ಕೊನೆಗೂ ಗುಡ್‌ನ್ಯೂಸ್‌ ಕೊಟ್ಟ ಸಾನಿಯಾ ಮಿರ್ಜಾ! ಮೊಹಮ್ಮದ್‌ ಶಮಿ ಜೊತೆ ಮದುವೆಗೆ ಒಪ್ಪಿಕೊಂಡೇ ಬಿಟ್ರಾ ಮೂಗುತಿ ಸುಂದರಿ?!

Sania Mirza-mohammed shami: ಪಾಕಿಸ್ತಾನಿ ಆಟಗಾರ ಶೊಯೆಬ್‌ ಮಲ್ಲಿಕ್‌ ಜೊತೆಗಿನ ವಿಚ್ಛೇದನದ ನಂತರ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ.. ಇತ್ತೀಚೆಗೆ ಇವರು ಮೊಹಮ್ಮದ್‌ ಶಮಿ ಜೊತೆ ಎರಡನೇ ಮದುವೆಯಾಗಲಿದ್ದಾರೆ ಎನ್ನುವ ವದಂತಿ ಹಬ್ಬಿತ್ತು.. 

Written by - Savita M B | Last Updated : Jan 23, 2025, 08:57 AM IST
  • ಸಾನಿಯಾ ಮಿರ್ಜಾಗೆ ಸಾರ್ವಕಾಲಿಕ ಅಭಿಮಾನಿಗಳಿಂದ ಬೆಂಬಲ ಸಿಗುತ್ತದೆ
  • ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರನ್ನು ನೋಡಿದ ಅಭಿಮಾನಿಗಳ ಸಂತಸಕ್ಕೆ ಮಿತಿಯೇ ಇಲ್ಲ.
ಕೊನೆಗೂ ಗುಡ್‌ನ್ಯೂಸ್‌ ಕೊಟ್ಟ ಸಾನಿಯಾ ಮಿರ್ಜಾ! ಮೊಹಮ್ಮದ್‌ ಶಮಿ ಜೊತೆ ಮದುವೆಗೆ ಒಪ್ಪಿಕೊಂಡೇ ಬಿಟ್ರಾ ಮೂಗುತಿ ಸುಂದರಿ?! title=

Sania Mirza: ಸಾನಿಯಾ ಮಿರ್ಜಾ ಪ್ರಸ್ತುತ ತಮ್ಮ ಕೆಲಸದಲ್ಲಿ ನಿರತರಾಗಿದ್ದು, ಆಸ್ಟ್ರೇಲಿಯನ್ ಓಪನ್ ಸಮಯದಲ್ಲಿ ಸೋನಿ ಸ್ಪೋರ್ಟ್ಸ್ ಜೊತೆ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಶೋಯೆಬ್ ಮಲಿಕ್ ಜೊತೆಗಿನ ವಿಚ್ಛೇದನದ ನಂತರ, ಸಾನಿಯಾ ಮಿರ್ಜಾ ಸಾಕಷ್ಟು ಕಷ್ಟಗಳನ್ನು ಅನುಭವಿಸಿದರು ಮತ್ತು ಒತ್ತಡದಿಂದ ಹೊರಬರುವಲ್ಲಿ ಯಶಸ್ವಿಯಾದರು.

 ಸಾನಿಯಾ ಮಿರ್ಜಾಗೆ ಸಾರ್ವಕಾಲಿಕ ಅಭಿಮಾನಿಗಳಿಂದ ಬೆಂಬಲ ಸಿಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರನ್ನು ನೋಡಿದ ಅಭಿಮಾನಿಗಳ ಸಂತಸಕ್ಕೆ ಮಿತಿಯೇ ಇಲ್ಲ. ಶೋಯೆಬ್ ಮಲಿಕ್ ಮತ್ತೊಮ್ಮೆ ಮದುವೆಯಾದರು ಆದರೆ ಸಾನಿಯಾ ಹಾಗೆ ಮಾಡಲಿಲ್ಲ. ಅವರು ತಮ್ಮ ಮಗನೊಂದಿಗೆ ಒಂಟಿಯಾಗಿ ದುಬೈನಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ-ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿ ಸಾಹಸ ಮೆರೆದ ಆಟೋ ರಿಕ್ಷಾ ಚಾಲಕನಿಗೆ ಸೈಫ್‌ ಅಲಿ ಖಾನ್‌ ಕೊಟ್ಟ ಉಡುಗೊರೆ ಏನು ಗೊತ್ತಾ?

