ಪ್ರತಿ 2 ತಿಂಗಳಿಗೊಮ್ಮೆ ದುಬಾರಿ ಕಾರು ಬದಲಿಸುತ್ತಿದ್ದ ಮಗನನ್ನು ತಡೆದ ತಂದೆ, ಆತ ಮಾಡಿದ್ದೇನು ಗೊತ್ತೇ?

ಮಗ ಪ್ರತಿ ಎರಡು ತಿಂಗಳಿಗೊಮ್ಮೆ ದುಬಾರಿ ಕಾರನ್ನು ಬದಲಾಯಿಸುವ ಅಭ್ಯಾಸವನ್ನು ಹೊಂದಿದ್ದನು. ಪ್ರಸ್ತುತ ಆತನ ಬಳಿ ಬಿಎಂಡಬ್ಲ್ಯು ಕಾರು ಇತ್ತು. ಇದೀಗ ಅವನು ಜಾಗ್ವಾರ್ ಕಂಪನಿಯ ಕಾರಿನ ಮೇಲೆ ಕಣ್ಣಿಟ್ಟಿದ್ದನು.

Last Updated : Aug 9, 2019, 03:49 PM IST
ಪ್ರತಿ 2 ತಿಂಗಳಿಗೊಮ್ಮೆ ದುಬಾರಿ ಕಾರು ಬದಲಿಸುತ್ತಿದ್ದ ಮಗನನ್ನು ತಡೆದ ತಂದೆ, ಆತ ಮಾಡಿದ್ದೇನು ಗೊತ್ತೇ? title=

ಯಮುನಾನಗರ್: ಪಂಜಾಬ್‌ನ ಯಮುನನಗರ ಜಿಲ್ಲೆಯಿಂದ ಬಹಳ ವಿಚಿತ್ರ ಪ್ರಕರಣ ಒಂದು ಹೊರಬಿದ್ದಿದೆ. ಈ ಘಟನೆಯಿಂದ ಸ್ವಲ್ಪ ಮೊಂಡುತನವು ಕೆಲವೊಮ್ಮೆ ಹೇಗೆ ಅಪಾಯಕಾರಿ ರೂಪವನ್ನು ಪಡೆಯುತ್ತದೆ ಎಂಬುದನ್ನು ನಾವಿಲ್ಲಿ ನೋಡಬಹುದು. 

ಮಾಹಿತಿಯ ಪ್ರಕಾರ,  ಪ್ರತಿ ಎರಡು ತಿಂಗಳಿಗೊಮ್ಮೆ ಮಗನು ದುಬಾರಿ ಕಾರನ್ನು ಬದಲಾಯಿಸುವ ಅಭ್ಯಾಸವನ್ನು ಹೊಂದಿದ್ದನು. ಪ್ರಸ್ತುತ ಆತನ ಬಳಿ ಬಿಎಂಡಬ್ಲ್ಯು ಕಾರು ಇತ್ತು. ಇದೀಗ ಆತ ಜಾಗ್ವಾರ್ ಕಾರನ್ನು ಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದನು. ಮಗನ ಇಚ್ಚೆಗೆ ತಂದೆ ವಿರೋಧ ವ್ಯಕ್ತ ಪಡಿಸಿದ್ದು, ಜಾಗ್ವಾರ್ ಕಾರನ್ನು ಕೊಳ್ಳುವುದನ್ನು ತಡೆದಿದ್ದಾರೆ. ಇದರಿಂದ ಮಗ ಅಸಮಾಧಾನಗೊಂಡದ್ದ  ಎಂದು ಹೇಳಲಾಗುತ್ತಿದೆ.

ತಂದೆ ಮೇಲಿನ ಕೋಪವನ್ನು ಈ ರೀತಿ ತೀರಿಸಿಕೊಂಡ ಮಗ:
ಸ್ವಭಾವತಃ ಎಲ್ಲದಕ್ಕೂ ಹಠ, ಮೊಂಡುತನ ಮಾಡುತ್ತಿದ್ದ ಮಗನಿಗೆ ಈ ಬಾರಿ ಜಾಗ್ವಾರ್ ಕಾರನ್ನು ತೆಗೆದುಕೊಳ್ಳಲು ತಂದೆ ಸುತಾರಾಂ ಒಪ್ಪಲೇ ಇಲ್ಲ. ಈ ವಿಷಯಕ್ಕೆ ಕೋಪಗೊಂಡಿದ್ದ ಮಗ ತನ್ನ ಬಿಎಂಡಬ್ಲ್ಯು ಕಾರಿನೊಂದಿಗೆ ದಾದೂಪುರ ಅಣೆಕಟ್ಟುಗೆ ಹಾರಿದ್ದಾನೆ. ಬಳಿಕ ಕಾರನ್ನು ಡ್ಯಾಂ ನಲ್ಲಿಯೇ ಬಿಟ್ಟು ಈಜಿ ದಡ ಸೇರಿದ್ದಾನೆ.

ಪ್ರಕರಣದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಯುವಕನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಸ್ಥಳೀಯ ಆಡಳಿತವು ಕಾರನ್ನು ಅಣೆಕಟ್ಟೆಯಿಂದ ಹೊರತೆಗೆಯಲು ಕಾರ್ಯಾಚರಣೆ ನಡೆಸುತ್ತಿದೆ.
 

Trending News