ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಒಂಬತ್ತನೇ ಆವೃತ್ತಿಯು ಫೆಬ್ರವರಿ 19, 2025 ರಂದು ಆರಂಭವಾಗಲಿದೆ.ಈ ಪಂದ್ಯಾವಳಿಯನ್ನು ಪಾಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಜಂಟಿಯಾಗಿ ಆಯೋಜಿಸಲಿವೆ.ಈ ವರ್ಷದ ಸ್ಪರ್ಧೆಯ ನೆಚ್ಚಿನ ತಂಡಗಳಲ್ಲಿ ಟೀಮ್ ಇಂಡಿಯಾ ಕೂಡ ಒಂದು.ಈಗ ನಾವು ಟೂರ್ನಿಯೊಂದರಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಬಗ್ಗೆ ತಿಳಿಯೋಣ ಬನ್ನಿ.
ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು:
ಶಿಖರ್ ಧವನ್ ಪ್ರಸ್ತುತ ಈ ಗಣ್ಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಮಾಜಿ ಆರಂಭಿಕ ಆಟಗಾರ ಎರಡು ಚಾಂಪಿಯನ್ಸ್ ಟ್ರೋಫಿಗಳಲ್ಲಿ (2013 ಮತ್ತು 2017) ಆಡಿದ 10 ಪಂದ್ಯಗಳಲ್ಲಿ 701 ರನ್ ಗಳಿಸಿದ್ದಾರೆ. ಅವರು ಎರಡೂ ಐಸಿಸಿ ಟೂರ್ನಿ ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಭಾರತ 2013 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು ಮತ್ತು 2017 ರಲ್ಲಿ ಫೈನಲ್‌ಗೆ ಎಂಟ್ರಿ ನೀಡಿತ್ತು.
ಇದನ್ನೂ ಓದಿ- Railway New Rules: ರೈಲ್ವೆ ಕೌಂಟರ್ ಟಿಕೆಟ್ ಸಂಬಂಧಿಸಿದಂತೆ ಮಹತ್ವದ ಆದೇಶ, ನಿಮಿಷಗಳಲ್ಲೇ ಹಣ ರಿಟರ್ನ್
ಶಿಖರ್ ಧವನ್ - 701.
ಸೌರವ್ ಗಂಗೂಲಿ -665
ರಾಹುಲ್ ದ್ರಾವಿಡ್ -627
ವಿರಾಟ್ ಕೊಹ್ಲಿ -529
ರೋಹಿತ್ ಶರ್ಮಾ -481
ಸಚಿನ್ ತೆಂಡೂಲ್ಕರ್ -441
ವೀರೇಂದ್ರ ಸೆಹ್ವಾಗ್ -389
ಯುವರಾಜ್ ಸಿಂಗ್ -376
ಟೀಮ್ ಇಂಡಿಯಾ ಇದುವರೆಗೆ ಎರಡು ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟವನ್ನು ಹೊಂದಿದೆ. ಮೊದಲ ಬಾರಿಗೆ 2002 ರಲ್ಲಿ ಶ್ರೀಲಂಕಾ ತಂಡದ ಜೊತೆ ಜಂಟಿ ವಿಜೇತರಾಗಿದ್ದರೆ, ಇನ್ನೂ ಎರಡನೇ ಬಾರಿಗೆ 2013 ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.