ಬೆಂಗಳೂರು :2025-26ನೇ ಹಣಕಾಸು ಬಜೆಟ್ನಲ್ಲಿ ಮಧ್ಯಮ ವರ್ಗದ ಜನತೆ, ಉದ್ಯೋಗಿಗಳಿಗೆ ₹12 ಲಕ್ಷದ ತನಕ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಿದ್ದು, ಮಧ್ಯಮ ವರ್ಗದ ಜನರ ಜೇಬಿಗೆ ಹಿತ ನೀಡಿದೆ.
ಹಿರಿಯ ನಾಗರಿಕರು, ಕಾರ್ಪೊರೇಟ್ ಕಂಪನಿಗಳು ಮತ್ತು ಸ್ಟಾರ್ಟ್-ಅಪ್ಗಳಿಗೆ ಮಹತ್ವದ ಆದಾಯ ತೆರಿಗೆ ಸೌಲಭ್ಯಗಳನ್ನು ಘೋಷಿಸಲಾಗಿದೆ. ಈ ಬಜೆಟ್ನಲ್ಲಿ ಒಟ್ಟು ₹1 ಲಕ್ಷ ಕೋಟಿ ದರದಷ್ಟು ನೇರ ತೆರಿಗೆಗಳನ್ನು ಮನ್ನಾ ಮಾಡಲಾಗಿದೆ, ಇದರ ಉದ್ದೇಶ ಹೆಚ್ಚಿನ ಲಾಭದಾಯಕತೆ, ಖರ್ಚು ಶಕ್ತಿಯ ಹೆಚ್ಚಳ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವದು.
1. ಮಧ್ಯಮ ವರ್ಗಕ್ಕೆ ವಿಶೇಷ ಆದಾಯ ತೆರಿಗೆ ವಿನಾಯಿತಿ :
₹12 ಲಕ್ಷದ ತನಕ ಸಂಪೂರ್ಣ ತೆರಿಗೆ ವಿನಾಯಿತಿ!
ಈ ಬಜೆಟ್ನಲ್ಲಿ, ನೂತನ ತೆರಿಗೆ ಪದ್ದತಿಯಡಿ ₹12 ಲಕ್ಷದ ತನಕ ಯಾವುದೇ ಆದಾಯ ತೆರಿಗೆ ವಿಧಿಸಲಾಗುವುದಿಲ್ಲ. ಈ ನಿರ್ಧಾರ ಮಧ್ಯಮ ವರ್ಗದ ಕುಟುಂಬಗಳಿಗೆ ಹಿತ ನೀಡಿದೆ
ನೂತನ ತೆರಿಗೆ ಸ್ಲಾಬ್ಗಳು:
₹0-₹4 ಲಕ್ಷ – ಶೇ. 0
₹4-₹8 ಲಕ್ಷ – ಶೇ. 5
₹8-₹12 ಲಕ್ಷ – ಶೇ. 10
₹12-₹16 ಲಕ್ಷ – ಶೇ. 15
₹16-₹20 ಲಕ್ಷ – ಶೇ. 20
₹20-₹24 ಲಕ್ಷ – ಶೇ. 25
₹24 ಲಕ್ಷ ಮೇಲ್ಪಟ್ಟವರು – ಶೇ. 30
ಉದಾಹರಣೆ ಸಹಿತ ವಿವರಣೆ :
₹12 ಲಕ್ಷ ಆದಾಯ ಹೊಂದಿರುವವರು ಈ ಹಿಂದೆ ₹80,000 ತೆರಿಗೆ ಕಟ್ಟಬೇಕಾಗಿತ್ತು. ಇಗೀಗ ಅದು ಶೂನ್ಯ!
₹18 ಲಕ್ಷ ಆದಾಯ ಹೊಂದಿರುವವರು ₹70,000 ಕಡಿಮೆ ತೆರಿಗೆ ಪಾವತಿಸಬೇಕು.
₹25 ಲಕ್ಷ ಆದಾಯ ಹೊಂದಿರುವವರು ₹1,10,000 ತೆರಿಗೆ ಉಳಿಸಬಹುದು.
ಉದ್ಯೋಗಿಗಳಿಗೆ ಹೆಚ್ಚುವರಿ ಲಾಭ:
ಸ್ಟ್ಯಾಂಡರ್ಡ್ ಡಿಡಕ್ಷನ್ ₹50,000 ನಿಂದ ₹75,000 ಕ್ಕೆ ಹೆಚ್ಚಿಸಲಾಗಿದೆ.
ಉದ್ಯೋಗಿಗಳಿಗೆ ₹12.75 ಲಕ್ಷದ ಆದಾಯದ ತನಕ ಯಾವುದೇ ತೆರಿಗೆ ಇಲ್ಲ.
2. ಹಿರಿಯ ನಾಗರಿಕರಿಗೆ ಹೆಚ್ಚು ಸೌಲಭ್ಯ
ಬ್ಯಾಂಕಿನ ಬಡ್ಡಿಯ ಮೇಲಿನ TDS ಮಿತಿಯನ್ನು ₹50,000 ನಿಂದ ₹1 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಈ ಮಾರ್ಪಾಡಿನಿಂದ ಹಿರಿಯ ನಾಗರಿಕರು ಬ್ಯಾಂಕಿನಲ್ಲಿ ಹೆಚ್ಚು ಹಣ ಠೇವಣಿ ಇಟ್ಟು ಹೆಚ್ಚಿನ ಬಡ್ಡಿಯನ್ನು ತೆರಿಗೆ ಮುಕ್ತವಾಗಿ ಪಡೆಯಬಹುದು.
