Upendra UI Movie : ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ಉಪೇಂದ್ರ ಅವರ ಪರಿಚಯದ ಅಗತ್ಯವೇ ಇಲ್ಲ ಬಿಡಿ.. ದೇಶಕ್ಕೆ ಗೊತ್ತು ಉಪ್ಪಿ ಗತ್ತು.. ಪ್ರಪಂಚದ ಟಾಪ್ ನಿರ್ದೇಶಕ ಪಟ್ಟಿಯಲ್ಲಿಯೂ ಬುದ್ದಿವಂತ ಸ್ಥಾನ ಪಡೆದಿದ್ದಾನೆ.. ಪ್ರಯೋಗಾತ್ಮಕ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಸದಾ ರಂಜಿಸುತ್ತಿರುವ ಉಪ್ಪಿ ಇತ್ತಿಚೀಗೆ ತಲೆಕೆಡಿಸಿಕೊಂಡ ಘಟನೆಯೊಂದು ನಡೆದಿದೆ..
Allu Arjun case updates : ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಶುಕ್ರವಾರ (ಡಿಸೆಂಬರ್ 13) ಇಡೀ ರಾತ್ರಿ ಚಂಚಲ್ ಗುಡಾ ಜೈಲಿನಲ್ಲಿ ಕಳೆದ ನಂತರ ನಟ ಶನಿವಾರ (ಡಿಸೆಂಬರ್ 14) ಬೆಳಗ್ಗೆ ಬಿಡುಗಡೆಯಾಗಿದ್ದಾರೆ.
Sanju Weds Geetha-2: ಇನ್ನು ನಾಗಶೇಖರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರದ 'ಅವನು ಸಂಜು ಅವಳು ಗೀತಾ ಅವರಿಬ್ಬರು ಸೇರಲು ಸಂಗೀತ' ಎಂಬ ಹಾಡಿನ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
Actor Upendra Comment on Anupama Gowda: ನಟನೆ-ನಿರೂಪಣೆ ಎರಡರಲ್ಲೂ ಬ್ಯುಸಿ ಆಗಿರುವ ಅನುಪಮಾ ಗೌಡ ಬಗ್ಗೆ ನಟ ಉಪೇಂದ್ರ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಅವರು ನೀಡಿದ ಹೇಳಿಕೆ ಕೇಳಿ ಅನುಪಮ ಅವರೇ ಒಂದು ಕ್ಷಣ ಶಾಕ್ ಆಗಿದ್ದು ಸುಳ್ಳಲ್ಲ.
Darshan Upendra viral video : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಗೌಡ ಸೇರಿದಂತೆ ಒಟ್ಟು 17 ಜನ ಆರೋಪಿಗಳು ಜೈಲು ಸೇರಿದ್ದಾರೆ.. ಇನ್ನು ಈ ಪ್ರಕರಣ ಮುನ್ನೆಲೆಗೆ ಬಂದಾಗಿನಿಂದ ದಾಸನಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳು, ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.. ಈ ಪೈಕಿ ಉಪ್ಪಿ-ದರ್ಶನ್ ವಿಡಿಯೋ ಒಂದು ವೈರಲ್ ಆಗುತ್ತಿದೆ..
Upendra On Renukaswamy Murder Case: ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮತ್ತು ಅದರ ವಿಚಾರಣೆಯನ್ನು ಕರ್ನಾಟಕ ಮಾತ್ರವಲ್ಲ ಇಡೀ ಭಾರತವೇ ಬೆರಗಾಗಿ ನೋಡುತ್ತಿದೆ ಎಂದು ಬರೆದು ನಟ ಉಪೇಂದ್ರ ಪೋಸ್ಟ್ ಮಾಡಿದ್ದಾರೆ.
Upendra on troll : 2 ಬಾರಿ ಚುನಾವಣೆ ಎದುರಿಸಿದರೂ ಸಹ ಪವನ್ ಕಲ್ಯಾಣ್ ಅವರಿಗೆ ಜಯ ಲಭಿಸಿದ್ದಿಲ್ಲ. ಈ ಬಾರಿ ಅವರು ತಮ್ಮ ಪಕ್ಷದ 21 ಅಭ್ಯರ್ಥಿಗಳ ಜೊತೆ ತಾವೂ ಗೆಲುವಿನ ನಗೆ ಬೀರಿದ್ದಾರೆ. ಇದೀಗ ಇದೇ ಮ್ಯಾಟರ್ ಇಟ್ಟುಕೊಂಡು ನೆಟ್ಟಿಗರು ಉಪ್ಪಿಯವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಒಂದು ಸಮುದಾಯದ ಬಗ್ಗೆ ಕೀಳಾಗಿ ಮಾತನಾಡುವುದು ನಿಲ್ಲಿಸಬೇಕು. ನಾಣ್ಣುಡಿ ಇದೆ ಅಂತಾ ಹೇಳಿ ಕೀಳಾಗಿ ಮಾತನಾಡುವುದು ಸರಿಯಲ್ಲ. ಇದನ್ನು ನಿಲ್ಲಿಸಿದರೆ ಒಳ್ಳೆಯದು, ಚುಚ್ಚು ಮಾತುಗಳನ್ನಾಡುವಾಗ ವಿವೇಚನೆ ಇರಬೇಕು ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
Upendra Controversy: ರಾಜಕೀಯ ಪಕ್ಷ ಪ್ರಜಾಕೀಯ ಅಭಿಮಾನಿಗಳು ಮತ್ತು ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ನಟ, ಮಾತಿನ ಮಧ್ಯೆ ʻಊರಿದ್ದಲ್ಲಿ ಹೊಲಗೇರಿ ಇರುತ್ತೆʼ ಎಂದಿದ್ದರು. ಇದು ಅನೇಕ ದಲಿತ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿತ್ತು.
