Union Budget 2025: ಬಜೆಟ್‌ಗೂ ಮುನ್ನ ಶೇರು ಮಾರುಕಟ್ಟೆಯಲ್ಲಿ ಸಂಚಲನ; ಸೆನ್ಸೆಕ್ಸ್ 741 ಹಾಗೂ ನಿಫ್ಟಿ 259 ಅಂಕ ಏರಿಕೆ!!

Union Budget 2025: ಶುಕ್ರವಾರ ಬಿಎಸ್‌ಇ ಸೆನ್ಸೆಕ್ಸ್ 740.76 ಪಾಯಿಂಟ್‌ಗಳ (0.97%) ಗಳಿಕೆಯೊಂದಿಗೆ 77,500.57 ಪಾಯಿಂಟ್‌ಗಳಲ್ಲಿ ಕೊನೆಗೊಂಡಿತು. ಅದೇ ರೀತಿ NSEಯ ನಿಫ್ಟಿ 50 ಕೂಡ 258.90 ಪಾಯಿಂಟ್‌ಗಳ (1.11%) ಏರಿಕೆಯೊಂದಿಗೆ 23,508.40 ಪಾಯಿಂಟ್‌ಗಳಿಗೆ ಕೊನೆಗೊಂಡಿತು. ಗುರುವಾರವೂ ಸ್ಟಾಕ್ ಮಾರುಕಟ್ಟೆಯು ಹಸಿರು ಬಣ್ಣದಲ್ಲಿ ವಹಿವಾಟು ಕೊನೆಗೊಳಿಸಿತು.

Written by - Puttaraj K Alur | Last Updated : Jan 31, 2025, 05:40 PM IST
  • ಬಜೆಟ್‌ಗೂ ಮುನ್ನವೇ ಹೂಡಿಕೆದಾರರಿಗೆ ಭರ್ಜರಿ ಲಾಭ ನೀಡಿದ ಷೇರು ಮಾರುಕಟ್ಟೆ
  • ಶುಕ್ರವಾರ 30 ಸೆನ್ಸೆಕ್ಸ್ ಕಂಪನಿಗಳ ಪೈಕಿ 24 ಷೇರುಗಳು ಲಾಭದಲ್ಲಿ ವಹಿವಾಟು ನಡೆಸಿದವು
  • ನಿಫ್ಟಿ 50ರ 50 ಕಂಪನಿಗಳ ಪೈಕಿ 44 ಕಂಪನಿಗಳ ಷೇರುಗಳು ಏರಿಕೆ ಕಂಡು ಲಾಭ ಗಳಿಸಿದವು
Union Budget 2025: ಬಜೆಟ್‌ಗೂ ಮುನ್ನ ಶೇರು ಮಾರುಕಟ್ಟೆಯಲ್ಲಿ ಸಂಚಲನ; ಸೆನ್ಸೆಕ್ಸ್ 741 ಹಾಗೂ ನಿಫ್ಟಿ 259 ಅಂಕ ಏರಿಕೆ!! title=
Union Budget 2025

