Himanshu Sangwan: ವಿರಾಟ್ ಕೊಹ್ಲಿ... ಇತ್ತೀಚಿನ ದಿನಗಳಲ್ಲಿ ದೆಹಲಿಯ ಮೂಲೆ ಮೂಲೆಯಲ್ಲೂ ಪ್ರತಿಧ್ವನಿಸುತ್ತಿರುವ ಹೆಸರು. ರಣಜಿ ಆಡಲೆಂದು ಬಂದಿದ್ದ ವಿರಾಟ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಆದರೆ ಇದರ ಹೊರತಾಗಿ ಮತ್ತೊಬ್ಬ ಆಟಗಾರ ಟಾಕ್ ಆಫ್ ದಿ ಟೌನ್ ಆಗಿದ್ದಾನೆ. ಅದಕ್ಕೆ ಕಾರಣ ಆತ ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿರುವುದು.
ಆ ಆಟಗಾರ ಬೇರಾರು ಅಲ್ಲ ಹಿಮಾಂಶು ಸಂಗ್ವಾನ್. ವಿರಾಟ್ ಕೊಹ್ಲಿ ವಿಕೆಟ್ ಕಬಳಿಸುವ ಮೂಲಕ ಸುದ್ದಿಯಾಗಿದ್ದ ಹಿಮಾಂಶು ನಡೆದುಬಂದ ಹಾದಿಯನ್ನು ಮುಂದೆ ತಿಳಿಯೋಣ.
ಇದನ್ನೂ ಓದಿ: ಅಡುಗೆ ಮನೆಯಲ್ಲಿರುವ ಈ 2 ವಸ್ತುಗಳನ್ನು ಬಳಸಿ ಹಳೆಯ ಕೂಲರ್ ಅನ್ನು 'ಎಸಿ' ಆಗಿ ಪರಿವರ್ತಿಸಿ..! ಇಲ್ಲಿದೆ ಸಿಂಪಲ್ ಟ್ರಿಕ್
ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಂಗ್ವಾನ್, "ರಣಜಿ ಟ್ರೋಫಿ ಪಂದ್ಯದಲ್ಲಿದ್ದ ಜನಸಂದಣಿ ನೋಡಿ ಅಚ್ಚರಿಯಾಗಿತ್ತು. ಏಕೆಂದರೆ ಇದುವರೆಗೆ ನಾನು ಇಷ್ಟು ಜನರಿದ್ದ ಪಂದ್ಯ ನೋಡಿರಲಿಲ್ಲ. ಇದಕ್ಕೆಲ್ಲಾ ಕಾರಣ ವಿರಾಟ್" ಎಂದಿದ್ದಾರೆ.
"ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದು ನನಗೆ ದೊಡ್ಡ ವಿಷಯವಾಗಿತ್ತು. ನಾನು ಅದರ ಬಗ್ಗೆ ಮಾತನಾಡಬಲ್ಲೆ, ಆದರೆ ಈ ಭಾವನೆ ಪದಗಳಿಗೆ ಮೀರಿದ್ದು... ನಾನು ಅದನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ನನ್ನ ಆಕ್ರಮಣಶೀಲತೆ ಸಹಜವಾಗಿತ್ತು, ಒಬ್ಬ ಬೌಲರ್, ವಿಶೇಷವಾಗಿ ವೇಗದ ಬೌಲರ್, ಬ್ಯಾಟ್ಸ್ಮನ್ ಎಂದಿಗೂ ಬೌಂಡರಿ ಅಥವಾ ಸಿಕ್ಸ್ ಹೊಡೆಯುವುದನ್ನು ಇಷ್ಟಪಡುವುದಿಲ್ಲ. ಅವರು ಅದ್ಭುತವಾದ ಸ್ಟ್ರೈಟ್ ಡ್ರೈವ್ ಆಡಿದರು. ಒಬ್ಬ ಬೌಲರ್ ಆಗಿ ನನಗೆ ನಿರಾಶೆಯಾಯಿತು. ಮುಂದಿನ ಎಸೆತದಲ್ಲಿ ನಾನು ಹೆಚ್ಚು ಶ್ರಮವಹಿಸಿ ಆಡಿದೆ ಮತ್ತು ಅದು ಫಲ ನೀಡಿತು" ಎಂದಿದ್ದಾರೆ.
ಹಿಮಾಂಶು ಸಂಗ್ವಾನ್ ನಡೆದು ಬಂದ ಕಣ್ಣೀರಿನ ಹಾದಿ...
