IND VS PAK LIVE Score : ಭಾರತ vs ಪಾಕಿಸ್ತಾನ ಪಂದ್ಯ ನೋಡಲು ಕ್ರಿಕೆಟ್ ಜಗತ್ತು ಕಾಯುತ್ತಿದೆ. ಇಂದು ಭಾರತ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ಪಾಕಿಸ್ತಾನ ಸಿದ್ಧವಾಗುತ್ತಿದ್ದಂತೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಮಾಜಿ ಮುಖ್ಯಸ್ಥ ಮತ್ತು ಕ್ರಿಕೆಟಿಗ ರಮೀಜ್ ರಾಜಾ ಪಂದ್ಯದ ಕುರಿತು ಭವಿಷ್ಯ ನುಡಿದಿದ್ದಾರೆ..
ಹೌದು.. ಭಾರತ ಈಗಾಗಲೇ ತಮ್ಮ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಜಯ ಸಾಧಿಸಿದೆ. ಸೋಲಿನಿಂದ ಹೊರಬರಲು ಪಾಕಿಸ್ತಾನ ಅವಣಿಸುತ್ತಿದೆ. ಪಾಕಿಸ್ತಾನವು ತಮ್ಮ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್ಗಳ ಸೋಲನ್ನು ಅನುಭವಿಸಿತು, ಇದು ಅವರನ್ನು ಇಂದು ಗೆಲ್ಲಲೇಬೇಕಾದ ಪರಿಸ್ಥಿತಿಗೆ ತಳ್ಳಿದೆ. ಆದರೂ, ಭಾರತದ ಬ್ಯಾಟಿಂಗ್ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ನಲ್ಲಿಲ್ಲ ಎಂದು ರಾಜಾ ಹೇಳಿದರು.
ಭಾರತದ ಬ್ಯಾಟಿಂಗ್ನ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಪ್ರಸ್ತುತ ಉತ್ತಮ ಫಾರ್ಮ್ನಲ್ಲಿಲ್ಲ. ಬಾಂಗ್ಲಾದೇಶದ ವಿರುದ್ಧ ಭಾರತವನ್ನು ಗೆಲುವಿನತ್ತ ಕೊಂಡೊಯ್ದ ಶುಭಮನ್ ಗಿಲ್ (Shubman Gill) ಬೇಗನೆ ಔಟಾದರೆ, ಪಾಕ್ಗೆ ಗೆಲ್ಲುವ ಅವಕಾಶ ಹೆಚ್ಚು ಅಂತ ರಾಜಾ ಭವಿಷ್ಯ ನುಡಿದಿದ್ದಾರೆ.
ಪಾಕಿಸ್ತಾನದ ಬೌಲಿಂಗ್ ದಾಳಿಗೆ ಹೊಸ ವಿಧಾನದದ ಅಗತ್ಯವಿದೆ. ಒತ್ತಡದಲ್ಲಿ ವೈವಿಧ್ಯತೆ ಮತ್ತು ನಿಯಂತ್ರಣದ ಕೊರತೆಯಿದೆ ಎಂದು ರಾಜಾ ಪಾಕ್ ವೇಗದ ಬೌಲರ್ಗಳನ್ನು ಟೀಕಿಸಿದರು. "ಯಾರ್ಕರ್ಗಳು, ಸ್ಪಿನ್ನರ್, ಬೌನ್ಸರ್ಗಳು ನಡುವೆ ವ್ಯತ್ಯಾಸ ಎಲ್ಲಿವೆ..? ಸ್ಪಿನ್ನರ್ಗಳು ತುಂಬಾ ವೇಗವಾಗಿ ಮತ್ತು ರಕ್ಷಣಾತ್ಮಕವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅದು ಬದಲಾಗಬೇಕಾಗಿದೆ" ಎಂದು ಎಚ್ಚರಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.