Union Budget 2025: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ ಅಂದರೆ ಫೆಬ್ರವರಿ 1ರಂದು 2025-26ನೇ ಹಣಕಾಸು ವರ್ಷದ ಬಜೆಟ್ ಅನ್ನು ಮಂಡಿಸಲಿದ್ದಾರೆ. ಬಜೆಟ್ ಮಂಡಿಸುವ ಮುನ್ನ ಹಣಕಾಸು ಸಚಿವರು ಇಂದು ಸಂಸತ್ತಿನಲ್ಲಿ 2024-25ರ ಆರ್ಥಿಕ ವರ್ಷದ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಈ ಅವಧಿಯಲ್ಲಿ ಭಾರತೀಯ ಷೇರು ಮಾರುಕಟ್ಟೆಯು ವೇಗವನ್ನು ಪಡೆದುಕೊಂಡಿತು ಮತ್ತು ಭಾರೀ ಲಾಭದೊಂದಿಗೆ ವಹಿವಾಟನ್ನು ಕೊನೆಗೊಳಿಸಿತು. ತಿಂಗಳ ಕೊನೆಯ ದಿನದಂದು ಷೇರು ಮಾರುಕಟ್ಟೆಯು ಲಾಭದೊಂದಿಗೆ ತೆರೆದು ದೊಡ್ಡ ಲಾಭದೊಂದಿಗೆ ಮುಕ್ತಾಯವಾಯಿತು. ಶುಕ್ರವಾರ ಬಿಎಸ್‌ಇ ಸೆನ್ಸೆಕ್ಸ್ 740.76 ಪಾಯಿಂಟ್‌ಗಳ (0.97%) ಗಳಿಕೆಯೊಂದಿಗೆ 77,500.57 ಪಾಯಿಂಟ್‌ಗಳಲ್ಲಿ ಕೊನೆಗೊಂಡಿತು. NSEಯ ನಿಫ್ಟಿ 50 ಕೂಡ 258.90 ಪಾಯಿಂಟ್‌ಗಳ (1.11%) ಏರಿಕೆಯೊಂದಿಗೆ 23,508.40 ಪಾಯಿಂಟ್‌ಗಳಿಗೆ ಕೊನೆಗೊಂಡಿತು. ನಿನ್ನೆ ಅಂದರೆ ಗುರುವಾರವೂ ಷೇರು ಮಾರುಕಟ್ಟೆಯು ಹಸಿರು ಬಣ್ಣದಲ್ಲಿ ವಹಿವಾಟನ್ನು ಕೊನೆಗೊಳಿಸಿತ್ತು. .

ಲಾರ್ಸೆನ್ ಅಂಡ್ ಟೂಬ್ರೊ ಷೇರು ಶೇ.4ಕ್ಕಿಂತ ಹೆಚ್ಚು ಏರಿಕೆ!  

ಶುಕ್ರವಾರ 30 ಸೆನ್ಸೆಕ್ಸ್ ಕಂಪನಿಗಳ ಪೈಕಿ 24 ಷೇರುಗಳು ಲಾಭದೊಂದಿಗೆ ಹಸಿರು ಬಣ್ಣದಲ್ಲಿ ವಹಿವಾಟು ನಡೆಸಿದವು. ಉಳಿದ 6 ಕಂಪನಿಗಳ ಷೇರುಗಳು ಕುಸಿತದೊಂದಿಗೆ ರೆಡ್‌ನಲ್ಲಿ ವಹಿವಾಟು ಕೊನೆಗೊಳಿಸಿದವು. ಅದೇ ರೀತಿ ನಿಫ್ಟಿ 50ರ 50 ಕಂಪನಿಗಳ ಪೈಕಿ 44 ಕಂಪನಿಗಳ ಷೇರುಗಳು ಏರಿಕೆಯೊಂದಿಗೆ ಹಸಿರು ಮಾರ್ಕ್‌ನಲ್ಲಿ ಕ್ಲೋಸ್‌ ಆದರೆ, ಉಳಿದ 6 ಕಂಪನಿಗಳ ಷೇರುಗಳು ನಷ್ಟದೊಂದಿಗೆ ರೆಡ್ ಮಾರ್ಕ್‌ನಲ್ಲಿ ಮುಚ್ಚಲ್ಪಟ್ಟವು. ಇಂದು ಸೆನ್ಸೆಕ್ಸ್ ಕಂಪನಿಗಳ ಪೈಕಿ ಲಾರ್ಸೆನ್ ಅಂಡ್ ಟೂಬ್ರೊ ಷೇರು ಗರಿಷ್ಠ ಶೇ.4.37ರಷ್ಟು ಲಾಭದೊಂದಿಗೆ ಮುಕ್ತಾಯಗೊಂಡರೆ, ITC ಹೋಟೆಲ್‌ಗಳ ಷೇರುಗಳು ಗರಿಷ್ಠ ಶೇ.2.98 ಕುಸಿತದೊಂದಿಗೆ ಕ್ಲೋಸ್‌ ಆದವು.

ಇದನ್ನೂ ಓದಿ: ಆದಾಯ ತೆರಿಗೆಯಲ್ಲಿ 3 ಮಹತ್ವದ ಬದಲಾವಣೆ: ಮಧ್ಯಮ ವರ್ಗದವರಿಗೆ ಜಾಕ್ ಪಾಟ್!