ಕನ್ನಡ ಗಾದೆಯನ್ನು ಬಳಸಿದ್ದಕ್ಕಾಗಿ ಅರ್ಜಿದಾರರ ವಿರುದ್ಧ ಸುಳ್ಳು ದೂರು ನೀಡಲಾಗಿದೆ. ಕ್ಷುಲ್ಲಕ ಮತ್ತು ಪ್ರಚಾರಕ್ಕಾಗಿ ದೂರನ್ನು ದಾಖಲಿಸಲಾಗಿದೆ. ಅರ್ಜಿದಾರರು ದಲಿತರು ಅಥವಾ ಎಸ್ಸಿ ಮತ್ತು ಎಸ್ಟಿಎಸ್ಗೆ ಸೇರಿದ ವ್ಯಕ್ತಿಗಳನ್ನು ಅವಮಾನಿಸಿಲ್ಲ ಎಂದು ನಟ ಉಪೇಂದ್ರ ಅವರು ತಮ್ಮ ವಿರುದ್ಧದ ಎಫ್ಐಆರ್ ರದ್ದತಿ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಲೈವ್ನಲ್ಲಿ ಮಾತನಾಡಿದ್ದ ಉಪೇಂದ್ರ ಸಮುದಾಯವೊಂದರ ಕುರಿತು ಆಕ್ಷೇಪಾರ್ಹ ಪದ ಬಳಸಿದ್ದರು. ತಕ್ಷಣ ಎಚ್ಚೆತ್ತ ಉಪೇಂದ್ರ ಆ ವಿಡಿಯೋ ಡಿಲೀಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿದ್ದರು.
ನಿನ್ನೆ ಉಪೇಂದ್ರ ಅವರು ತಮ್ಮ ಅಭಿಮಾನಿಗಳ ಜೊತೆ ಪ್ರಜಾಕೀಯ ಮುನ್ನೆಲೆಗೆ ಬಂದು 6 ವರ್ಷವಾದ ಪ್ರಯುಕ್ತ ಸಂವಾದ ನಡೆಸಿದ್ದರು. ಈ ವೇಳೆ ಮಾತಿನ ಭರದಲ್ಲಿ ʼಊರು ಅಂದ್ಮೇಲೆ ಹೊಲ್ಗೇರಿ ಇರುತ್ತಲ್ಲಾ ಹಾಗೆ..ʼ ಅಂತ ಹೇಳಿದ್ದರು. ಈ ಮಾತು ಕೆಲವು ಸಮುದಾಯದ ಜನರಿಗೆ ನೋವುಂಟು ಮಾಡಿತ್ತು. ಅಲ್ಲದೆ, ಆಕ್ರೋಶ ವ್ಯಕ್ತವಾಗಿತ್ತು.
ಜಾಣ ಕುರುಡರೇ ನಿಮ್ಮನ್ನು ನೀವು ನೋಡಿಕೊಳ್ಳಿ. ಈ ನಿಮ್ಮ ನೀತಿ ನಿಯತ್ತು, ಪರಾಕ್ರಮ ಚುನಾವಣೆಯಲ್ಲಿ ಮತ ಕೇಳಲು ಬರುವ ಭ್ರಷ್ಟ ನಾಯಕರ ಮುಂದೆ ತೋರಿಸಿ ಎಂದು ಸೌಂದರ್ಯ ಜಗದೀಶ್ ಪುತ್ರನ ವಿಚಾರವಾಗಿ ಹೇಳಿಕೆ ನೀಡಿದ್ದಕ್ಕೆ ಕೆಟ್ಟದಾಗಿ ಕಾಮೆಂಟ್ ಮಾಡಿದ ಜನಕ್ಕೆ ನಟ, ನಿರ್ದೇಶಕ ಉಪೇಂದ್ರ ಅವರು ಪ್ರತ್ಯುತ್ತರ ನೀಡಿದ್ದಾರೆ.
ಸದಾ ಒಂದಲ್ಲ ಒಂದು ವಿಶಿಷ್ಟತೆಯ ಮೂಲಕ ಅಭಿಮಾನಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ನಟ, ನಿರ್ದೇಶಕ ಉಪೇಂದ್ರ ಅವರು ಸಧ್ಯ ತಮ್ಮ ಫ್ಯಾನ್ಸ್ಗೆ ಛಾಲೆಂಜ್ ಒಂದನ್ನು ನೀಡಿದ್ದು, ಗೆದ್ರೆ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.