ಬಣಬಡಿದಾಟಕ್ಕೆ ಮದ್ದು ಕೊಡಲು ಬಂದ ಜೆ.ಪಿ.ನಡ್ಡಾ
ಬೆಂಗಳೂರಿಗೆ ಬಂದಿಳಿದ ಬಿಜೆಪಿ ಹಿರಿಯ ನಾಯಕ ನಡ್ಡಾ
ಬಿಜೆಪಿ ರಾಜ್ಯಧ್ಯಕ್ಷರಾದ ಬಿ.ವೈ ವಿಜಯೇಂದ್ರರಿಂದ ಸ್ವಾಗತ
ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸಾಥ್
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ
ಘನತೆವೆತ್ತ ರಾಜ್ಯಪಾಲರನ್ನು ಭೇಟಿ ಮಾಡಿ ಸಿ.ಎ.ಸೈಟ್ಗಳ ಅಕ್ರಮದ ಕುರಿತು ತನಿಖೆಗೆ ಕೋರಿದ್ದೇವೆ. ಇದರಲ್ಲಿ ಒಬ್ಬರ ವಿಷಯ ಎಂದು ಹೇಳಿಲ್ಲ. ಆದರೂ ಸಚಿವರು ಕುಪಿತರಾಗಿದ್ದಾರೆ. ಅವರೇನು ಸೈಟ್ ತಗೊಂಡಿಲ್ವ? ಶೆಡ್ ಕಟ್ಟಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸತ್ಯ ಹರಿಶ್ಚಂದ್ರರೇನಲ್ಲ. 18 ವರ್ಷಗಳಾದರೂ ಅಲ್ಲಿ ಏನೂ ಮಾಡದೆ ಕಾಟಾಚಾರಕ್ಕೆ ಒಂದು ಶೆಡ್ ಹಾಕಿಕೊಂಡು ಕೂತಿರುವ ಆಸಾಮಿ ಎಂದು ಸಚಿವ ಎಂ.ಬಿ. ಪಾಟೀಲ್ ಕಿಡಿಕಾರಿದರು.
ಅಜಾತಶತ್ರು, ಅಪ್ರತಿಮ ಹೋರಾಟಗಾರ ಮತ್ತು ಸರ್ವರ ಪ್ರೀತಿ ಪ್ರಶಂಸೆಗಳಿಗೆ ಪಾತ್ರವಾಗಿದ್ದ ಜಗದೀಶ್’ರವರನ್ನು ಸಮುದಾಯ ಕಳೆದುಕೊಂಡಿರುವುದು ನನಗೆ ಅತೀವ ನೋವಾಗಿದೆ. ಬಿಜೆಪಿಯು ಒಬ್ಬ ನಿಷ್ಠಾವಂತ ಕಾರ್ಯಕರ್ತನನ್ನು ಕಳೆದುಕೊಂಡಿದ್ದು ಪಕ್ಷಕ್ಕೂ ತುಂಬಲಾರದ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರಡು ಪಟ್ಟಿ ಸಿದ್ದವಾಗುವ ವೇಳೆ ನಾವೇ ಹೆಸರು ಕೈಬಿಟ್ಟಿದ್ದೇವೆ ಎಂದು ಚುನಾವಣಾ ಆಯೋಗವೇ ಹೇಳಿದ್ದರೂ ಕಾಂಗ್ರೆಸ್ ನಮ್ಮ ಮೇಲೆ ಸುಳ್ಳು ಆಪಾದನೆ ಮಾಡುತ್ತಿದೆ. ತಪ್ಪಿಗೆ ಕಾರಣವಾದ ಕಾಂಗ್ರೆಸ್ ಗೂ ಶಿಕ್ಷೆಯಾಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು- ಛಲವಾದಿ ನಾರಾಯಣಸ್ವಾಮಿ
ಬಿ.ಎಸ್.ಯಡಿಯೂರಪ್ಪನವರಿಗೆ ನಿವೃತ್ತಿ ಅನ್ನುವುದೇ ಇಲ್ಲ ಎಂದು ವಿಜಯಪುರದಲ್ಲಿ ವಿಧಾನ ಪರಿಷತ್ ಸದಸ್ಯ ಚಲುವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಯಡಿಯೂರಪ್ಪ ಎಲ್ಲರನ್ನು ಬೆಳೆಸಿದ್ದಾರೆ. ಅದಕ್ಕಾಗಿ ಇನ್ನಷ್ಟು ಪಕ್ಷವನ್ನು ಬೆಳೆಸುವ ಸಲುವಾಗಿ ಆರೋಗ್ಯ ಆಯುಷ್ಯವನ್ನು ದೇವರು ನೀಡಲಿ ಎಂದಿದ್ದಾರೆ..
ಪರಿಷ್ಕೃತ ಪಠ್ಯದಲ್ಲಿ ಸಂವಿಧಾನ ಶಿಲ್ಪಿ ಪದ ಬಿಟ್ಟಿರುವ ವಿಚಾರ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಛಲವಾದಿ ನಾರಾಯಣ ಸ್ವಾಮಿ, ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಬೇಡ. ಅಂಬೇಡ್ಕರ್ ಅಂದ್ರೆ ಏನು ಅಂತ ಎಲ್ರಿಗೂ ಗೊತ್ತು. ಅಂಬೇಡ್ಕರ್ ಹೆಸರಲ್ಲೇ ಎಲ್ಲವೂ ಇದೆ. ಎಲ್ಲೋ ಒಂದು ಕಡೆ ಸಂವಿಧಾನ ಶಿಲ್ಪಿ ಅಂತ ನಮೂದಾಗೋದು ಬಿಟ್ಹೋದ್ರೆ ಏನಾಗುತ್ತೆ? ಮತ್ತೆ ಸೇರಿಸಿಕೊಂಡರೆ ಆಯ್ತು ಎಂದು ಹೇಳಿಕೆ ನೀಡಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.