Viral Video: ಇತ್ತೀಚೆಗೆ, ಅನೇಕ ಸೆಲೆಬ್ರಿಟಿಗಳು ಮಾಡುವ ಕೆಲವು ಕೆಲಸಗಳು ಇಂಟರ್ನೆಟ್ ಅನ್ನು ಬೆಚ್ಚಿಬೀಳಿಸುತ್ತಿವೆ. ಆ ನಿಟ್ಟಿನಲ್ಲಿ ಇತ್ತೀಚೆಗೆ ವಿವಾದಕ್ಕೆ ಸಿಲುಕಿದವರು ಖ್ಯಾತ ಗಾಯಕ ಉದಿತ್ ನಾರಾಯಣ್.
ಉದಿತ್ ನಾರಾಯಣ್ ಭಾರತದ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. 90 ರ ದಶಕದಲ್ಲಿ ತಮ್ಮ ಧ್ವನಿಯಲ್ಲಿ ಅನೇಕ ಹಾಡುಗಳನ್ನು ಹಾಡಿ ಅಭಿಮಾನಿಗಳ ಮನ ಕದ್ದವರು. ಮಾತೃ ಭಾಷೆ ಹಿಂದಿಯಾಗಿದ್ದರೂ ಕೂಡ ಬಹುಭಾಷೆಗಳಲ್ಲಿ ಹಾಡುಗಳನ್ನು ಹಾಡಿ ಸೈ ಎನಿಸಿಕೊಂಡವರು.
ಅನೇಕ ಗಾಯಕರು ಸಾಮಾನ್ಯವಾಗಿ ಸಮಯ ಸಿಕ್ಕಾಗ ಸೈಡ್ ಶೋಗಳನ್ನು ಮಾಡುತ್ತಾರೆ. ಅದೇ ರೀತಿ, ಉದಿತ್ ನಾರಾಯಣ್ ಅವರು ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಮತ್ತು ಭಾರತದ ವಿವಿಧ ರಾಜ್ಯಗಳಲ್ಲಿ ಸಂಗೀತ ಕಚೇರಿಗಳನ್ನು ಸಹ ನಡೆಸುತ್ತಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಅವರು ಅಭಿಮಾನಿಯೊಂದಿಗೆ ಮಾಡಿದ ಕೆಲಸ ಆಘಾತವನ್ನುಂಟು ಮಾಡಿದೆ.
ಉದಿತ್ ನಾರಾಯಣ್ ವೇದಿಕೆಯಲ್ಲಿ ಡಿಪ್ ಪರ್ಸಾ ಪಾನಿ ಎಂಬ ಹಾಡನ್ನು ಹಾಡುತ್ತಿದ್ದರು. ಸಾಮಾನ್ಯವಾಗಿ ಸೆಲೆಬ್ರಿಟಿ ವೇದಿಕೆ ಮೇಲೆ ಇದ್ದರೆ, ಕೆಳಗೆ ನಿಂತ ಅಭಿಮಾನಿಗಳು ಅವರ ಬಳಿ ಸೆಲ್ಫಿ ಕೇಳುವುದು ಸಾಮಾನ್ಯ, ಅದೇ ರೀತಿ ಉದಿತ್ ಅವರ ಬಳಿಗೂ ಕೂಡ ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದರು. ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಅಭಿಮಾನಿ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ.
ಇದನ್ನು ನಿರೀಕ್ಷಿಸದ ಉದಿತ್ ಅಭಿಮಾನಿ ಶಾಕ್ ಆಗುತ್ತಿದ್ದಂತೆ, ಉದಿತ್ ಅಭಿಮಾನಿ ಮಹಿಳೆಯ ತುಟಿಗೆ ಮುತ್ತಿಟ್ಟಿದ್ದಾರೆ. ಇದನ್ನು ಕಂಡು ಅಲ್ಲಿದ್ದ ಅಭಿಮಾನಿಗಳು ಕೇಕೆ ಹಾಕಿ ಸಂಭ್ರಮಿಸಿದ್ದಾರೆ. ಇನ್ನೂ, ಉದಿತ್ ಅವರ ಈ ನಡೆಗೆ ಮರು ಮಾತನಾಡದೆ ಅಭಿಮಾನಿ ಮಹಿಳೆ ನಗುತ್ತಾ ಹೋಗಿದ್ದಾಳೆ. ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದಷ್ಟೆ ಅಲ್ಲದೆ ಭಾರಿ ಚರ್ಚೆಯನ್ನುಂಟು ಮಾಡುತ್ತಿದೆ, ವಿಡಿಯೋ ನೋಡಿದ ಕೆಲವು ನೆಟ್ಟಿಗರು ಗಾಯಕನ ನಡೆಗೆ ಅಕ್ರೋಶ ಹೊರಹಾಕಿದ್ದಾರೆ.
In the viral video of #UditNarayan, the woman kissed first and didn't ask for consent, then Udit kissed her. As @RationalMale says they change rules for alpha men. Here alpha means the rich and famous. pic.twitter.com/kdmuXk7AQi
— @Author_ Jyoti (@jyotiTpandey05) February 1, 2025
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.