇ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.. ಇನ್ನು ಹಲವು ಮಂದಿ ಸಚಿವರು ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.. ಯಾರು ಏನಂದ್ರು ಇಲ್ಲಿದೆ ನೋಡಿ..
ಜನರಿಗೆ ಖಾಸಗಿ ಹಣಕಾಸು ಸಂಸ್ಥೆಗಳ ಕಿರುಕುಳ ಹೆಚ್ಚುತ್ತಿದ್ದು, ಜನರು ಅಂತಹವರ ವಿರುದ್ಧ ದೂರು ನೀಡಿದ್ದಲ್ಲಿ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಯಚೂರಿನಲ್ಲೂ ಮೈಕ್ರೊ ಫೈನಾನ್ಸ್ ಗಳಿಂದ ಕಂಗಾಲಾದ ಜನ
ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದ ಹಲವರಿಗೆ ನಿತ್ಯ ಟಾರ್ಚರ್
ನಿತ್ಯ ಊರಿಂದ ಊರಿಗೆ ಕಣ್ತಪ್ಪಿಸಿಕೊಂಡು ಓಡಾಡೊ ದುಸ್ಥಿತಿ
10 ಲಕ್ಷ ಸಾಲ ಕೊಟ್ಟು ಆ ಬಡ್ಡಿ ಈ ಬಡ್ಡಿ ಅಂತ 15 ಲಕ್ಷ ಕಟ್ಟಿಸಿಕೊಂಡಿರೊ ಸಿಬ್ಬಂದಿ
Koppal Crime News: ಸಾಲ ಕೊಡುವ ನೆಪದಲ್ಲಿ ತನ್ನ ಜೊತೆಗೆ 1 ದಿನ ಕಾಲಕಳೆಯುವಂತೆ ಹೇಳಿದ್ದ ಅಂತಾ ಯಮನೂರಪ್ಪ ವಿರುದ್ಧ ನಾಗಮ್ಮ ಆರೋಪಿಸಿದ್ದಾಳೆ. ಯಮನೂರಪ್ಪನ ವರ್ತನೆಗೆ ರೊಚ್ಚಿಗೆದ್ದ ನಾಗಮ್ಮ ಹಾಗೂ ಆಕೆಯ ತಾಯಿ ಆತನಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.