ನೆಸ್ಲೆ ಇಂಡಿಯಾ, ಇಂಡಸ್‌ಇಂಡ್ ಬ್ಯಾಂಕ್ ಷೇರುಗಳಲ್ಲಿ ಏರಿಕೆ!  

ಶುಕ್ರವಾರ ಸೆನ್ಸೆಕ್ಸ್‌ನಲ್ಲಿ ಕಂಪನಿಗಳ ಪೈಕಿ ನೆಸ್ಲೆ ಇಂಡಿಯಾ ಶೇರು ಶೇ.4.25, ಇಂಡಸ್‌ಇಂಡ್ ಬ್ಯಾಂಕ್ ಶೇ.3.66, ಟೈಟಾನ್ ಶೇ.3.59, ಟಾಟಾ ಮೋಟಾರ್ಸ್ ಶೇ.2.73, ಟಾಟಾ ಸ್ಟೀಲ್ ಶೇ.2.67, ಐಟಿಸಿ ಶೇ.2.51, ಮಾರುತಿ ಸುಜುಕಿ ಶೇ.2.49, ಹಿಂದೂಸ್ತಾನ್ ಯೂನಿಲಿವರ್ ಶೇ.2.48, ಪವರ್‌ಗ್ರಿಡ್ ಶೇ.2.29, ಏಷ್ಯನ್ ಪೇಂಟ್ಸ್ ಶೇ.2.23, ಅದಾನಿ ಪೋರ್ಟ್ಸ್ ಶೇ.2.06, ಝೊಮಾಟೊ ಶೇ.1.46, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.1.43, ಇನ್ಫೋಸಿಸ್ ಶೇ.1.21, ಅಲ್ಟ್ರಾಟೆಕ್ ಸಿಮೆಂಟ್ ಶೇ.0.97, ರಿಲಯನ್ಸ್ ಇಂಡಸ್ಟ್ರೀಸ್ ಶೇ.0.90, ಸನ್ ಫಾರ್ಮಾ ಶೇ.0.88, ಟೆಕ್ ಮಹೀಂದ್ರಾ ಶೇ.0.81, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಶೇ.0.72, HCL ಟೆಕ್ ಶೇ.0.60, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.0.42, ಎನ್‌ಟಿಪಿಸಿ ಶೇ.0.36 ಮತ್ತು ಟಿಸಿಎಸ್ ಷೇರುಗಳು ಶೇ.0.18 ರಷ್ಟು ಲಾಭದೊಂದಿಗೆ ವಹಿವಾಟು ಮುಗಿಸಿದವು.

ಈ ಷೇರುಗಳಲ್ಲಿ ನಷ್ಟ!

ಇಂದು ಭಾರ್ತಿ ಏರ್‌ಟೆಲ್ ಶೇರು ಶೇ.0.76, ಬಜಾಜ್ ಫಿನ್‌ಸರ್ವ್ ಶೇ.0.43, ಬಜಾಜ್ ಫೈನಾನ್ಸ್ ಶೇ.0.17, ಐಸಿಐಸಿಐ ಬ್ಯಾಂಕ್ ಶೇ.0.14 ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಶೇ.0.06ರಷ್ಟು ಕುಸಿತ ಕಂಡವು. ನಾಳೆ ಶನಿವಾರವಾದರೂ ಸಹ ಬಜೆಟ್‌ ಮಂಡನೆಯಾಗುತ್ತಿರುವ ಕಾರಣ ಷೇರು ಮಾರುಕಟ್ಟೆ ಎಂದಿನಂತೆ ವಹಿವಾಟು ನಡೆಸಲಿದೆ.

ಇದನ್ನೂ ಓದಿ: UPI ಪೇಮೆಂಟ್‌ನಲ್ಲಿ ಮಹತ್ವದ ಬದಲಾವಣೆ; ಫೆಬ್ರವರಿ 1ರಿಂದ ಈ ರೀತಿಯ ಪೇಮೆಂಟ್‌ಗಳು ವರ್ಕ್‌ ಆಗಲ್ಲ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News