Virat Kohli: ಪಾಕ್ ವೇಗಿಯ ಶೂ ಲೇಸ್ ಕಟ್ಟಿದ ವಿರಾಟ್‌ ಕೊಹ್ಲಿ.. ಡೌನ್‌ ಟು ಅರ್ಥ ಅಂದ್ರೆ ಇದಲ್ವೇ ಎಂದ ಫ್ಯಾನ್ಸ್‌!

Virat Kohli Helping Naseem Shah : ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್‌ ಮೂಲಕ ಹೊಸ ದಾಖಲೆ ಬರೆದರು. 

Written by - Chetana Devarmani | Last Updated : Feb 24, 2025, 08:30 AM IST
  • ಚಾಂಪಿಯನ್ಸ್ ಟ್ರೋಫಿ 2025
  • ಭಾರತ vs ಪಾಕಿಸ್ತಾನ ಪಂದ್ಯ
  • ನಸೀಮ್ ಶಾಗೆ ಸಹಾಯ ಮಾಡಿದ ಕೊಹ್ಲಿ
Virat Kohli: ಪಾಕ್ ವೇಗಿಯ ಶೂ ಲೇಸ್ ಕಟ್ಟಿದ ವಿರಾಟ್‌ ಕೊಹ್ಲಿ.. ಡೌನ್‌ ಟು ಅರ್ಥ ಅಂದ್ರೆ ಇದಲ್ವೇ ಎಂದ ಫ್ಯಾನ್ಸ್‌! title=
Virat Kohli Helping Naseem Shah

Virat Kohli Helping Naseem Shah : ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್‌ ಮೂಲಕ ಹೊಸ ದಾಖಲೆ ಬರೆದರು. ಪಂದ್ಯದ ಗೆಲುವಿಗೆ ಕಾರಣರಾದ ಕೊಹ್ಲಿ ಫೀಲ್ಡಿಂಗ್‌ನಲ್ಲೂ ಹೊಸ ದಾಖಲೆ ಬರೆದರು. ಅಲ್ಲದೇ ಇದೇ ವೇಳೆ ತಮ್ಮ ಸ್ಪೋರ್ಟ್ಸ್‌ಮನ್‌ಶಿಪ್‌ ಕೂಡ ಬಿಟ್ಟುಕೊಡದೇ ಕೋಟ್ಯಾಂತರ ಅಭಿಮಾನಿಗಳು ಹೃದಯವನ್ನು ಮತ್ತೆ ಗೆದ್ದಿದ್ದಾರೆ.

ದೀರ್ಘಕಾಲದವರೆಗೆ ಫಾರ್ಮ್‌ನಿಂದ ಹೊರಗುಳಿದಿರುವ ಕೊಹ್ಲಿಯ ಈ ಇನ್ನಿಂಗ್ಸ್ ಟೂರ್ನಿಯಲ್ಲಿ ಅವರನ್ನು ಮಾನಸಿಕವಾಗಿ ಮತ್ತಷ್ಟು ಬಲಿಷ್ಠಗೊಳಿಸಲಿದೆ. ಇದು ಟೀಮ್ ಇಂಡಿಯಾಕ್ಕೂ ಒಳ್ಳೆಯ ಸುದ್ದಿ. ಕೊಹ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಪಾಕಿಸ್ತಾನ ತಂಡದ ಆಟಗಾರ ನಸೀಮ್ ಶಾ ಅವರ ಶೂ ಲೇಸ್‌ ಬಿಚ್ಚಿತ್ತು. 

ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಿಂಹಸ್ವಪ್ನವಾದ ಕಿಂಗ್‌ ಕೊಹ್ಲಿ..! 8 ವರ್ಷಗಳ ಸೇಡು ತೀರಿಸಿಕೊಂಡ ವಿರಾಟ್‌..

ನಸೀಮ್ ಶಾ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದಾಗ, ವಿರಾಟ್ ಕೊಹ್ಲಿಯಿಂದ ಸಹಾಯ ಕೇಳಿದರು. ತನ್ನ ಶೂ ಲೇಸ್‌ಗಳನ್ನು ಬಿಗಿಗೊಳಿಸಲು ಕೇಳಿದರು. ಪ್ಯಾಡ್‌ಗಳನ್ನು ಧರಿಸಿರುವುದರಿಂದ, ಬ್ಯಾಟ್ಸ್‌ಮನ್‌ಗೆ ತನ್ನ ಶೂಗಳನ್ನು ಮುಟ್ಟುವುದು ಕಷ್ಟವಾಗುತ್ತದೆ. ಆದ್ದರಿಂದ ನಸೀಮ್ ಶಾ ಸ್ವತಃ ಶೂ ಲೇಸ್‌ ಟೈಟ್‌ ಮಾಡಲು ಸಾಧ್ಯವಾಗಲಿಲ್ಲ. ಈ ವೇಳೆ ಕೊಹ್ಲಿ ಅವರಿಗೆ ಸಹಾಯ ಮಾಡಿದರು. ಇದರ ಫೋಟೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. 

ಇದಾದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಕ್ರಿಕೆಟ್ ಉತ್ಸಾಹವನ್ನು ತೋರಿಸಿದ್ದಕ್ಕಾಗಿ ಅಭಿಮಾನಿಗಳು ಕೊಹ್ಲಿಯನ್ನು ಶ್ಲಾಘಿಸಿದರು.

 

 

ಪಾಕಿಸ್ತಾನ ಟಾಸ್ ಗೆದ್ದಿರೂ ಅದರ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಇಡೀ ತಂಡ 241 ರನ್‌ಗಳಿಗೆ ಆಲೌಟ್ ಆಗಿತ್ತು. ಪಾಕಿಸ್ತಾನ ಪರ ಸೌದ್ ಶಕೀಲ್ ಅತಿ ಹೆಚ್ಚು 62 ರನ್ ಗಳಿಸಿದರು. ಮೊಹಮ್ಮದ್ ರಿಜ್ವಾನ್ 46 ರನ್‌ಗಳ ಇನ್ನಿಂಗ್ಸ್ ಆಡಿದರು. ಭಾರತದ ಪರ ಕುಲ್ದೀಪ್ ಯಾದವ್ ಗರಿಷ್ಠ 3 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ ಎರಡು ಪ್ರಮುಖ ವಿಕೆಟ್ ಪಡೆದರು. 

ಇದನ್ನೂ ಓದಿ: ICC Champions Trophy 2025: ಭರ್ಜರಿ ಶತಕದ ಮೂಲಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ಸೋಲುಣಿಸಿದ ವಿರಾಟ್‌ ಕೊಹ್ಲಿ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News