ಹಿಮಾಂಶು ಸಂಗ್ವಾನ್ 16 ವರ್ಷಗಳ ಹಿಂದೆ ತನ್ನ ಕುಟುಂಬವನ್ನು ತೊರೆದು ಜೈಪುರದಿಂದ ಏಕಾಂಗಿಯಾಗಿ ದೆಹಲಿಗೆ ಬಂದರು. ಇಲ್ಲಿನ ನಜಾಫ್ಗಢ ಪ್ರದೇಶದಲ್ಲಿ ಉಳಿದುಕೊಳ್ಳಲೆಂದು ಸಿಕ್ಕಸಿಕ್ಕ ಮನೆ ಬಾಗಿಲನ್ನು ತಟ್ಟಿದ್ದರಂತೆ. ಕೊನೆಗೂ ಉಳಿದುಕೊಳ್ಳಲು ಒಂದು ನೆಲೆ ಸಿಕ್ಕಿತ್ತು. ಆ ಬಳಿಕ ನವದೆಹಲಿ ರೈಲು ನಿಲ್ದಾಣದಲ್ಲಿ ಹಿರಿಯ ಟಿಕೆಟ್ ಕಲೆಕ್ಟರ್ (ಟಿಟಿಇ) ಆಗಿ ದುಡಿಯುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, "ನನ್ನ ಕುಟುಂಬ ಜೈಪುರದಲ್ಲಿ ವಾಸಿಸುತ್ತಿದೆ. ಆದರೆ ನಾನು ಕಳೆದ 15 ವರ್ಷಗಳಿಂದ ನಜಾಫ್ಗಢದಲ್ಲಿದ್ದೇನೆ. ಆರಂಭದಲ್ಲಿ ಬಾಡಿಗೆ ಮನೆ ಹುಡುಕುತ್ತಾ ಇಲ್ಲಿಗೆ ಬಂದೆ, ಆದರೆ ನಾನು ಉಳಿದುಕೊಂಡ ಕುಟುಂಬವು ನನ್ನನ್ನು ಮನೆಮಗನಂತೆ ನೋಡಿಕೊಂಡರು. ಮಧ್ಯರಾತ್ರಿಯಲ್ಲಿ ಹಸಿವಾದರೂ ಸಹ ನನಗೆ ತಿನ್ನಲು ಕೊಡುತ್ತಿದ್ದರು. ನಾನು ಎಂದಿಗೂ ಅವರಿಗೆ ಕೃತಜ್ಞರಾಗಿರುತ್ತೇನೆ" ಎಂದಿದ್ದಾರೆ.
ಇದನ್ನೂ ಓದಿ: ಸೋನು ನಿಗಮ್ ಆಸ್ಪತ್ರೆಗೆ ದಾಖಲು, ಲೈವ್ ಕಾನ್ಸರ್ಟ್ನಲ್ಲೇ ಅಸ್ವಸ್ಥರಾದ ಖ್ಯಾತ ಗಾಯಕ !!
ಆಟೋಗ್ರಾಫ್ ನೀಡಿದ ವಿರಾಟ್:"ಪಂದ್ಯದ ನಂತರ ವಿರಾಟ್ ಸ್ವತಃ ನಮ್ಮ ಡ್ರೆಸ್ಸಿಂಗ್ ಕೋಣೆಗೆ ಬಂದು ನನ್ನನ್ನು ತಬ್ಬಿಕೊಂಡು... ನೀವು ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದ್ದೀರಿ ಎಂದು ಹೇಳಿದರು. ವಿರಾಟ್ ಅವರನ್ನು ಅಲ್ಲಿ ನೋಡಿ ನಮಗೆಲ್ಲರಿಗೂ ಆಶ್ಚರ್ಯವಾಯಿತು. ಅವರನ್ನು ನಾನು ಔಟ್ ಮಾಡಿರಬಹುದು ಆದ್ರೆ ಅವರೇ ನನಗೆ ಸ್ಪೂರ್ತಿ. ಇನ್ನು ಅವರನ್ನು ಔಟ್ ಮಾಡಿದ ಬಾಲ್ ಮೇಲೆಯೇ ವಿರಾಟ್ ಆಟೋಗ್ರಾಫ್ ಬರೆಸಿಕೊಂಡೆ. ಆ ಕ್ಷಣ ಅವಿಸ್ಮರಣೀಯ" ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