ರೇಷನ್ ಕಾರ್ಡ್ ಇರುವವರಿಗೆ ಸಿಹಿ ಸುದ್ದಿ; ಯಾವುದೇ ರೀತಿಯ ತಿದ್ದುಪಡಿ ಮಾಡುವುದು ಈಗ ಬಲು ಸುಲಭ!

Ration Card: ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದುವ ರೀತಿಯಲ್ಲಿ ರೇಷನ್ ಕಾರ್ಡ್ ಅನ್ನೂ ಹೊಂದಬೇಕಾಗುತ್ತದೆ. ಜೊತೆಗೆ ರೇಷನ್ ಕಾರ್ಡುಗಳಲ್ಲಿ ದೋಷವಿದ್ದರೆ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ರೇಷನ್ ಕಾರ್ಡ್ ತಿದ್ದುಪಡಿಯೂ ಅಗತ್ಯವಾಗಿದೆ. 

Written by - Yashaswini V | Last Updated : Jan 27, 2025, 09:58 AM IST
  • ರೇಷನ್ ಕಾರ್ಡುಗಳಲ್ಲಿ ಎನಾದರೂ ತಿದ್ದುಪಡಿ ಇದ್ದರೆ, ಅಂದರೆ ಹೆಸರು, ಊರು ಮತ್ತಿತರ ಮಾಹಿತಿಗಳು ತಪ್ಪಾಗಿ ನಮೂದಾಗಿದ್ದರೆ ಸರಿಪಡಿಸಬಹುದು.
  • ತೀರಿಕೊಂಡಿರುವವರು ಮತ್ತು ಕುಟುಂಬ ಭಾಗವಾಗಿದ್ದರೆ ಅಂತವರ ಹೆಸರುಗಳನ್ನು ಹಾಲಿ ರೇಷನ್ ಕಾರ್ಡುಗಳಿಂದ ಡಿಲೀಟ್ ಮಾಡಬಹುದು.
  • ಮದುವೆಯಾದವರು ಹೆಂಡತಿ ಹೆಸರನ್ನು ಮತ್ತು ಮಕ್ಕಳಾದ ಬಳಿಕ ಅವರ ಹೆಸರುಗಳನ್ನು ರೇಷನ್ ಕಾರ್ಡುಗಳಿಗೆ ಹೊಸದಾಗಿ ಸೇರಿಸಬಹುದು.
ರೇಷನ್ ಕಾರ್ಡ್ ಇರುವವರಿಗೆ ಸಿಹಿ ಸುದ್ದಿ; ಯಾವುದೇ ರೀತಿಯ ತಿದ್ದುಪಡಿ ಮಾಡುವುದು ಈಗ ಬಲು ಸುಲಭ! title=

