Mark Zuckerberg Offer 5000 Dollars For TikTokers: ಮೆಟಾ ಮಾಲೀಕತ್ವದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮೂಲಕ ಲಕ್ಷ ಲಕ್ಷ ಗಳಿಸುವ ಆಕರ್ಷಕ ಆಫರ್ ನೀಡಲಾಗುತ್ತಿದೆ. ಅಮೆರಿಕದಲ್ಲಿ ಅಳಿವಿನಂಚಿನಲ್ಲಿರುವ ಟಿಕ್‌ಟಾಕ್‌ನ ಅನಿಶ್ಚಿತತೆಯ ಲಾಭ ಪಡೆಯಲು ಮುಂದಾಗಿರುವ ಮೆಟಾ ಮಾಲೀಕ ಮಾರ್ಕ್ ಜುಕರ್‌ಬರ್ಗ್
Meta ತನ್ನ ಪ್ಲಾಟ್‌ಫಾರ್ಮ್‌ಗಳಿಗೆ ರಚನೆಕಾರರನ್ನು ಸೇರಿಸಲು $5,000 (ಸುಮಾರು ₹ 4.31 ಲಕ್ಷ) ವರೆಗೆ ಆಫರ್ ಮಾಡಿದೆ. ಅಮೆರಿಕದಲ್ಲಿ ಟಿಕ್‌ಟಾಕ್‌ನ ಭವಿಷ್ಯದ ಬಗ್ಗೆ ಹೆಚ್ಚುತ್ತಿರುವ ಅನಿಶ್ಚಿತತೆಯ ಮಧ್ಯೆ, ಮೆಟಾ ಈ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅಮೆರಿಕದಲ್ಲಿ ತನ್ನ ಪ್ಲಾಟ್‌ಫಾರ್ಮ್‌ಗಳಿಗೆ ರಚನೆಕಾರರನ್ನು ಸೇರಿಸಲು $5,000 (ಸುಮಾರು ₹ 4.31 ಲಕ್ಷ) ಆಫರ್ ನೀಡುತ್ತಿದೆ.
ಹೌದು, ಟಿಕ್‌ಟಾಕ್ ರಚನೆಕಾರರನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನತ್ತ ಆಕರ್ಷಿಸಲು "ಬ್ರೇಕ್‌ಥ್ರೂ ಬೋನಸ್ ಪ್ರೋಗ್ರಾಂ" ಎಂಬ ವಿಶೇಷ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದ್ದು ಇದರ ಅಡಿಯಲ್ಲಿ ವಿಶೇಷ ರಚನೆಕಾರರಿಗೆ ಲಕ್ಪತಿ ಆಫರ್ ನೀಡಲಾಗುತ್ತಿದೆ.
ಇದನ್ನೂ ಓದಿ- ವಾಟ್ಸಾಪ್‌ನಲ್ಲಿ ಅಪ್ಪಿತಪ್ಪಿ ಈ 5 ಕೆಲಸ ಮಾಡಿದ್ರೂ Jail ಸೇರಬೇಕಾಗುತ್ತೆ..! ಹುಷಾರ್
ವಾಸ್ತವವಾಗಿ, ಅಮೆರಿಕದಲ್ಲಿ ಟಿಕ್‌ಟಾಕ್ 170ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಈ ವೇದಿಕೆಯು ಅನೇಕ ರಚನೆಕಾರರಿಗೆ ಜೀವನೋಪಾಯದ ಮುಖ್ಯ ಸಾಧನವಾಗಿರುವುದರಿಂದ ಟಿಕ್‌ಟಾಕ್‌ನ ನಿಷೇಧದ ಬೆದರಿಕೆಯ ನಡುವೆ ಮೆಟಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನ ಈ ಆಫರ್ ಅಂತಹವರಿಗೆ ಅತ್ಯುತ್ತಮ ಕೊಡುಗೆ ಎಂತಲೇ ಹೇಳಬಹುದು.
ಏನಿದು ಮೆಟಾದ ಬ್ರೇಕ್‌ಥ್ರೂ ಬೋನಸ್ ಪ್ರೋಗ್ರಾಂ? ಇದರ ಪ್ರಯೋಜನವೇನು?
ಮಾರ್ಕ್ ಜುಕರ್‌ಬರ್ಗ್ ಮಾಲೀಕತ್ವದ ಮೆಟಾದ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, 'ಬ್ರೇಕ್‌ಥ್ರೂ ಬೋನಸ್ ಪ್ರೋಗ್ರಾಂ'ನಲ್ಲಿ ಭಾಗವಹಿಸಲು ರಚನೆಕಾರರು ಕೆಲವು ಷರತ್ತುಗಳನ್ನು ಪೂರೈಸುವುದು ಅತ್ಯಗತ್ಯವಾಗಿದೆ.
* ಮೊದಲನೆಯದಾಗಿ ಫೇಸ್‌ಬುಕ್ನಲ್ಲಿ 20 ಮೂಲ ರೀಲ್‌ಗಳನ್ನು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 10 ರೀಲ್‌ಗಳನ್ನು ಪೋಸ್ಟ್ ಮಾಡಿರಬೇಕು. ಪ್ರತಿ ತಿಂಗಳಿಗೊಮ್ಮೆ 90 ದಿನಗಳವರೆಗೆ ಈ ಪ್ರಕ್ರಿಯೆಯನ್ನು ಮಾಡಬೇಕಾಗುತ್ತದೆ.
* ಮತ್ತೊಂದು ಗಮನಾರ್ಹ ವಿಚಾರವೇನೆಂದರೆ ಈ ರೀಲ್‌ಗಳನ್ನು ನೀವೇ ಕ್ರಿಯೆಟ್ ಮಾಡಿರಬೇಕು. ಬೇರೆಯವರಿಂದ/ ಬೇರೆ ಪ್ಲಾಟ್‌ಫಾರ್ಮ್‌ನಿಂದ ರಿಪೋಸ್ಟ್ ಮಾಡಿಯಾರಬಾರದು.
ಇದನ್ನೂ ಓದಿ- ಬಿಎಸ್‌ಎನ್‌ಎಲ್ ಪೈಸಾ ವಸೂಲ್ ಪ್ಲಾನ್ : ಒಮ್ಮೆ ರಿಚಾರ್ಜ್ ಮಾಡಿದ್ರೆ 10 ತಿಂಗಳು ನಿಶ್ಚಿಂತೆಯಿಂದ ಇರಬಹುದು!
ಮೆಟಾದ ಬ್ರೇಕ್‌ಥ್ರೂ ಬೋನಸ್ ಪ್ರೋಗ್ರಾಂನಿಂದ ಯಾರಿಗೆ ಲಾಭ?
ಟಿಕ್‌ಟಾಕ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವವರನ್ನು ತನ್ನ ಪ್ಲಾಟ್‌ಫಾರ್ಮ್‌ನತ್ತ ಆಕರ್ಷಿಸುವುದು ಮೆಟಾದ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಮೊದಲ ಬಾರಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಸೇರಲು ಬಯಸುವ ರಚನೆಕಾರರಿಗೆ ಮಾತ್ರ ಇದರ ಪ್ರಯೋಜನ ದೊರೆಯಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.