ಮಹಾಕುಂಭದಲ್ಲಿ ಭಾಗವಹಿಸಿ ಗಂಗೆಯಲ್ಲಿ ಮಿಂದೆದ್ದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ..!! ಫೋಟೋ ವೈರಲ್ 

ಈ ಫೋಟೋಗಳು ನಿಜವಾದ ಫೋಟೋಗಳಲ್ಲ, ಇವುಗಳನ್ನು AI ಮೂಲಕ ರಚಿಸಲಾಗಿದೆ.ಈ ಫೋಟೋ ಗಳಲ್ಲಿ ವಿರಾಟ್ ಮತ್ತು ಅನುಷ್ಕಾ ಮಹಾಕುಂಭವನ್ನು ತಲುಪಿರುವುದು ಕಂಡುಬರುತ್ತದೆ. ಇಬ್ಬರೂ ಸಾಂಪ್ರದಾಯಿಕ ಕೇಸರಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.

Written by - Manjunath N | Last Updated : Jan 23, 2025, 04:22 PM IST
  • ಆದರೆ ಈ ಫೋಟೋಗಳು ನಿಜವಾದ ಫೋಟೋಗಳಲ್ಲ, ಇವುಗಳನ್ನು AI ಮೂಲಕ ರಚಿಸಲಾಗಿದೆ.
  • ಈ ಫೋಟೋ ಗಳಲ್ಲಿ ವಿರಾಟ್ ಮತ್ತು ಅನುಷ್ಕಾ ಮಹಾಕುಂಭವನ್ನು ತಲುಪಿರುವುದು ಕಂಡುಬರುತ್ತದೆ.
  • ಇಬ್ಬರೂ ಸಾಂಪ್ರದಾಯಿಕ ಕೇಸರಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.
ಮಹಾಕುಂಭದಲ್ಲಿ ಭಾಗವಹಿಸಿ ಗಂಗೆಯಲ್ಲಿ ಮಿಂದೆದ್ದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ..!! ಫೋಟೋ ವೈರಲ್  title=
file photo

ಪ್ರಯಾಗರಾಜ್ :ಮಹಾಕುಂಭ ಮೇಳವು ಯಾವಾಗಲೂ ನಂಬಿಕೆ ಮತ್ತು ಭಕ್ತಿಯ ಸಂಕೇತವಾಗಿದೆ. ಪ್ರತಿ ಬಾರಿ ಲಕ್ಷಾಂತರ ಭಕ್ತರು ಗಂಗಾ ನದಿಯಲ್ಲಿ ಸ್ನಾನ ಮಾಡುವ ಮೂಲಕ ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡುತ್ತಾರೆ. ಏತನ್ಮಧ್ಯೆ, ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ  ಅವರು ಮಹಾ ಕುಂಭದಲ್ಲಿ ಭಾಗವಹಿಸಿ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಆದರೆ ಈ ಫೋಟೋಗಳು ನಿಜವಾದ ಫೋಟೋಗಳಲ್ಲ, ಇವುಗಳನ್ನು AI ಮೂಲಕ ರಚಿಸಲಾಗಿದೆ.ಈ ಫೋಟೋ ಗಳಲ್ಲಿ ವಿರಾಟ್ ಮತ್ತು ಅನುಷ್ಕಾ ಮಹಾಕುಂಭವನ್ನು ತಲುಪಿರುವುದು ಕಂಡುಬರುತ್ತದೆ. ಇಬ್ಬರೂ ಸಾಂಪ್ರದಾಯಿಕ ಕೇಸರಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿರಾಟ್ ಕುರ್ತಾ-ಪೈಜಾಮ ಮತ್ತು ಅನುಷ್ಕಾ ಸಾಂಪ್ರದಾಯಿಕ ಆಭರಣಗಳೊಂದಿಗೆ ಕೇಸರಿ ಸೀರೆಯನ್ನು ಧರಿಸಿದ್ದಾರೆ. ಚಿತ್ರಗಳಲ್ಲಿ, ದಂಪತಿಗಳು ಗಂಗಾ ಘಾಟ್‌ನಲ್ಲಿ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: VI ನಿಂದ ಹೊಸ ಆಫರ್ - ಮಹಾ ಕುಂಭ ಮೇಳದ ನೇರ ದರ್ಶನ!

ವಿರಾಟ್ ಮತ್ತು ಅನುಷ್ಕಾ ಯಾವಾಗಲೂ ಭಾರತೀಯ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಆಚರಣೆಗಳನ್ನು ಚಾಚು ತಪ್ಪದೆ ಪಾಲಿಸುತ್ತಾರೆ.ಯಾವುದೇ ಹಬ್ಬಗಳಿರಲಿ ಅಥವಾ ಧಾರ್ಮಿಕ ಕಾರ್ಯಕ್ರಮಗಳಿರಲಿ, ಇಬ್ಬರೂ ಆಗಾಗ್ಗೆ ಆ ಸಂದರ್ಭಗಳಲ್ಲಿ ಹಾಜರಾಗುತ್ತಾರೆ.ಇತ್ತೀಚಿಗಷ್ಟೇ ಅವರು ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಅವರೊಂದಿಗೆ ವೃಂದಾವನದಲ್ಲಿರುವ ಪ್ರೇಮಾನಂದ ಜಿ ಮಹಾರಾಜ್ ಅವರ ಆಶ್ರಮಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಅವರು ಮಹಾರಾಜ್ ಜಿಯವರಿಂದ ಆಶೀರ್ವಾದ ಪಡೆದಿದ್ದರು.

ಈ ಹಿಂದೆ ನೈನಿತಾಲ್‌ನಲ್ಲಿರುವ ನೀಮ್ ಕರೋಲಿ ಬಾಬಾ ಅವರ ಆಶ್ರಮದಲ್ಲಿ ವಿರಾಟ್ ಮತ್ತು ಅನುಷ್ಕಾ ಕೂಡ ಕಾಣಿಸಿಕೊಂಡಿದ್ದರು. ಇದಲ್ಲದೆ, ಇಬ್ಬರೂ ಇಸ್ಕಾನ್ ದೇವಸ್ಥಾನದಲ್ಲಿ ಭಜನೆ-ಕೀರ್ತನೆ ಮಾಡಿದ್ದಾರೆ.ಇನ್ನು  ಕ್ರಿಕೆಟ್ ವಿಚಾರಕ್ಕೆ ಬರುವುದಾದರೆ ವಿರಾಟ್ ಶೀಘ್ರದಲ್ಲೇ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ . ಇದರ ನಂತರ ಅವರು ಫೆಬ್ರವರಿ 19 ರಿಂದ ಪಾಕಿಸ್ತಾನ ಮತ್ತು ಯುಎಇಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News