ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಇಸ್ಕಾನ್ ದೇವಾಲಯದ ಸಮುಚ್ಛಯವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು. ಇಲ್ಲಿನ ಖಾರ್ಘರ್ನಲ್ಲಿಸುಮಾರು 9 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ನೂತನ ಇಸ್ಕಾನ್ ದೇವಾಲಯದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು.
ಶ್ರೀ ಕೃಷ್ಣ ಭೂಮಿ ಎಂದೇ ಪ್ರಸಿದ್ಧವಾಗಿರುವ ಉತ್ತರ ಪ್ರದೇಶ ಮಥುರಾದಲ್ಲಿ ಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ ಆರಂಭವಾಗಿದೆ. ಜನ್ಮಾಷ್ಟಮಿ ಹಿನ್ನಲೆ ಪ್ರತಿ ರಸ್ತೆ ಗಲ್ಲಿ ಗಲ್ಲಿಯನ್ನೂ ಸಿಂಗರಿಸಲಾಗಿದೆ. ಇತ್ತ ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಗ್ತಿದೆ.
ಈ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಗಸ್ಟ್ 26 ರಂದು ಆಚರಿಸಲಾಗುತ್ತದೆ. ಈ ಹಬ್ಬದ ಸಂಭ್ರಮ ನಾಡಿನಾದ್ಯಂತ ಕಂಡು ಬರುತ್ತಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಜನರು ಖಂಡಿತವಾಗಿಯೂ ಪ್ರಯಾಣಿಸಲು ಯೋಜಿಸುತ್ತಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಮಥುರಾ-ವೃಂದಾವನದಲ್ಲ ಅದ್ಧೂರಿಯಾಗಿ ಆಚರಿಸಲಾಗುತ್ತದೆ, ಆದರೆ ವೃಂದಾವನದ ಹೊರತಾಗಿ ನೀವು ಗುಜರಾತ್, ಮುಂಬೈ ಮತ್ತು ಕೇರಳದಂತಹ ಸ್ಥಳಗಳಲ್ಲಿ ಈ ಸಂದರ್ಭದಲ್ಲಿ ಅಂತಹ ಅದ್ದೂರಿ ಸಂಭ್ರಮಾಚರಣೆಯನ್ನು ನೋಡಬಹುದಾಗಿದೆ.
ರಿಯಾಲಿಟಿ ಟಿವಿ ತಾರೆ ಕಿಮ್ ಕಾರ್ಡಶಿಯಾನ್ ತನ್ನ ಸಹೋದರಿ ಖ್ಲೋಯ್ ಕಾರ್ಡಶಿಯಾನ್ ಅವರೊಂದಿಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕಾಗಿ ಭಾರತಕ್ಕೆ ಬಂದಿದ್ದರು. ಇದೇ ಸಮಯದಲ್ಲಿ ಈ ಸಹೋದರಿಯರು ಇಸ್ಕಾನ್ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲಸಲಿದರು.
ಮನೆ ಮನೆಗಳಲ್ಲೂ ಗೋಕುಲಾಷ್ಟಮಿ ಸಂಭ್ರಮ. ಇಸ್ಕಾನ್ ದೇಗುಲದಲ್ಲಿ ಅದ್ಧೂರಿ ಕೃಷ್ಣ ಜನ್ಮಾಷ್ಟಮಿ. ರಾಜಾಜಿನಗರದ ಇಸ್ಕಾನ್ ದೇಗುಲದಲ್ಲಿ ಮುಂಜಾನೆ 4-30ರಿಂದ ಶ್ರೀಕೃಷ್ಣನಿಗೆ ಮಂಗಳಾರತಿ, ತುಳಸಿ ಆರತಿ. 8-45ರಿಂದ ರಾಧಾ-ಕೃಷ್ಣ ಉಯ್ಯಾಲೆ ಸೇವೆ, ಬಳಿಕ ರಾಧಾಕೃಷ್ಣ ಉತ್ಸವ ಮೂರ್ತಿಗೆ ಅಭಿಷೇಕ. ಇಸ್ಕಾನ್ನಲ್ಲಿ ಈ ಬಾರಿ ಕೇರಳದ ಗುರುವಾಯೂರು ವಿನ್ಯಾಸದಲ್ಲಿ ಅಲಂಕಾರ.
ಕೊವಿಡ್-19 ಪ್ರಕೋಪದ ಹಿನ್ನೆಲೆ ಘೋಷಿಸಲಾಗಿದ್ದ ಲಾಕ್ ಡೌನ್ ಹಿನ್ನೆಲೆ ಬಂದ್ ಆಗಿದ್ದ ಬೆಂಗಳೂರಿನ ಇಸ್ಕಾನ್ ದೇವಸ್ಥಾನದ (ISKCON Temple)ಬಾಗಿಲುಗಳು ಸುದೀರ್ಘ 6 ತಿಂಗಳುಗಳ ಅವಧಿಯ ಬಳಿಕ ಇದೀಗ ಮತ್ತೆ ಅಕ್ಟೋಬರ್ 5 ರಂದು ತೆರೆದುಕೊಳ್ಳಲಿವೆ. ದೇವಸ್ಥಾನದ ಆಡಳಿತ ಮಂಡಳಿ ಶನಿವಾರ ಈ ಕುರಿತು ಮಾಹಿತಿ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.