ಕೆಲವು ದಿನಗಳ ಹಿಂದೆ, ಶಮಿ ಮತ್ತು ಸಾನಿಯಾ ಅವರ AI ಫೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹರಿಬಿಟ್ಟು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.. ಆದರೆ, ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುಳ್ಳು ಸುದ್ದಿಗಳು ಮತ್ತು ಫೋಟೋಗಳು ವೈರಲ್ ಆಗುತ್ತಿರುವುದು ಸ್ಪಷ್ಟವಾಗಿದೆ. 

ಇನ್ನು ಇತ್ತೀಚೆಗೆ ಆಸ್ಟ್ರೇಲಿಯನ್ ಓಪನ್ ವೇಳೆ ಸೋನಿ ಸ್ಪೋರ್ಟ್ಸ್ ಜೊತೆ ಕೆಲಸ ಮಾಡುತ್ತಿದ್ದ ಸಾನಿಯಾ ತಮ್ಮ ಇನ್‌ಸ್ಟಾಗ್ರಂನಲ್ಲಿ ಸುಂದರವಾದ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಅದರಲ್ಲಿ ಒಬ್ಬ ಫ್ಯಾನ್ ಸಾನಿಯಾಗೆ ಮದುವೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ-ಕೊನೆಗೂ ರಾಮ್‌ ಗೋಪಾಲ ವರ್ಮಾ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದ ನಟಿ ಊರ್ಮಿಳಾ ಮಾತೋಂಡ್ಕರ್!

ಫೋಟೋ ತುಂಬಾ ಚೆನ್ನಾಗಿದೆ ಎಂದು ಹಲವರು ಬಣ್ಣಿಸಿದ್ದು, ಶೋಯೆಬ್ ಮಲಿಕ್ ಅವರು ಸಾನಿಯಾ ಅವರಂತಹ ಸುಂದರ ಪತ್ನಿಗೆ ಮೋಸ ಮಾಡಿದ್ದು ಅತ್ಯಂತ ದುರದೃಷ್ಟಕರ ಎಂದಿದ್ದಾರೆ. ಜೊತೆಗೆ ಮೊಹಮ್ಮದ್ ಶಮಿ ಅವರನ್ನು ಮದುವೆಯಾಗಿ ಚೆನ್ನಾಗಿರುತ್ತೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಸದ್ಯ ಈ ಕಾಮೆಂಟ್‌ ಸಖತ್‌ ವೈರಲ್‌ ಆಗಿದ್ದು, ಮತ್ತೊಮ್ಮೆ ಶಮಿ ಹಾಗೂ ಸಾನಿಯಾ ಅವರ ಮದುವೆ ಮಾತುಕತೆಗಳು ಚರ್ಚೆಯಲ್ಲಿವೆ..  

ಸದ್ಯ ಸಾನಿಯಾ ತನ್ನ ಮಗನೊಂದಿಗೆ ದುಬೈನಲ್ಲಿ ವಾಸಿಸುತ್ತಿದ್ದು, ಆಗಾಗ್ಗೆ ತನ್ನ ಮಗ ಮತ್ತು ಸ್ನೇಹಿತರೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಾರೆ. ಸಾನಿಯಾ ಮಿರ್ಜಾ ಅವರ ಟೆನಿಸ್ ಅಕಾಡೆಮಿ ಕೂಡ ದುಬೈನಲ್ಲಿ ನಡೆಯುತ್ತಿದೆ. ಹೀಗಾಗಿ ಅವರು ತಮ್ಮ ಜೀವನದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ.. ಮದುವೆಯಾಗುವ ಬಗ್ಗೆ ಸಾನಿಯಾ ಅಥವಾ ಅವರ ಕುಟುಂಬದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News