Ration Card News: ಆಯುಷ್ಮಾನ್ ಭಾರತ್ ಸೇರಿದಂತೆ ಹಲವು ಅರೋಗ್ಯ ಯೋಜನೆಗಳ ಲಾಭ ಪಡೆಯಲು ಹಾಗು ನಾನಾ ರೀತಿಯ ಸರ್ಕಾರಿ ಸೌಲಭ್ಯಗಳನ್ನು ತೆಗೆದುಕೊಳ್ಳಲು ರೇಷನ್ ಕಾರ್ಡ್ ಉಪಯುಕ್ತ ದಾಖಲೆ. ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದುವ ರೀತಿಯಲ್ಲಿ ರೇಷನ್ ಕಾರ್ಡ್ ಅನ್ನೂ ಹೊಂದಬೇಕಾಗುತ್ತದೆ. ಜೊತೆಗೆ ರೇಷನ್ ಕಾರ್ಡುಗಳಲ್ಲಿ ದೋಷವಿದ್ದರೆ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ರೇಷನ್ ಕಾರ್ಡ್ ತಿದ್ದುಪಡಿಯನ್ನು ಸುಲಭಗೊಳಿಸಿದೆ.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯಾಹಾರಗಳ ಸಚಿವಾಲಯವು ರೇಷನ್ ಕಾರ್ಡುಗಳಲ್ಲಿ ಏನಾದರೂ ತಿದ್ದುಪಡಿ ಇದ್ದರೆ, ಅಂದರೆ ಹೆಸರು, ಊರು ಮತ್ತಿತರ ಮಾಹಿತಿಗಳು ತಪ್ಪಾಗಿ ನಮೂದಾಗಿದ್ದರೆ ಅವುಗಳನ್ನು ಸರಿಪಡಿಸಬಹುದು. ತೀರಿಕೊಂಡಿರುವವರು ಮತ್ತು ಕುಟುಂಬ ಭಾಗವಾಗಿದ್ದರೆ ಅಂತವರ ಹೆಸರುಗಳನ್ನು ಹಾಲಿ ರೇಷನ್ ಕಾರ್ಡುಗಳಿಂದ ಡಿಲೀಟ್ ಮಾಡಬಹುದು. ಮದುವೆಯಾದವರು ಹೆಂಡತಿ ಹೆಸರನ್ನು ಮತ್ತು ಮಕ್ಕಳಾದ ಬಳಿಕ ಅವರ ಹೆಸರುಗಳನ್ನು ರೇಷನ್ ಕಾರ್ಡುಗಳಿಗೆ ಹೊಸದಾಗಿ ಸೇರಿಸಬಹುದು. 

ಇದನ್ನೂ ಓದಿ- BPL Card: ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್‌ದಾರರಿಗೆ ಗುಡ್ ನ್ಯೂಸ್!

ಸಾಮಾಜಿಕ ಜಾಲತಾಣದಲ್ಲಿ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಮತ್ತು ತಿದ್ದುಪಡಿ ಮಾಡಲು ಜನವರಿ 31 ಕಡೆಯ ದಿನ ಎನ್ನುವ ಸುಳ್ಳು ಸುದ್ದಿಗಳು ಹರಿದಾಡಿದ್ದವು. ಇದರಿಂದಾಗಿ ಗ್ರಾಮ ಒನ್ ಕೇಂದ್ರಗಳ ಬಳಿ ಜನ ಸೇರಿ ಗೊಂದಲ ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯಾಹಾರಗಳ ಇಲಾಖೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಬಗ್ಗೆ ಸ್ಪಷ್ಟಿಕರಣ ನೀಡಿದೆ.

ಇದನ್ನೂ ಓದಿ- ರೇಷನ್ ಕಾರ್ಡ್‌ನಲ್ಲಿ ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡುವುದೇಗೆ? ಪತ್ನಿ, ಮಕ್ಕಳ ಹೆಸರನ್ನೂ ಸೇರಿಸ್ಬೋದು!!

ತಿದ್ದುಪಡಿಗೆ ಪ್ರತಿ ತಿಂಗಳು ಕೂಡ ಅವಕಾಶ ಕಲ್ಪಿಸಲಾಗಿದೆ. ಹಳೆಯ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳನ್ನು ಇಟ್ಟುಕೊಂಡು ಪ್ರತಿ ತಿಂಗಳ ಮೊದಲ ವಾರ ಗ್ರಾಮ ಒನ್ ಮತ್ತು ಬೆಂಗಳೂರು ಒನ್ ಕಚೇರಿಗಳಿಗೆ ಹೋದರೆ ಸುಲಭದಲ್ಲಿ ತಿದ್ದುಪಡಿ ಮಾಡಿಸಬಹುದು. ಅದು ಬಿಟ್ಟು ಯಾವಾಗಲೋ ಹೋಗಿ ನಮ್ಮ ಕೆಲಸ ಆಗಲಿಲ್ಲ ಎಂದು ಕೊರಗುವುದು ಬೇಡ ಎಂದು ಇಲಾಖೆ ತಿಳಿಸಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News