ಗುರುನಾನಕ್ ದೇವ್ 550 ನೇ ಜನ್ಮ ವಾರ್ಷಿಕೋತ್ಸವದ ಆಚರಣೆಗೆ ಮೀಸಲಾಗಿರುವ 'ಬ್ಯಾಡ್ಜ್ ಆಫ್ ಲೋಗೋ'ವನ್ನು ಪಂಜಾಬ್ ಸರ್ಕಾರ ಈ ಹಿಂದೆ ಸಿದ್ಧಪಡಿಸಿತ್ತು. ಬ್ಯಾಡ್ಜ್ ಅನ್ನು ಈಗ ಅನಾವರಣಗೊಳಿಸಲಾಗಿದ್ದು, ಬ್ಯಾಡ್ಜ್ಗಳನ್ನು ರಾಜ್ಯ ಸರ್ಕಾರ ಉಚಿತವಾಗಿ ವಿತರಿಸಲಿದೆ ಎಂದು ಸಚಿವ ಚರಣಜಿತ್ ಸಿಂಗ್ ಚನ್ನಿ ಮಾಹಿತಿ ನೀಡಿದರು.
ಬಿಎಸ್ಎಫ್ ಗುಂಡೇಟಿಗೆ ಬಲಿಯಾದ ವ್ಯಕ್ತಿಯ ಬಳಿ ಇದ್ದ ಬ್ಯಾಗ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಸಲ್ವಾರ್-ಕಮೀಜ್, 160 ರೂಪಾಯಿ ಪಾಕ್ ಕರೆನ್ಸಿ (50-50ರ ಮೂರು ನೋಟುಗಳು ಮತ್ತು 5-5 ರೂಪಾಯಿಗಳ ಎರಡು ನಾಣ್ಯಗಳು ಸೇರಿದಂತೆ), ಒಂದು ಪರ್ಸ್, ಸಿಮ್ ಕಾರ್ಡ್, ಮೆಮೊರಿ ಕಾರ್ಡ್, ಒಂದು ಲೈಟರ್ ಮತ್ತು 1 ಸಿಗರೇಟ್ ಪ್ಯಾಕೆಟ್ ಪತ್ತೆಯಾಗಿದೆ.
ಫಾಗ್ವಾರಾ ಕ್ಷೇತ್ರದ ಅಭ್ಯರ್ಥಿಯಾಗಿ ಬಲ್ವಿಂದರ್ ಧಲಿವಾಲ್, ಮುಕೇರಿಯನ್ ಕ್ಷೇತ್ರದ ಅಭ್ಯರ್ಥಿಯಾಗಿ ಇಂದೂ ಬಾಲ್, ದಾಖಾ ಕ್ಷೇತ್ರದಲ್ಲಿ ಸಂದೀಪ್ ಸಂಧು, ಜಲಾಲಾಬಾದ್ ಕ್ಷೇತ್ರದ ಅಭ್ಯರ್ಥಿಯಾಗಿ ರಮಿಂದರ್ ಆಮ್ಲಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.
ರಾಜ್ಯದ ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ನಷ್ಟವನ್ನು ಪರಿಹರಿಸಲು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ 1000 ಕೋಟಿ ರೂ. ವಿಶೇಷ ಪರಿಹಾರ ಪ್ಯಾಕೇಜ್ ಕೋರಿ ಪತ್ರ ಬರೆದಿದ್ದಾರೆ.
ಮಗ ಪ್ರತಿ ಎರಡು ತಿಂಗಳಿಗೊಮ್ಮೆ ದುಬಾರಿ ಕಾರನ್ನು ಬದಲಾಯಿಸುವ ಅಭ್ಯಾಸವನ್ನು ಹೊಂದಿದ್ದನು. ಪ್ರಸ್ತುತ ಆತನ ಬಳಿ ಬಿಎಂಡಬ್ಲ್ಯು ಕಾರು ಇತ್ತು. ಇದೀಗ ಅವನು ಜಾಗ್ವಾರ್ ಕಂಪನಿಯ ಕಾರಿನ ಮೇಲೆ ಕಣ್ಣಿಟ್ಟಿದ್ದನು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ಡಿಆರ್ಎಫ್) ತಂಡ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಸತತ 110 ಗಂಟೆಗಳ ಬಳಿಕ 150 ಅಡಿ ಆಳದ ಕೊಳವೆ ಬಾವಿಯಲ್ಲಿ ಜೂನ್ 6 ರಂದು ಬಿದ್ದಿದ್ದ ಎರಡು ವರ್ಷದ ಮಗು ಫತೇವಿರ್ ಸಿಂಗ್ ನನ್ನು ಜೀವಂತವಾಗಿ ರಕ್ಷಿಸಿತ್ತು.
ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಹರಿಂದರ್ ಸಿಂಗ್ ಖಾಲ್ಸಾ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಎಎಪಿ ಟಿಕೆಟ್ ಪಡೆದು ಪಂಜಾಬ್ ನ ಫತೇಘರ್ ಸಾಹಿಬ್ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿದ್ದರು.
ದಾಳಿಕೋರರ ಬಗ್ಗೆ ಮಾಹಿತಿ ಲಭ್ಯವಿದ್ದಲ್ಲಿ ಪೊಲೀಸ್ ಸಹಾಯವಾಣಿ 181ಗೆ ಕರೆ ಮಾಡಬಹುದು. ಅಷ್ಟೇ ಅಲ್ಲದೆ, ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದರೊಂದಿಗೆ ಅವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.