Summer Plants to keep house cool : ಫ್ಯಾನ್, ಕೂಲರ್, ಎಸಿ ಇಲ್ಲದೆ ಒಂದು ನಿಮಿಷ ಕೂರುವುದು ಕೂಡಾ ಸಾಧ್ಯವಾಗುವುದಿಲ್ಲ. ಆದರೆ ಇಡೀ ದಿನ ಫ್ಯಾನ್,ಕೂಲರ್, ಎಸಿ ಬಳಕೆ ಆರೋಗ್ಯಕ್ಕೂ ಒಳ್ಳೆಯದಲ್ಲ, ಆರ್ಥಿಕವಾಗಿಯೂ ಸಹಕಾರಿಯಲ್ಲ.
Summer Plants to keep house cool :ಈ ಬಾರಿ ಫೆಬ್ರವರಿಯಲ್ಲಿಯೇ ಬಿಸಿಲ ಝಳ ತಡೆಯುವುದಕ್ಕೆ ಆಗುತ್ತಿಲ್ಲ. ದಿನ ಕಳೆದಂತೆ ಬಿಸಿಲು ನೆತ್ತಿ ಸುಡುವುದಕ್ಕೆ ಆರಂಭಿಸುತ್ತದೆ. ಮನೆಯ ಹೊರಗೆ ಮಾತ್ರವಲ್ಲ ಒಳಗೂ ವಿಚಿತ್ರ ಯಾತನೆ ಶುರುವಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಈ ಬಾರಿ ಫೆಬ್ರವರಿಯಲ್ಲಿಯೇ ಬಿಸಿಲ ಝಳ ತಡೆಯುವುದಕ್ಕೆ ಆಗುತ್ತಿಲ್ಲ. ದಿನ ಕಳೆದಂತೆ ಬಿಸಿಲು ನೆತ್ತಿ ಸುಡುವುದಕ್ಕೆ ಆರಂಭಿಸುತ್ತದೆ. ಮನೆಯ ಹೊರಗೆ ಮಾತ್ರವಲ್ಲ ಒಳಗೂ ವಿಚಿತ್ರ ಯಾತನೆ ಶುರುವಾಗುತ್ತದೆ.
ಫ್ಯಾನ್, ಕೂಲರ್, ಎಸಿ ಇಲ್ಲದೆ ಒಂದು ನಿಮಿಷ ಕೂರುವುದು ಕೂಡಾ ಸಾಧ್ಯವಾಗುವುದಿಲ್ಲ. ಆದರೆ ಇಡೀ ದಿನ ಫ್ಯಾನ್,ಕೂಲರ್, ಎಸಿ ಬಳಕೆ ಆರೋಗ್ಯಕ್ಕೂ ಒಳ್ಳೆಯದಲ್ಲ, ಆರ್ಥಿಕವಾಗಿಯೂ ಸಹಕಾರಿಯಲ್ಲ.
ಇವೆಲ್ಲದರ ಬದಲಾಗಿ ಈ ಗಿಡವನ್ನು ಮನೆಯ ಹೊರಗೆ ಅಥವಾ ಒಳಗೆ ಇರಿಸಿದರೆ ಇಡೀ ಮನೆ ತಂಪಾಗಿರುತ್ತದೆ. ಈ ಗಿಡಗಳನ್ನು ನೆಟ್ಟರೆ ಇಡೀ ಮನೆಯಲ್ಲಿ ಶುದ್ಧ ಗಾಳಿ ಸಂಚರಿಸುತ್ತದೆ. ಈ ಮೂಲಕ ದಿನ ಪೂರ್ತಿ ಮನೆ ತಂಪಾಗಿದ್ದು, ಬಿಸಿಲ ಅನುಭವ ಇಲ್ಲದಾಗುತ್ತದೆ.
ಅಲೋವೆರಾ: ಸಾಮಾನ್ಯವಾಗಿ ತ್ವಚೆ, ಕೂದಲ ಅಂದವನ್ನು ಹೆಚ್ಚಿಸಲು ಅಲೋವೆರಾವನ್ನು ಬಳಸಲಾಗುತ್ತದೆ. ಇದು ಔಷಧೀಯ ಗುಣಗಳನ್ನು ಕೂಡಾ ಹೊಂದಿದೆ. ಆದರೆ ಅಲೋವೆರಾ ಗಿಡವನ್ನು ಮನೆಯೊಳಗೆ ಅಥವಾ ಹೊರಗೆ ನೆಟ್ಟರೆ, ಅದು ಗಾಳಿಯ ಉಷ್ಣತೆಯನ್ನು ಕಡಿಮೆ ಮಾಡುವ ಮೂಲಕ ತಂಪು ಗಾಳಿಯನ್ನು ನೀಡುತ್ತದೆ ಪಸರಿಸುತ್ತದೆ.
ಅರೆಕಾ ಪಾಮ್ ಟ್ರೀ: ಇದನ್ನು ಮನೆಯೊಳಗೇ ಸೌಂದರ್ಯಕ್ಕಾಗಿ ನೆಡಲಾಗುತ್ತದೆ. ಆದರೆ ಈ ಸಸ್ಯ ನೈಸರ್ಗಿಕ ಆರ್ದ್ರಕವಾಗಿ ಕಾರ್ಯನಿರ್ವಹಿಸುತ್ತದೆ, ಅಂದರೆ ಒಳಾಂಗಣ ಗಾಳಿಯನ್ನು ನೈಸರ್ಗಿಕವಾಗಿ ತೇವವಾಗಿಡಲು ಸಹಾಯ ಮಾಡುತ್ತದೆ.
ರಬ್ಬರ್ ಪ್ಲಾಂಟ್: ಇದು ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್ ಅನ್ನು ಸುಲಭವಾಗಿ ಹೀರಿಕೊಂಡು ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಶಾಖದ ಮಟ್ಟವನ್ನು ಕಡಿಮೆ ಮಾಡಿ ಸುತ್ತ ತಂಪು ಗಾಳಿ ಹರಡುವಂತೆ ಮಾಡುತ್ತದೆ.
ಸ್ನೇಕ್ ಪ್ಲಾಂಟ್: ಈ ಗಿಡ ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿಯೂ ಇರುತ್ತದೆ. ಇದನ್ನು ಮನೆಯ ಒಳಗೂ ಇಡಬಹುದು, ಹೊರಗೂ ಇಡಬಹುದು. ಈ ಗಿಡ ಇದೆ ಎಂದರೆ ಅದರ ಸುತ್ತ ಮುತ್ತಲಿನ ಪರಿಸರ ತಂಪಾಗಿರುತ್ತದೆ ಎಂದರ್ಥ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