3. ಬಾಡಿಗೆಗೆ ಸಂಬಂಧಿಸಿದ ಟ್ಯಾಕ್ಸ್ ಕಡಿತ
TDS ಮಿತಿಯನ್ನು ₹2.40 ಲಕ್ಷದಿಂದ ₹6 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಇದರಿಂದ ಬಾಡಿಗೆ ಪಡೆಯುವವರಿಗೆ ಹೆಚ್ಚು ಲಾಭ – ಅಲ್ಪ ಪ್ರಮಾಣದ ಬಾಡಿಗೆಗೆ ತೆರಿಗೆ ಕಡಿಮೆ.
4. ಸ್ಟಾರ್ಟ್-ಅಪ್ಗಳಿಗೆ ಸೌಲಭ್ಯ
ಸ್ಟಾರ್ಟ್-ಅಪ್ಗಳಿಗೆ ತೆರಿಗೆ ವಿನಾಯಿತಿಯ ಅವಧಿಯನ್ನು 2030ರ ತನಕ ವಿಸ್ತರಿಸಲಾಗಿದೆ.
ಇದರಿಂದ ಹೊಸ ಉದ್ಯಮಿಗಳು ಬೇಗನೇ ಬೆಳೆಯಲು ಮತ್ತು ಹೊಸ ಉದ್ಯೋಗ ಸೃಷ್ಟಿಸಲು ನೆರವಾಗಲಿದೆ.
5. ಉದ್ಯಮಗಳ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಸೌಲಭ್ಯ
FDI (Foreign Direct Investment) ವಿಮಾ ಕಂಪನಿಗಳಿಗೆ 100% ಗೆ ಹೆಚ್ಚಿಸಲಾಗಿದೆ.
IFSC (International Financial Services Centre) ನಲ್ಲಿ ಶಿಪ್ಪಿಂಗ್ ಲೀಸಿಂಗ್ ಮತ್ತು ಇತರ ಹೂಡಿಕೆಗಳಿಗೆ ಹೆಚ್ಚಿನ ತೆರಿಗೆ ರಿಯಾಯಿತಿ.
Alternate Investment Funds (AIFs) ಗೆ ತೆರಿಗೆ ಸುಧಾರಣೆ, ಇದರಿಂದ ಹೊಸ ಹೂಡಿಕೆದಾರರಿಗೆ ಭಾರತ ಆಕರ್ಷಕ ತಾಣವಾಗಲಿದೆ.
6. ಹೊಸ ಆದಾಯ ತೆರಿಗೆ ಮಸೂದೆ
ಹಾಲಿ ಆದಾಯ ತೆರಿಗೆ ಕಾಯ್ದೆಯ ಬದಲಾವಣೆ ಮಾಡಿ ಹೊಸ ಮಸೂದೆ ತರಲಾಗುತ್ತಿದೆ.
ಇದು ಹಳೆಯ ಕಾನೂನಿನಗಿಂತ ಅರ್ಧದಷ್ಟು ಸರಳವಾಗಿ, ಪಾರದರ್ಶಕವಾಗಿ ಮತ್ತು ಸುಲಭವಾಗಿ ಇರಲಿದೆ.
ನವೀಕರಿಸಿದ ಕಾನೂನು ಭವಿಷ್ಯದ ಸುಧಾರಣೆಗಳಿಗೆ ಅನುಕೂಲ ಮಾಡಲಿದೆ.
7. ಇನ್ನಷ್ಟು ಸುಧಾರಣೆಗಳು
ಆನ್ಲೈನ್ ಉದ್ಯೋಗಿಗಳಿಗೆ ಹೊಸ ಗುರುತಿನ ಚೀಟಿ & PM Jan Arogya Yojana ವೈದ್ಯಕೀಯ ಪ್ರಯೋಜನ.
TDS/TCS ನಿಯಮಗಳಲ್ಲಿ ಸರಳೀಕರಣ – ಅನಗತ್ಯ ತೆರಿಗೆ ಕಡಿತ.
Vivad Se Vishwas ಯೋಜನೆಯ ಯಶಸ್ಸು: 33,000 ಜನರು ಹಳೆಯ ತೆರಿಗೆ ವಿವಾದಗಳನ್ನು ಸುಲಭವಾಗಿ ಪರಿಹರಿಸಿಕೊಂಡಿದ್ದಾರೆ.
ಈ ಬಜೆಟ್ನಲ್ಲಿ ಆದಾಯ ತೆರಿಗೆ ವಿನಾಯಿತಿಗಳು ಮಧ್ಯಮ ವರ್ಗದ ಜನರು, ಉದ್ಯೋಗಿಗಳು, ಹಿರಿಯ ನಾಗರಿಕರು, ಸ್ಟಾರ್ಟ್-ಅಪ್ಗಳು ಮತ್ತು ಉದ್ಯಮಗಳಿಗಾಗಿ ದೊಡ್ಡ ಆದಾಯ ವೃದ್ಧಿಗೆ ಸಹಾಯ ಮಾಡಲಿದೆ. ಇದರ ಪರಿಣಾಮ ಭಾರತದ ಆರ್ಥಿಕ ಪ್ರಗತಿಗೆ ವೇಗ ನೀಡಲಿದ್ದು, ಜನರ ಕೈಯಲ್ಲಿ ಹೆಚ್ಚಿನ ಹಣ ಉಳಿಯುವಂತೆ ಮಾಡಲಿದೆ, ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯ ಪಟ್ಟರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.