ಚೆನ್ನೈ: ಎರಡನೇ ಟೆಸ್ಟ್ ಪಂದ್ಯ 482 ರನ್ಗಳ ಕಠಿಣ ಗುರಿ ಪಡೆದಿರುವ ಪ್ರವಾಸಿ ಇಂಗ್ಲೆಂಡ್ ತಂಡ ಮೂರನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು ಕೇವಲ 53 ರನ್ ಗಳಿಸಿದ್ದು, ಸೋಲಿನ ಭೀತಿಗೆ ಸಿಲುಕಿದೆ. ಇನ್ನೆರಡು ದಿನದಲ್ಲಿ ಇಂಗ್ಲೆಂಡ್ ಗೆಲ್ಲಲು ಬರೋಬ್ಬರಿ 429 ರನ್ ಗಳಿಸಬೇಕಿದೆ. ಇನ್ನು ವಿರಾಟ್ ಕೊಹ್ಲಿ ಪಡೆ 7 ವಿಕೆಟ್ ಕಬಳಿಸಿದರೆ ಎರಡನೇ ಟೆಸ್ಟ್ ಭಾರತದ ಪಾಲಾಗಲಿದೆ.
ಮೂರನೇ ದಿನದಾಟದಲ್ಲಿ ಲೋಕಲ್ ಬಾಯ್ ರವಿಚಂದ್ರನ್ ಅಶ್ವಿನ್ ಬಾರಿಸಿದ ವೃತ್ತಿಜೀವನದ 5ನೇ ಶತಕದ ನೆರವಿನಿಂದ ಭಾರತ ತಂಡ(Team India) ಎರಡನೇ ಇನಿಂಗ್ಸ್ನಲ್ಲಿ 286 ರನ್ ಬಾರಿಸಿ ಸರ್ವಪತನ ಕಂಡಿತು. ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾ ನಾಟಕೀಯ ಕುಸಿತ ಕಂಡರೂ ನಾಯಕ ವಿರಾಟ್ ಕೊಹ್ಲಿ ಹಾಗೂ ಅಶ್ವಿನ್ 7ನೇ ವಿಕೆಟ್ಗೆ 96 ರನ್ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.
India have bowled well to leave England stuttering on 53/3 at the end of day three.
They need seven wickets, while England need 429 more to win!#INDvENG ➡️ https://t.co/DSmqrU68EB pic.twitter.com/s7km9iiGUm
— ICC (@ICC) February 15, 2021
IPL 2021 ಹರಾಜಿನಲ್ಲಿ ಕರ್ನಾಟಕದ 14 ಜನ ಆಟಗಾರರು..!
ಕೊಹ್ಲಿ 149 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 62 ರನ್ ಬಾರಿಸಿ ಮೋಯಿನ್ ಅಲಿಗೆ ಎರಡನೇ ಬಲಿಯಾದರು. ಆ ಬಳಿಕ ಸ್ಫೋಟಕ ಬ್ಯಾಟಿಂಗ್ ನಡೆಸಿದ ರವಿಚಂದ್ರನ್ ಅಶ್ವಿನ್(Ravichandran Ashwin) ತವರಿನ ಪಿಚ್ನ ಲಾಭ ಪಡೆದು ಆಕರ್ಷಕ ಶತಕ ಬಾರಿಸುವ ಮೂಲಕ ತಂಡ ಬೃಹತ್ ಮೊತ್ತ ಕಲೆ ಹಾಕಲು ನೆರವಾದರು. ಅಶ್ವಿನ್ ಕೇವಲ 148 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 106 ರನ್ ಬಾರಿಸಿ ಓಲಿ ಸ್ಟೋನ್ಗೆ ವಿಕೆಟ್ ಒಪ್ಪಿಸಿದರು.
India vs England: 2nd Test ಪಂದ್ಯದಿಂದ ಹೊರಗುಳಿದ ವೇಗದ ಬೌಲರ್, ಇಂಗ್ಲೆಂಡ್ಗೆ ದೊಡ್ಡ ಆಘಾತ
ಇನ್ನು ಕಠಿಣ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ತಂಡ ಎಚ್ಚರಿಕೆಯ ಆಟಕ್ಕೆ ಮೊರೆಹೋಯಿತು. ಡೋಮಿನಿಕ್ ಸಿಬ್ಲಿ ಕೇವಲ 3 ರನ್(Run) ಬಾರಿಸಿ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಮತ್ತೋರ್ವ ಅರಂಭಿಕ ಬ್ಯಾಟ್ಸ್ಮನ್ ರೋರಿ ಬರ್ನ್ಸ್(25) ನೆಲಕಚ್ಚಿ ಆಡುವ ಪ್ರಯತ್ನ ಮಾಡಿದರಾದರೂ ಬರ್ನ್ಸ್ಗೆ ಅಶ್ವಿನ್ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ನೈಟ್ ವಾಚ್ಮನ್ ಜಾಕ್ ಲೀಚ್ ಶೂನ್ಯ ಸುತ್ತಿ ಅಕ್ಷರ್ ಪಟೇಲ್ಗೆ ಎರಡನೇ ಬಲಿಯಾದರು. ಸದ್ಯ ಡೇನಿಯಲ್ ಲಾರೆನ್ಸ್(19) ಹಾಗೂ ಜೋ ರೂಟ್(2) ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಅಜಿಂಕ್ಯಾ ರಹಾನೆ ಬ್ಯಾಟಿಂಗ್ ಫಾರ್ಮ್ ಬಗ್ಗೆ ಪ್ರಶ್ನೆ ಎತ್ತಿದ ಸಂಜಯ್ ಮಂಜ್ರೇಕರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.